
ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು
N.P. Shankaranarayana Rao$3.33 $2.99
Product details
Category | History |
---|---|
Author | N.P. Shankaranarayana Rao |
Publisher | Nava Karnataka |
Book Format | Ebook |
Pages | 492 |
Language | Kannada |
ಎನ್. ಪಿ. ಶಂಕರನಾರಾಯಣ ರಾವ್ ಇವರ “ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು” ಈ ಕಾಲಕ್ಕೆ ಬಹಳ ಪ್ರಸ್ತುತ ಕೃತಿ. ಯಾಕೆಂದರೆ ನಮ್ಮ ದೇಶ ಇಂದು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರಗಳನ್ನು ಅರಸುವಾಗ, ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಂತರ್ಗತವಾಗಿದ್ದ ಹಲವು ಪ್ರವೃತ್ತಿಗಳ ಮತ್ತು ಪ್ರಕ್ರಿಯೆಗಳ ಪರಿಚಯ ನಮಗೆ ಅಗತ್ಯವಾಗುತ್ತದೆ. ಪ್ರಸ್ತುತ ಕೃತಿ ಅವುಗಳಿಗೆ ಬೆಳಕು ಚೆಲ್ಲುತ್ತದೆ.
ನಮ್ಮ ದೇಶದ ಸ್ವಾತಂತ್ರ್ಯ, ಏಕತೆ, ನೆಮ್ಮದಿ ಮತ್ತು ಪ್ರಗತಿಗಳನ್ನು ದುರ್ಬಲಗೊಳಿಸಲು ಹವಣಿಸುವ ಆಂತರಿಕ ಹಾಗೂ ಬಾಹ್ಯ ದುಷ್ಟಶಕ್ತಿಗಳೀಗ ಎಲ್ಲದಕ್ಕಿಂತ ಹೆಚ್ಚಾಗಿ ಕೋಮುವಾದೀ ತತ್ವ ಮತ್ತು ಕೋಮು ಸಂಘರ್ಷದ ಕಾರ್ಯತಂತ್ರಗಳನ್ನು ಬಳಕೆ ಮಾಡುತ್ತವೆ. ಸ್ವಾತಂತ್ರ್ಯಾಂದೋಲನವನ್ನು ದುರ್ಬಲಗೊಳಿಸಿದ್ದು, ಸ್ವಾತಂತ್ರ್ಯ ಪ್ರಾಪ್ತಿಯನ್ನು ವಿಳಂಬಗೊಳಿಸಿದ್ದು, ವಿಕೃತಗೊಳಿಸಿದ್ದು ಇದೇ ತತ್ವ, ಇದೇ ತಂತ್ರ. ಈ ತತ್ವ ಮತ್ತು ತಂತ್ರ ಬ್ರಿಟಿಷರ “ಒಡೆದು ಆಳುವ” ಸಾಮ್ರಾಜ್ಯಶಾಹೀ ನೀತಿಯ ವಿಷಫಲಗಳು.
“ಭಾರತ ತನ್ನ ದೀರ್ಘ ಇತಿಹಾಸದಲ್ಲಿ ಹಲವಾರು ಏಳುಬೀಳುಗಳನ್ನು ಕಂಡಿದೆ. ಹಲವು ಬಾರಿ ಪರರ ಧಾಳಿಗೆ, ಆಕ್ರಮಣಕ್ಕೆ ತುತ್ತಾಗಿದೆ. ಅಂತಹ ವಿಷಮ ಸಂದರ್ಭಗಳನ್ನೆಲ್ಲ ತಾಳ್ಮೆಯಿಂದ, ಆತ್ಮವಿಶ್ವಾಸದಿಂದ ಎದುರಿಸಿದೆ. ಭಾರತ ಆಕ್ರೋಶದಿಂದ ಬಿರಿಯುತ್ತಾ ಮೇಲೆದ್ದು ನಿಂತು ಹೋರಾಡುವುದಿಲ್ಲ. ತನ್ನ ಸಮಯಕ್ಕಾಗಿ ತಾಳ್ಮೆಯಿಂದ ಕಾದು ನಿಲ್ಲುತ್ತದೆ. ಈ ದೇಶ ತಗ್ಗಬಲ್ಲದು, ಬಗ್ಗಬಲ್ಲದು. ಆದರೆ ಮುರಿದು ಬೀಳುವುದಿಲ್ಲ. ಸಮಾಧಾನದಿಂದ ತನ್ನ ಅಂತಶ್ಚೈತನ್ಯವನ್ನು ಕೂಡಿಕೊಂಡು ಎದ್ದು ನಿಲ್ಲುತ್ತದೆ.” ನಿಜ. “ಸೂರ್ಯ ಮುಳುಗದ ಸಾಮ್ರಾಜ್ಯ”ದ ಅವಸಾನದ ಆರಂಭವನ್ನು ಸೂಚಿಸಿದ ಭಾರತದ ಸ್ವಾತಂತ್ರ್ಯವಿಂದು, ಅದರ ಪರಿಪೂರ್ಣತೆಗೆ ಮತ್ತು ಫಲಪ್ರದತೆಗೆ ಮುಂದೆ ಸಾಗಬೇಕಾಗಿದೆ. ಈ ಮುಂದಿನ ಪಯಣವೂ ಯಶಸ್ವಿಯಾಗಿ ಗುರಿ ಮುಟ್ಟುತ್ತದೆಯೆಂಬ ವಿಶ್ವಾಸ ನಮಗಿದೆ. ಗೆಳೆಯ ಎನ್. ಪಿ. ಶಂಕರನಾರಾಯಣ ರಾವ್ ಅವರ “ಸ್ವಾತಂತ್ರ್ಯಗಂಗೆಯ ಸಾವಿರ ತೊರೆಗಳು” ಈ ಕಾರ್ಯದಲ್ಲಿ ಆಸಕ್ತಿ ಉಳ್ಳವರು ಓದಲೇಬೇಕಾದ ಪುಸ್ತಕವಾಗಿದೆ.
Customers also liked...
-
U.R. Ananthamurthy
$6.00 -
R K Shanubhog
$0.73$0.44 -
Girish Karnad
$0.97$0.58 -
Girish Karnad
$0.60$0.36 -
Akshara K V
$9.99 -
Akshara K V
$5.00