
ದಲಿತ ಸಾಹಿತ್ಯದ ಸೌಂದರ್ಯ ಪ್ರಜ್ಞೆ
$1.93 $1.55
Product details
Category | Essays |
---|---|
Translator | Dr. Vittalarao T. Gaikwad |
Publisher | Yaji Prakashana |
Language | Kannada |
ISBN | 978-93-83717-14-9 |
Book Format | Printbook |
ಡಾ. ಬಾಬಾಸಾಹೇಬ ಅಂಬೇಡಕರ ಅವರ ದಲಿತ ಚಿಂತನೆ ಜಾಗತಿಕವಾದ ವಿಶಾಲ ದೃಷ್ಟಿಕೋನದ ಮೇಲೆ ರೂಪುಗೊಂಡಿರುವಂತಹದ್ದು. ಅಮೆರಿಕಾದ ಬ್ಲಾಕ್ ಪ್ಯಾಂಥರ್ಸ್ ಚಳವಳಿ ಮತ್ತು ಚಿಂತನೆಗಳು, ಮಾರ್ಕ್ಸ್ ವಾದ, ಗೌತಮಬುದ್ಧನ ಚಿಂತನೆಗಳು ಬಾಬಾಸಾಹೇಬರ ಬಹಳ ಪ್ರೀತಿಯ ವಿಷಯಗಳಾಗಿದ್ದವು. ಆದರೆ ಅವುಗಳನ್ನು ಯಥಾವತ್ತಾಗಿ ಸ್ವೀಕರಿಸದೆ ಅವುಗಳನ್ನೆಲ್ಲ ಸುಸೂಕ್ಷ್ಮ ದೃಷ್ಟಿಕೋನದಿಂದ ಪರಿಶೀಲಿಸಿ ಸಮಕಾಲಿನ ಭಾರತದ ಶೋಷಿತ ಜನವರ್ಗಕ್ಕೆ ಬೇಕಾದ ಚಿಂತನೆಗಳನ್ನು ವಿಶಿಷ್ಟವಾಗಿ ನಮ್ಮ ಮುಂದೆ ಪ್ರಚುರಪಡಿಸಿದ ಚಿರಕಾಲದ ವಿಚಾರಗಳು ಬಾಬಾಸಾಹೇಬ ಅಂಬೇಡಕರ ಅವರದಾಗಿರುವುದು ಗಮನಾರ್ಹ.
ದಲಿತ ಸಾಹಿತ್ಯದ ಸೌಂದರ್ಯ ಚರ್ಚೆಯನ್ನು ಮಾಡುವುದೆಂದರೆ ದಲಿತ ಸಾಹಿತ್ಯದ ನಿರ್ಮಿತಿ, ಹಿನ್ನೆಲೆ, ವ್ಯಾಖ್ಯಾನ, ವೈಶಿಷ್ಟ್ಯಗಳು, ಪ್ರೇರಣೆ, ಪ್ರವೃತ್ತಿ, ಸ್ವರೂಪ ಮತ್ತು ಪ್ರಯೋಜನ ಇವುಗಳ ಸಂದರ್ಭವಾಗಿ ವಿಚಾರ ಮಾಡುವುದು ಆವಶ್ಯಕ ಎನಿಸುತ್ತದೆ. ಇಂತಹ ವಿಚಾರಗಳು ದಲಿತ ಸಾಹಿತ್ಯದ ಆರಂಭ ಕಾಲದಿಂದಲೂ ಆಗುತ್ತಲೇ ಬಂದಿವೆ. ಇಂತಹ ಚರ್ಚೆಗಳನ್ನು ಹೊಸದಾಗಿ ಆರಂಭಿಸುವುದಕ್ಕಿಂತಲೂ ದಲಿತ ಸಾಹಿತ್ಯದ ವಿಷಯವಾಗಿ ಇಂದಿನವರೆಗೆ ಮಂಡಿಸಿರುವ ವಿಮರ್ಶೆಗಳ ವಿಚಾರಗಳನ್ನು ಅಧ್ಯಯನ ಮಾಡಿ ಅದರ ಸೂಕ್ಷ್ಮ ಪರಿಶೀಲನೆ ಮಾಡದೆ ಹೋದರೆ, ನಮಗೆ ಮುಂದೆ ಹೋಗುವುದಕ್ಕೆ ಸಾಧ್ಯವಾಗುವುದೇ ಇಲ್ಲ. ಎಂತಲೇ ಸಂಪೂರ್ಣ ದಲಿತ ಸಾಹಿತ್ಯವನ್ನು ವಿಮರ್ಶೆ ಮಾಡುವುದು ಅತ್ಯವಶ್ಯವಾಗಿದೆ.
Customers also liked...
-
H. S. Venkateshamurthy
$2.42$1.45 -
Sharath H.K
$0.36$0.22 -
Ra.Shi.
$1.03$0.62 -
Shyamsundara Bidarakundi
$1.63$0.98 -
Giraddi Govindaraj
$1.21$0.73 -
Shrinivas Vaidya
$1.81$1.09