Your Cart

Need help? Call +91 9535015489

📖 Print books shipping available only in India. ✈ Flat rate shipping

ರಾಜಕೀಯ ಅರ್ಥಶಾಸ್ತ್ರದ ವಿಮರ್ಶೆಗೊಂದು ಕೊಡುಗೆ

Karl Marx
$1.63

Product details

Author

Karl Marx

Translator

Shanabhag C R

Publisher

Nava Karnataka

Book Format

Ebook

Language

Kannada

Pages

256

Year Published

2021

Category

Critical Book

ಸಮಾಜದಲ್ಲಿ ಇಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ವ್ಯಕ್ತಿಗಳ ನಡುವೆ, ಗುಂಪುಗಳ ನಡುವೆ ಹಾಗೂ ಸಮೂಹಗಳ ನಡುವೆ ಸಂಪರ್ಕ ಹಾಗೂ ಸಂಬಂಧ ಏರ್ಪಡುತ್ತದೆ. ಇದನ್ನು ಯಾಂತ್ರಿಕವಾಗಿ ಸಾಮಾಜಿಕ ಸಂಬಂಧ ಎನ್ನುತ್ತಾರೆ. ಈ ಸಂಬಂಧ ಏರ್ಪಡಲು ಅತ್ಯಂತ ಮೂಲಭೂತವಾದ ಕಾರಣ ಯಾವುದು? ಬಹಳ ಮುಖ್ಯವಾದ ಒಂದು ಕಾರಣದಿಂದ ಈ ಸಂಪರ್ಕ ಹಾಗೂ ಸಂಬಂಧ ಏರ್ಪಡುತ್ತದೆ. ಅದು ಯಾವುದು ಎಂದರೆ, ಸರಕನ್ನು ಉತ್ಪಾದನೆ ಮಾಡುವ-ಮಾಡಿಸುವ ಸಲುವಾಗಿ; ಸರಕನ್ನು ಬಳಕೆ ಮಾಡುವ-ಮಾಡಿಸುವ ಸಲುವಾಗಿ; ಸರಕನ್ನು ವಿತರಣೆ ಮಾಡುವ-ಮಾಡಿಸುವ ಸಲುವಾಗಿ ಮತ್ತು ಸರಕನ್ನು ವಿನಿಮಯ ಮಾಡುವ-ಮಾಡಿಸುವ ಸಲುವಾಗಿ. ಅಂದರೆ ಸರಕಿನ ಉತ್ಪಾದನೆ ಮತ್ತು ಬಳಕೆಯ ಕಾರಣಕ್ಕಾಗಿಯೇ ಸಾಮಾಜಿಕ ಸಂಬಂಧಗಳು ಏರ್ಪಡುತ್ತವೆ. ಇದು ಸಮಾಜ ರಚನೆಯ ಅತ್ಯಂತ ಮುಖ್ಯವಾದ ಬೀಜರೂಪಿ ಕಾರಣ. ಇದನ್ನು ಸರಿಯಾದ ವಿಧಾನದಲ್ಲಿ ಅರ್ಥಮಾಡಿಕೊಂಡರೆ ಆಗ ಇಡೀ ಸಮಾಜದ ದೇಹ, ದೇಹದ ಇತರೆ ಅಂಗಗಳು ಹಾಗೂ ಅದರ ಭಾವ, ಭಾವದ ಇತರೆ ಸ್ತರಗಳು ಇವು ಅರ್ಥವಾಗುತ್ತವೆ. ಆಗ ಸಮಾಜದ ಅಧ್ಯಯನ ಸಮಗ್ರವಾಗುತ್ತದೆ; ಪೂರ್ಣವಾಗುತ್ತದೆ. ಈ ಅಂಶವನ್ನು ಕಾರ್ಲ್ ಮಾರ್ಕ್ಸ್ ಅವರು ಈ ಮಹಾನ್ ಗ್ರಂಥದಲ್ಲಿ ಅತ್ಯಂತ ಖಚಿತವಾಗಿ ಅಧ್ಯಯನ ಮಾಡಿದ್ದಾರೆ, ಚರ್ಚಿಸಿದ್ದಾರೆ ಹಾಗೂ
ವ್ಯಾಖ್ಯಾನಿಸಿದ್ದಾರೆ.
-ಡಾ|| ಬಿ.ಎಂ.ಪುಟ್ಟಯ್ಯ