Your Cart

Need help? Call +91 9535015489

📖 Print books shipping available only in India. ✈ Flat rate shipping

ಅನಾಮದಾಸನ ಕಡತ

Hajari Prasad Dwivedi
$10.00

Product details

Author

Hajari Prasad Dwivedi

Translator

Ma Su Krishnamurthy

Publisher

Bahuvachana

Book Format

Ebook

Language

Kannada

Category

Novel

ರೈಕ್ವ ಮುನಿಯ ಕಥೆ ‘ಅನಾಮದಾಸ ಕಾ ಪೋಥಾ’ ಉಪನಿಷತ್ಕಾಲೀನ ಭಾರತದ ರತ್ನದರ್ಪಣ. ಆ ಕಾಲದ ಹಳ್ಳಿಗಳು, ಅರಣ್ಯಗಳು ಮತ್ತು ಆಶ್ರಮಗಳ ನಡುವೆ ವೈದಿಕ ಕರ್ಮಕಾಂಡಗಳು ಹಾಗೂ ಸ್ವತಂತ್ರ ವಿಚಾರಕರ ದ್ವಂದ್ವ ಹಾಗೂ ಮೇಳವನ್ನು ಇನ್ನಿಲ್ಲದಂತೆ ಇಲ್ಲಿ ಚಿತ್ರಿಸಲಾಗಿದೆ. ಈ ಕಾದಂಬರಿಯಲ್ಲಿ ಇತರ ಕಾದಂಬರಿಗಳಂತೆ ದ್ವಿವೇದಿಯವರು ಮಿಥಕಗಳನ್ನು ಆಶ್ರಯಿಸಿದ್ದಾರೆ. ಬಾಣ ಭಟ್ಟನ ಆತ್ಮಕಥೆಯಿಂದ ಹಿಡಿದು ರೈಕ್ವ ಆಖ್ಯಾನದವರೆಗೆ, ವೇದಶಾಸ್ತ್ರಗಳಿಂದ ಹಿಡಿದು ಮಿಥಕಗಳ ವ್ಯಾಖ್ಯೆಯವರೆಗೆ ಎಲ್ಲದರಲ್ಲಿಯೂ ಪರಮ ಹಾಗೂ ಚರಮವನ್ನು ಪಡೆಯುವ ಹಂಬಲವಿದೆ. ಅದಕ್ಕಾಗಿಯೇ ಕಥೆಯ ಹಾಸು ಹೊಕ್ಕು. ಬ್ರಾಹ್ಮಣ ರೈಕ್ವ ಶೂದ್ರ ರಾಜಕುಮಾರಿಯನ್ನು ಮದುವೆಯಾಗುತ್ತಾನೆ, ಅವನು ತನ್ನ ಪ್ರಿಯೆ ರಾಜಕುಮಾರಿ ಜಾಬಾಲಾಳ ನೆನಪಿನಲ್ಲಿ ತನ್ನ ಬೆನ್ನು ಕೆರೆದುಕೊಳ್ಳುತಿರುತ್ತಾನೆ; ಒಮ್ಮೆ ವಿನೋದದಿಂದಾದರೆ, ಮತ್ತೊಮ್ಮೆ ಅರ್ಧಸಾಧನಾವಸ್ಥೆಯಲ್ಲಿ. ಇಂಥ ಪಾತ್ರದೊಂದಿಗೆ ಓದುಗ ವಿಚಿತ್ರವಾದ ತನ್ಮಯತೆಯನ್ನು ಅನುಭವಿಸುತ್ತಾನೆ. ಇಡೀ ಕಾದಂಬರಿಯಲ್ಲಿ ಒಂದು ಅಂತರ್ಗೀತೆಯಿರುವಂತೆ ಕಾಣುತ್ತದೆ, ರೈಕ್ವನ ಈ ಕಡಿತ, ಕೆರೆತ ಅದರ ಶ್ರುತಿ. ಉಪನಿಷತ್ಕಾಲೀನ ಜೀವನದ ಈ ಸರಳ ಸುಂದರ ಚಿತ್ರಣದಲ್ಲಿ ಧರ್ಮವಿದೆ, ದರ್ಶನವಿದೆ, ಕಲೆಯಿದೆ. ಆದರೆ ಎಲ್ಲೂ ಅವು ಹೊರೆಯಾಗಿಲ್ಲ. ಹಿಂದೀ ಸಾಹಿತ್ಯದಲ್ಲಿ ಈ ಮೂವತ್ತು ವರ್ಷಗಳಲ್ಲಿ ಬಂದ ಶ್ರೇಷ್ಠ ಕಾದಂಬರಿಗಳಲ್ಲಿ ಒಂದೆಂದು ‘ಅನಾಮದಾಸನ ಕಡತ’ ಪರಿಗಣಿತವಾಗಿದೆ.