Ebook

ಹಿಂದು ಧರ್ಮ : ಹಿಂದು-ಇಂದು

Author: Nadakarni M V

$12.00

ಎರಡು ಭಾಗಗಳಲ್ಲಿ ಈ ಪುಸ್ತಕವು ಗ್ರಥಿತವಾಗಿದೆ. ಮೊದಲ ಭಾಗದಲ್ಲಿ ಯಾವುದು ಹಿಂದು ಧರ್ಮ ಮತ್ತು ಯಾವುದಲ್ಲವೆಂಬುದನ್ನು ವಿವರಿಸಿದೆ. ಯಾವುದೇ ಧರ್ಮಕ್ಕೆ ಮೂರು ಅಂಗಗಳಿರುತ್ತವೆ – ಪರತತ್ತ್ವ ವಿಚಾರ, ನೀತಿ ಅಥವಾ ಚಾರಿತ್ರ್ಯ ಬೋಧನೆ, ಮತ್ತು ಸಾಧನೆ. ಹಿಂದು ಧರ್ಮದ ಈ ಮೂರು ಅಂಶಗಳನ್ನು ವಿವರಿಸಿ, ಧರ್ಮದ ಭಾಗಗಳಾಗಿಲ್ಲದಿದ್ದರೂ ಭಾಗಗಳೆಂದೇ ಭ್ರಮೆಪಟ್ಟ ಅಂಶಗಳನ್ನೂ ಇಲ್ಲಿ ತೋರಿಸಿಕೊಟ್ಟಿದೆ. ಬ್ರಾಹ್ಮಣ ಧರ್ಮವೇ ಹಿಂದು ಧರ್ಮ, ಅಥವಾ ಜಾತಿಪದ್ಧತಿ ಹಿಂದು ಧರ್ಮದ ಜೀವಾಳ ಇಂತಹ ತಪ್ಪು ಕಲ್ಪನೆಗಳನ್ನು ಮೊದಲ ಭಾಗದಲ್ಲಿ ಖಂಡಿಸಿದೆ.
ಪುಸ್ತಕದ ಎರಡನೆಯ ಭಾಗದಲ್ಲಿ ಹಿಂದು ಧರ್ಮದ ಚಲನಶೀಲತೆಯ ಅಥವಾ ಇತಿಹಾಸದ ಪರಿಚಯವಿದೆ. ಹಿಂದು ಧರ್ಮದ ಐತಿಹಾಸಿಕ ಬೆಳವಣಿಗೆಯಲ್ಲಿ ಐದು ಘಟ್ಟಗಳನ್ನು ಗುರುತಿಸಬಹುದು. ವೇದಪೂರ್ವ ಮತ್ತು ವೇದಗಳ ಕಾಲ ಮೊದಲ ಘಟ್ಟ. ಹಿಂದು ಧರ್ಮದ ಆರಂಭವನ್ನು ಸಿಂಧು ಕಣಿವೆಯ ನಾಗರಿಕತೆಯಲ್ಲಿ ಕಾಣಬಹುದು. ಈ ನಾಗರಿಕತೆ ೪ ಸಾವಿರ ವರ್ಷಗಳಿಗೂ ಹಿಂದೆ ಚಿಗುರೊಡೆದು ಕ್ರಿ.ಪೂ. ೨೩೦೦ರಿಂದ ೨೦೦೦ ಕಾಲದಲ್ಲಿ ಶಿಖರವನ್ನು ತಲುಪಿತು. ಇದರ ಲಿಪಿಯನ್ನು ಇನ್ನೂ ಓದಲಿಕ್ಕಾಗಿಲ್ಲ. ಆದರೆ ಉತ್ಖನನದಲ್ಲಿ ಸಿಕ್ಕ ಅನೇಕ ಮುದ್ರೆಗಳಿಂದ ಆ ಜನರ ಧರ್ಮದ ಬಗ್ಗೆ ಸ್ವಲ್ಪ ಅನುಮಾನವನ್ನು ಹಚ್ಚಬಹುದು.

Additional information

Author

Publisher

Book Format

Ebook

Language

Kannada

Category

Reviews

There are no reviews yet.

Only logged in customers who have purchased this product may leave a review.