Ebook

ತೇಲಿ ಬಂದ ಎಲೆಗಳು

Original price was: $0.72.Current price is: $0.43.

ತೇಲಿ ಬಂದ ಎಲೆಗಳು
ದಿ. ಪಡುಕೋಣೆ ರಮಾನಂದರಾಯರ ‘ಹುಚ್ಚು ಬೆಳುದಿಂಗಳಿನ ಹೂಬಾಣಗಳು’ ಗ್ರಂಥಮಾಲೆಯ ಹಳೆಯ ಚಂದಾದಾರರಿಗೆ ಬಹಳ ಮೆಚ್ಚುಗೆಯಾದ ಕೃತಿ. ಅವರು ತಮ್ಮ ವೃದ್ಧಾಪ್ಯದಲ್ಲಿ ತಮ್ಮ ಮಗ-ಪ್ರಭಾಶಂಕರ-ಅವರ ಹತ್ತಿರವೇ ಇರುತ್ತಿದ್ದರು. ಮುಂಬಯಿ ಹಾಗೂ ಬೆಂಗಳೂರಲ್ಲಿ ವಾಸವಾಗಿದ್ದರು. ಆ ಕಾಲದಲ್ಲಿ ತಮ್ಮ ಸಂಪರ್ಕಕ್ಕೆ  ಬಂದ ಲೇಖಕರ ಹಾಗೂ ಇತರ ಕಲಾವಿದರ ಜೊತೆಗಿನ ಅನುಭವಗಳನ್ನು ಬರೆದು ಇಟ್ಟಿದ್ದರು, ಅದನ್ನು ನಮಗೆ ಕಳಿಸುವ ಮೊದಲೇ ಅವರು ತೀರಿಕೊಂಡರು. ಅವರ ಮಗ-ಮಹೇಶ ಪಿ. ಪಡುಕೋಣೆಯವರು-ತಂದೆಯವರ ಹಸ್ತಪ್ರತಿಯನ್ನು ಶ್ರೀ ಜಯಂತ ಕಾಯ್ಕಿಣಿಯವರ ಮುಖಾಂತರ ಕಳುಹಿಸಿ, ಪ್ರಕಟಿಸಲು ಸಾಧ್ಯವೇ? ಎಂದು ಕೇಳಿದರು. ಗ್ರಂಥಮಾಲೆಯ ಚಂದಾದಾರರಿಗೆ ಈ ಕೃತಿಯನ್ನು ನೀಡಲು ಅತ್ಯಂತ  ಸಂತೋಷವೆನಿಸುತ್ತದೆ.

ಜೀವನದ ಈ ಸಂಧ್ಯಾಕಾಲದಲ್ಲಿ ನನ್ನ ಕಾಲಪಥದಲ್ಲಿ ನಾನು ನಡೆಯುತ್ತಾ ಇದ್ದಾಗ ಸಂಧಿಸಿದ ವ್ಯಕ್ತಿಗಳ, ಆಗಿ ಹೋದ ಘಟನೆಗಳ ನೆನಪುಗಳು ಮರಳಿ ಬರುತ್ತವೆ. ನಾನು ಸತ್ತ ಮೇಲೆ ಇವೂ ನನ್ನೊಡನೆ ಸಾಯುತ್ತವೆ. ಅವು ಹಾಗಾಗದಂತೆ, ಬರೆದಿಟ್ಟರೆ ಅವು ಇತರರಿಗೆ ಇಷ್ಟವಾಗಬಹುದು ಎಂಬ ಭಾವನೆಯಿಂದ ಈ ನೆನಪುಗಳನ್ನು ದಾಖಲೆ ಮಾಡುತ್ತಿದ್ದೇನೆ.
– ಪಡುಕೋಣೆ ಪ್ರಭಾಶಂಕರ

Additional information

Category

Author

Publisher

Language

Kannada

Book Format

Ebook

Year Published

2016

Reviews

There are no reviews yet.

Only logged in customers who have purchased this product may leave a review.