Your Cart

Need help? Call +91 9535015489

📖 Print books shipping available only in India. ✈ Flat rate shipping

ದಂಗೆ

Sarjoo Katkar
$1.31

Product details

Author

Sarjoo Katkar

Publisher

Yaji Prakashana

Book Format

Ebook

Language

Kannada

Pages

160

Year Published

2021

Category

Novel

ISBN

978-93-83717-52-1

ಸ್ವಾತಂತ್ರ್ಯಪೂರ್ವದಲ್ಲಿ ನಡೆದ ಐತಿಹಾಸಿಕ ವಿದ್ಯಮಾನಗಳು ಕೃತಿಯಲ್ಲಿವೆ. ಆದ್ದರಿಂದ ಇದು ಐತಿಹಾಸಿಕವು ಹೌದು, ಸ್ವಾತಂತ್ರ್ಯ ಹೋರಾಟದ ಕಥೆಯೂ ಹೌದು, ಜೊತೆಗೆ ಬ್ರಿಟೀಷರ ಅಧೀನದಲ್ಲಿದ್ದ ಚಿಕ್ಕಪುಟ್ಟ ಸಂಸ್ಥಾನಿಕರ ಆಡಳಿತದ ವೈಖರಿಯ ಚಿತ್ರಣವು ಹೌದು.
‘ದಂಗೆ’ಯಲ್ಲಿನ ಗೌರೀಪುರ ಸಂಸ್ಥಾನ. ಇಲ್ಲಿನ ಸಂಗ್ರಾಮಸಿಂಹ ಹೆಸರಿನ ಸಂಸ್ಥಾನಿಕ ಕ್ರೂರಿ, ಕಾಮ ಪಿಶಾಚಿ. ಹಂಬೀರ್ ಹೆಸರಿನ ಪೋಲಿಸ್ ಆಫೀಸರ್ ಸಹ ಪರಮ ನೀಚ ಮತ್ತು ತಲೆ ಹಿಡುಕ. ಇವರಿಬ್ಬರ ಚಿತ್ರಣ ಮೈನವಿರೇಳಿಸುವಂತಿದೆ. ಸೂರ್ಯವಂಶಿಯ ಕೊಲೆ ಮೂಲಕ ಕಥೆ ಆರಂಭವಾಗುತ್ತದೆ. ಇಲ್ಲಿ ದುಷ್ಟರು ಇರುವಂತೆ ಶಂಕರರಾವು ಹೆಸರಿನ ದಿವಾನ ಇದ್ದಾನೆ. ಈತ ಸಭ್ಯ ಮತ್ತು ಅಸಹಾಯಕ. ಈತನ ಪ್ರಯತ್ನದ ಫಲ ಗೆಳೆಯನ ಮಗ ವಸಂತ ಸರ್ಕಾರಿ ವೈದ್ಯನೆಂದು ಗೌರೀಪುರದಲ್ಲಿ ನೇಮಕವಾಗುತ್ತಾನೆ. ಈತ ವೈದ್ಯನಷ್ಟೆ ಅಲ್ಲ, ಪ್ರಗತಿಪರ ಚಿಂತಕ, ರಾಷ್ಟ್ರಪ್ರೇಮಿ. ವಸಂತ ಈ ಕಾದಂಬರಿಯ ನಾಯಕ. ಶಂಕರರಾವು ದಂಪತಿಗಳಿಗೆ ಗಾಯತ್ರಿ ಹೆಸರಿನ ಮಗಳಿದ್ದಾಳೆ, ಆಕೆ ಈ ಕಾದಂಬರಿಯ ದುರಂತ ನಾಯಕಿ. ಗಾಯತ್ರಿಯ ಅಂದ ಚೆಂದವನ್ನು ಕವಿಯಾದ ನೀನು ಹೃದಯಸ್ಪರ್ಶಿಯಾಗಿ ವರ್ಣಿಸಿರುವಿ. ಆದರೆ ಆಕೆ ಸಂಗ್ರಾಮಸಿಂಹನಿಂದ ಅತ್ಯಾಚಾರಕ್ಕೊಳಗಾಗಿ ಸಾಯುತ್ತಾಳೆ. ಆಕೆ ಸಾವು ವಸಂತನನ್ನು ಸ್ವಾತಂತ್ರ್ಯ ಹೋರಾಟಗಾರನನ್ನಾಗಿ ಪರಿವರ್ತಿಸುತ್ತದೆ. ಹಂಬೀರ್ ಸಂಸ್ಥಾನಿಕನ ಪತ್ನಿ(ರಾಣಿ ಅಮರಜಾದೇವಿ) ಜೊತೆ ಮಲಗಿರುವ ದೃಶ್ಯವನು ನೋಡಿದ ಬಳಕ ಸಂಗ್ರಾಮಸಿಂಹನ ಮನಃಪರಿವರ್ತನೆ ಆಗಬಹುದಿತ್ತಲ್ಲವೆ! ಅದು ಆಗುವುದಿಲ್ಲ. ಮುಂದೆ ಆಳುವ ವ್ಯವಸ್ಥೆಯ ಕ್ರೌರ್ಯ ಗೌರೀಪುರ ಸಂಸ್ಥಾನದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಆಸ್ಪದ ಕಲ್ಪಿಸುತ್ತದೆ. ವಸಂತನ ನೇತೃತ್ವದಲ್ಲಿ ಅಪಾರ ಸಂಖ್ಯೇಲಿದ್ದ ಪ್ರಜೆಗಳು ರಾಜವಾಡೆ ಮೇಲೆ ದಾಳಿ ನಡೆಸುವರು ಅನ್ನುವಲ್ಲಿಗೆ ಕಾದಂಬರಿ ಮುಗಿಯುವುದು.