Your Cart

Need help? Call +91 9535015489

📖 Print books shipping available only in India. ✈ Flat rate shipping

ದಿನದಿನ ಅರೋಗ್ಯ ದಿನ!

Vinod G. Kulkarni
$0.87

Product details

Book Format

Printbook

Author

Vinod G. Kulkarni

Category

medical

Language

Kannada

Publisher

Sahitya Prakashana

ದಿನದಿನ ಅರೋಗ್ಯ ದಿನ!

ಹುಬ್ಬಳ್ಳಿಯ ‘ಮಾನಸ ಮನೋವೈದ್ಯಕೀಯ ಸಂಸ್ಥೆ’ಯ ರೂವಾರಿಗಳಾದ ಡಾ|| ವಿನೋದ. ಜಿ. ಕುಲಕರ್ಣಿ ನಾಡಿನ ಪ್ರಸಿದ್ಧ ಮನೋವೈದ್ಯಕೀಯ ತಜ್ಞರು. ಮುಂಬೈ ವಿಶ್ವವಿದ್ಯಾಲಯದಿಂದ ‘ಮನೋ ವಿಜ್ಞಾನ ಶಾಸ್ತ್ರ’ದಲ್ಲಿ ಎಂ.ಡಿ. ಪದವಿಯನ್ನು ಪಡೆದು ಕಳೆದು ನಾಲ್ಕು ದಶಕಗಳಿಂದಲೂ ‘ಮಾನಸಿಕ ರೋಗ ನಿವಾರಣಾ’ ವೃತ್ತಿಯಲ್ಲಿ ತೊಡಗಿಕೊಂಡು ಅಪಾರ ಜನಮನ್ನಣೆಯನ್ನು ಪಡೆದ ವೈದ್ಯರು.

ಧಾರವಾಡದ ಮಾನಸಿಕ ಅರೋಗ್ಯ ಸಂಸ್ಥೆಯ ನಿರ್ದೇಶಕರೂ, ಕರ್ನಾಟಕ ಮನೋವೈದ್ಯಕೀಯ ಸಂಘದ ಅಧ್ಯಕ್ಷರು ಆಗಿ ಕಾರ್ಯನಿರ್ವಹಿಸಿದ ಅನುಭವಗಳೊಂದಿಗೆ ಅವರ ವೈವಿಧ್ಯಮಯ ಸಾಂಸ್ಕೃತಿಕ- ಸಾಮಾಜಿಕ ಆಸಕ್ತಿಗಳೇ ಅವರ ವ್ಯಕ್ತಿತ್ವವನ್ನು ಬಿಂಬಿಸುವಂಥವು.

ಇತ್ತೀಚಿನ ಹಲವಾರು ವರ್ಷಗಳಲ್ಲಿ ಅವರ ‘ದಾಸವಾಣಿ’ ಕಾರ್ಯಕ್ರಮಗಳೂ ಜನಮೆಚ್ಚಿಕೆ ಗಳಿಸಿವೆ. ಎಲ್.ಎಲ್.ಬಿ ಯನ್ನೂ ಅಭ್ಯಸಿಸಿದ ಅವರು ಹುಬ್ಬಳ್ಳಿಯ ಬಾರ್ ಅಸೋಸಿಯೇಶನ್ ಸದಸ್ಯರೂ ಹೌದು.

ಅವರ ವೃತ್ತಿ ಅನುಭವ ಹಾಗೂ ಸಾಮಾಜಿಕ ಕಳಕಳಿಯ ಸಾಕಷ್ಟು ಲೇಖನಗಳೂ, ಕೃತಿಗಳೂ ಕನ್ನಡ ಹಾಗೂ ಇಂಗ್ಲಿಷ್ ನಲ್ಲಿ ಬಂದಿದೆ.