Your Cart

Need help? Call +91 9535015489

📖 Print books shipping available only in India. ✈ Flat rate shipping

ಮಲಯಾಳ ಸಮಾಜ ಮತ್ತು ಸಂಸ್ಕೃತಿ

Mohan Kuntar
$1.45

Product details

Category

Essays

Author

Mohan Kuntar

Publisher

Yaji Prakashana

Language

Kannada

ISBN

978-93-83717-29-3

Book Format

Ebook

ಮಲಯಾಳ ಸಮಾಜ ಮತ್ತು ಸಂಸ್ಕೃತಿ :

ಪ್ರಗತಿಪರ ಆಶಯವೇ ಮಲಯಾಳಂ ಸಾಹಿತ್ಯದ ಜೀವಾಳ. ಪ್ರಗತಿಪರ ಎಂಬುದು ಪ್ರತಿಭಟನೆಯ ಸ್ವರೂಪದಲ್ಲಿ ಸಿಟ್ಟಿನ ಅಭಿವ್ಯಕ್ತಿಯಾಗಿ ಹೊರಹೊಮ್ಮದಿರಬಹುದು. ಆದರೆ ಮಲಯಾಳಂ ಸಾಹಿತ್ಯದಲ್ಲಿ ಬಂಡಾಯದ ಆಶಯವಿದೆ; ಆಕ್ರೋಶವಿಲ್ಲ. ಭಾಷೆ, ಸಂಪ್ರದಾಯ, ಪ್ರಭುತ್ವ, ಜಾತಿ, ಶೋಷಣೆಗಳ ವಿರುದ್ಧ ಮಲಯಾಳಂ ಬರಹಗಾರರು ಬರವಣಿಗೆಗಳ ಮೂಲಕವೇ ತಮ್ಮ ಅಸಹನೆಯನ್ನು ಎಲ್ಲ ಕಾಲಗಳಲ್ಲೂ ಪ್ರಕಟಿಸುತ್ತಾ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಬಂಡಾಯ ಎಂಬುದು ಒಂದು ಮನೋಧರ್ಮವಾಗಿ ಮಲಯಾಳಂ ಸಾಹಿತ್ಯದಲ್ಲಿ ದಾಖಲಾಗುತ್ತಲೇ ಬಂದಿದೆ.
ಮಲಯಾಳಂ ಸಾಹಿತ್ಯ ಕಲಾತ್ಮಕವಾಗಿದೆ, ಜೊತೆಗೆ ಸಮಾಜಮುಖಿಯೂ ಆಗಿದೆ. ಆದರೆ ಮಲಯಾಳಂನಲ್ಲಿ ಬರವಣಿಗೆಯ ಮೂಲಕ ಸಾಮಾಜಿಕ ಹೋರಾಟಕ್ಕೆ ಬರಹಗಾರರು ಧುಮುಕಲಿಲ್ಲ. ಸಮಾಜ ಸುಧಾರಣೆಯ ಚಳುವಳಿಗಳು, ಹೋರಾಟಗಳಿಗಾಗಿ ಮಲಯಾಳಿ ಗರಿಗೆ ರಾಜಕೀಯ ವೇದಿಕೆಗಳಿವೆ. ರಾಜಕೀಯ ಪಕ್ಷ, ಸಂಘಟನೆಗಳ ಮೂಲಕ ಕ್ರಿಯಾಶೀಲ ವಾಗಿ ತಮಗೆ ಬೇಕಾದುದನ್ನು ಪಡೆದುಕೊಳ್ಳುವ, ಬೇಡವಾದುದರ ವಿರುದ್ಧ ಪ್ರತಿಭಟಿಸುವ ಜಾಗೃತ ಮನಸ್ಥಿತಿ ಸದಾ ಮಲಯಾಳಿಗರದ್ದಾಗಿದೆ.