
ಹಾಲುಮತ ಸಂಸ್ಕೃತಿ-೨
F.T. Hallikeri$2.42 $1.93
Product details
Book Format | Printbook |
---|---|
Author | F.T. Hallikeri |
Category | Essays |
Language | Kannada |
Publisher | Yaji Prakashana |
Pages | 216 |
Year Published | 2019 |
ಕುರುಬ ಸಮಾಜ ಸಾಹಿತ್ಯ ಸಂಸ್ಕೃತಿ ಬಗ್ಗೆ ನಾನು ಕಳೆದ ಒಂಭತ್ತು ವರ್ಷ(೨೦೧೧-೨೦೧೯)ಗಳಲ್ಲಿ ವಿಚಾರ ಸಂಕಿರಣಗಳಲ್ಲಿ ಮಂಡಿಸಿದ, ವಿವಿಧ ನಿಯತಕಾಲಿಕಗಳಲ್ಲಿ ಪ್ರಕಟಿಸಿದ ಸಂಶೋಧನ ಸಂಪ್ರಬಂಧಗಳ ಸಂಕಲನವಾಗಿದೆ, ಹಾಲುಮತ ಸಂಸ್ಕೃತಿ ೨. ಕಳೆದ ಎರಡು ದಶಕಗಳಲ್ಲಿ ಕರ್ನಾಟಕದ ವಿವಿಧ ಜನಸಮುದಾಯಗಳ ಅಸ್ಮಿತೆಯ ಬಗ್ಗೆ ವಿವಿಧ ಆಯಾಮಗಳಿಂದ ಸಂಶೋಧನೆಗಳು ನಡೆಯುತ್ತಿವೆ. ಈ ಸಂಶೋಧನೆಗಳು ಜನಸಮುದಾಯಗಳ ಪರಂಪರೆ ಮತ್ತು ಸಂಸ್ಕೃತಿಯನ್ನು ಅರಿತುಕೊಳ್ಳಲು ಸಹಾಯಕಾರಿ ಯಾಗುತ್ತಲಿವೆ. ಅಷ್ಟೇ ಏಕೆ, ಸಮುದಾಯಗಳು ಸರಿಯಾದ ಹಾದಿಯಲ್ಲಿ ಮುನ್ನಡೆಯಲೂ ಕಾರಣವಾಗುತ್ತಲಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಬಹುದೊಡ್ಡ ಜನಸಮುದಾಯಗಳಲ್ಲಿ ಒಂದಾದ ಕುರುಬ ಸಮಾಜದ ಬಗ್ಗೆ ಕಳೆದ ಹದಿನೈದು ವರ್ಷಗಳಿಂದ ವಿಸ್ತೃತವಾದ ಅಧ್ಯಯನಗಳು ನಡೆಯುತ್ತಲಿವೆ. ಕಳೆದ ಶತಮಾನದಲ್ಲಿ ವಿ.ಆರ್.ಹನುಮಂತಯ್ಯ, ಶಂಬಾ ಜೋಷಿ, ಶಿವಾನಂದ ಗುಬ್ಬಣ್ಣವರ ಮೊದಲಾದ ವಿದ್ವಾಂಸರು ಕರ್ನಾಟಕದ ಕುರುಬ ಸಮುದಾಯದ ಬಗ್ಗೆ ವಿವಿಧ ನೆಲೆಗಳಿಂದ ಅಧ್ಯಯನ ಮಾಡಿರುವುದುಂಟು.
೨೦೦೪ರಲ್ಲಿ ತಗರ ಪವಾಡ ಮತ್ತು ಸಿದ್ಧಮಂಕ ಚರಿತೆ ಕೃತಿಗಳು ಪ್ರಕಟವಾದ ನಂತರದಲ್ಲಿ ಈ ಸಮುದಾಯದ ಅಧ್ಯಯನ ವಿಸ್ತಾರವಾಗುತ್ತ ಬಂದಿತು.
Customers also liked...
-
Mallikarjun Hiremath
$1.15$0.69 -
H. S. Venkateshamurthy
$2.42$1.45 -
Kirtinath Kurtkoti
$1.09$0.65 -
Sharath H.K
$0.36$0.22 -
Narahalli Balasubrahmanya
$1.21$0.73 -
Shrinivas Vaidya
$1.81$1.09