ವೃತ್ತಪತ್ರಿಕೆ ಎಂಬ ಹರಿವ ನೀರಿನಲ್ಲಿ ಲೇಖಕಿ ವೈದೇಹಿ ಅವರು ಕಾಲಕಾಲಕ್ಕೆ ತೇಲಬಿಟ್ಟ ಸ್ಪಂದನಗಳು ಈ ಪುಸ್ತಕದಲ್ಲಿ ಸಂಕಲನಗೊಂಡಿವೆ. ಹಾಗಂತ ಈ ಲೇಖನಗಳು ಬರಹಗಾರರೊಬ್ಬರು ತಮ್ಮ ಮನೋವಿಲಾಸದ ಫಲವಾಗಿ ಹರಿಯಬಿಟ್ಟ ಕಾಗದದ ದೋಣಿಗಳಲ್ಲ; ಕಾರಣ, ಈ ಎಲ್ಲ ಬರಹಗಳೂ ಸಮಕಾಲೀನ ಜಗತ್ತಿನೊಡನೆ ನಡೆಸಿದ ಮೆಲುಸಂವಾದಗಳು. ಕೆಲವೊಮ್ಮೆ ಇವು ನೇರವಾಗಿ ವಾಸ್ತವವನ್ನು ಎದುರಿಗಿಟ್ಟುಕೊಂಡು ಮಾತಾಡುವ ವಿಶ್ಲೇಷಕ ಪ್ರಜ್ಞೆಯ ಅನುಕೃತಿಗಳಾದರೆ, ಕೆಲವೊಮ್ಮೆ ಸಾಧಾರಣವೆಂದು ಕಾಣಬಹುದಾದ ಏನನ್ನೋ ಧ್ಯಾನಿಸುತ್ತ ಅದರೊಳಗಿನಿಂದಲೇ ಮಹತ್ತ್ವದ ಮತ್ತೊಂದನ್ನು ಧ್ವನಿಸುವ ಪ್ರತಿಕೃತಿಗಳು. ಆದರೆ ಬರಹದ ವಸ್ತು-ವಿಧಾನ-ಸಂವಿಧಾನ ಹೇಗೇ ಇರಲಿ, ಇವೆಲ್ಲವುಗಳ ಹಿಂದೆ ಈಗಾಗಲೇ ತಮ್ಮ ಬರಹಗಳಿಂದ ತಮ್ಮದೇ ತಮ್ಮತನವೊಂದನ್ನು ಕಂಡುಕೊಂಡಿರುವ ಬರಹಗಾರ್ತಿಯೊಬ್ಬರ ಕಸುವು ಇದೆ; ಬದುಕನ್ನು ನೋಡುವ ಒಂದು ಹೊಸ ಬಗೆಯ ಕಣ್ಣು ಈ ಬರಹಗಳ ಹಿಂದಿದೆ. ಹರಿವ ನೀರನ್ನು ನಿಂತು ನೋಡುವ ವ್ಯವಧಾನ ಇರುವ ಎಲ್ಲರೊಡನೆಯೂ ಸಂವಾದ ನಡೆಸಬಲ್ಲ ಪುಸ್ತಕ ಇದು.

Additional information

Category

Author

Publisher

Language

Kannada

Book Format

Ebook

Pages

120

Year Published

2012

Reviews

There are no reviews yet.

Only logged in customers who have purchased this product may leave a review.