Your Cart

Need help? Call +91 9535015489

📖 Print books shipping available only in India. ✈ Flat rate shipping

ಮಹಾತ್ಮಾ ಗಾಂಧೀಜಿ ಮತ್ತು ಸಾಮಾಜಿಕ ನ್ಯಾಯ

B.G. Nandan
$3.63

Product details

Category

Essays

Author

B.G. Nandan

Publisher

Suvvi Publication

Language

Kannada

ISBN

978-81-935347-4-8

Book Format

Ebook

ದಕ್ಷಿಣ ಆಫ್ರಿಕಾದಿಂದ ಜನಾಂಗೀಯ ನ್ಯಾಯಕ್ಕಾಗಿ ಹೋರಾಡಿ ಬಂದ ಗಾಂಧೀಜಿಯವರಿಗೊಂದು ಭಾರತದಲ್ಲಿ ಹೋರಾಡಲು ಪೂರ್ವತರಬೇತಿ ಯಾಗಿತ್ತೆಂದರೆ ತಪ್ಪಾಗಲೆಕ್ಕಿಲ್ಲ. ಗಾಂಧೀಜಿಯವರಿಗೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಎರಡು ಅಂಶಗಳು ಎದ್ದು ಕಾಣುತ್ತವೆ. ಒಂದನೆಯದ್ದಾಗಿ ಬ್ರಿಟೀಷರಿಂದ ಭಾರತವನ್ನು ಮುಕ್ತಗೊಳಿಸುವುದಾಗಿತ್ತು. ಎರಡನೆಯದ್ದಾಗಿ ಅವರ ಹೋರಾಟವು ಭಾರತದ ಸ್ವಾತಂತ್ರ್ಯದ ಜೊತೆಗೆ ಭಾರತದಲ್ಲಿ ವಾಸಿಸುವ ಬಹು ಸಂಖ್ಯಾತಜನರನ್ನು ಭಾರತೀಯರಿಂದ ಮುಕ್ತಗೊಳಿಸುವದಾಗಿತ್ತು. ಈ ಎರಡು ಪ್ರಾಪ್ತಿಗಾಗಿ ಗಾಂಧೀಜಿಯವರು ಹಮ್ಮಿಕೊಂಡದ್ದು, ಬೌತಿಕ ಶುದ್ಧೀಕರಣ ಮತ್ತು ಭಾವನಾತ್ಮಕ ಶುದ್ಧೀಕರಣ. ಆದರೆ ಇವೆರಡು ಶುದ್ಧೀಕರಣಗಳಲ್ಲಿ ಗಾಂಧೀಜಿ ಯವರಿಗೆ ಭಾವನಾತ್ಮಕ ಶುದ್ಧೀಕರಣವೇ ಮುಖ್ಯವಾಗಿತ್ತು. ಗಾಂಧೀಜಿಯವರು ಅರ್ಥೈಸಿಕೊಂಡಿದ್ದೇನೆಂದರೆ ಮಾನವನ ಬಾಹ್ಯವರ್ತನೆಗಳು ಆಂತರಿಕವಾಗಿ ಅಂತರ್ಗತಗೊಂಡ ಸುಪ್ತ ಭಾವನೆಗಳ ಅಭಿವ್ಯಕ್ತ ಪ್ರತಿರೂಪವಾಗಿರುತ್ತವೆಂಬುದಾಗಿತ್ತು. ಹಾಗಾಗಿ ಮಾನವನ ನಿಜವಾದ ಸುಧಾರಣೆಯಂದರೆ ಅವನ ಅಂತರಿಕ ಕೊಳೆಯನ್ನು ತೊಳೆಯುವದಾಗಿತ್ತು. ಹಾಗಾಗಿಯೇ ಮಹಾತ್ಮಾ ಗಾಂಧೀಜಿಯವರನ್ನು ಒಬ್ಬ ಧಾರ್ಮಿಕ ಅಧ್ಯಾತ್ಮಿಕ ಆದರ್ಶವಾದಿಯನ್ನುವುದು.