ಔಷಧಿ ಮತ್ತು ಸುಗಂಧ ಬೆಳೆಗಳನ್ನು ಮನೆಯಂಗಳದಲ್ಲಿ ಬೆಳೆಸುವ ಬಗ್ಗೆ ಆದಷ್ಟು ಸರಳವಾಗಿ, ಸುಲಭವಾಗಿ ಓದುಗರಿಗೆ ತಲುಪಿಸಲು ಪ್ರಯತ್ನಿಸಿದ್ದೇವೆ. ಬೇಸಾಯ ಪದ್ಧತಿಗಳು ಸಾಮಾನ್ಯವಾಗಿ ಎಕರೆ, ಹೆಕ್ಟೇರು ಲೆಕ್ಕದಲ್ಲೇ ಇರುವುದು ವಾಡಿಕೆ. ಆದರೆ ಶ್ರೀ ರಾಜಾರಾಮ್‌ರವರ ಆಶಯದಂತೆ 30’ x 40’ ನಿವೇಶನದಲ್ಲಿ ದೊರಕುವ ಸ್ಥಳಾವಕಾಶದಲ್ಲಿ ಮನೆಯಂಗಳಕ್ಕೆ ಸೂಕ್ತವಾದ ಬೆಳೆಗಳ ಬಗ್ಗೆ ವಿವರಗಳನ್ನು ನೀಡಲು ಪ್ರಯತ್ನ ಪಟ್ಟಿದ್ದೇವೆ.

ಅಮೃತ, ಗುಡೂಚಿ, ಕಾಡುಹಾಕು, ಕಾಶಿ ಮುಂತಾದ ಹೆಸರುಗಳಿಂದ ಕರೆಯುವ ಈ ಬಳ್ಳಿಯ ಉಪಯೋಗಗಳು ಹಲವು. ಗುಣದಲ್ಲಿ ಅಮೃತ ಸಮಾನ. ಆದರೆ ರುಚಿಯಲ್ಲಿ ಕಹಿ ಮತ್ತು ಒಗರು. ಅಮೃತಬಳ್ಳಿಯ ಉತ್ಪತ್ತಿ ಹೇಗಾಯಿತೆಂಬುದಕ್ಕೆ ಒಂದು ಕಥೆಯಿದೆ. ರಾವಣ ಕಾಮಾತುರನಾಗಿ ಬಲವಂತದಿಂದ ಸೀತೆಯನ್ನು ಲಂಕೆಗೆ ಹೊತ್ತೊಯ್ದದ್ದು, ನಂತರ ಶ್ರೀರಾಮಚಂದ್ರ ವಾನರ ಸೈನ್ಯದ ಸಹಾಯದಿಂದ ಲಂಕೆಗೆ ದಾಳಿಯಿಟ್ಟು ರಾವಣನನ್ನು ನಿರ್ನಾಮಗೊಳಿಸಿದ ಸಂಗತಿ ಎಲ್ಲರಿಗೂ ತಿಳಿದದ್ದೇ ಅಲ್ಲವೇ ? ದೇವತೆಗಳಿಗೆ ತೊಂದರೆ ನೀಡುತ್ತಿದ್ದ ರಾವಣ ಹತನಾಗಿದ್ದು ಕಂಡು ದೇವೇಂದ್ರನು ಸಂತಸಗೊಂಡು ಯುದ್ಧದಲ್ಲಿ ಗತಿಸಿದ್ದ ವಾನರರನ್ನು ಅಮೃತಧಾರೆ ಹರಿಸಿ ಬದುಕಿಸಿದ. ಅಮೃತಧಾರೆಯಿಂದ ಮತ್ತೆ ಸಜೀವರಾದ ವಾನರರ ದೇಹದಿಂದ ಅಮೃತದ ಬಿಂದುಗಳು ಎಲ್ಲೆಲ್ಲಿ ಬಿದ್ದಿದ್ದವೋ ಅಲ್ಲೆಲ್ಲ ಅಮೃತಬಳ್ಳಿ ಹುಟ್ಟಿಕೊಂಡಿತಂತೆ.

Additional information

Category

Author

,

Publisher

Book Format

Ebook

Pages

196

Language

Kannada

Reviews

There are no reviews yet.

Only logged in customers who have purchased this product may leave a review.