
ಧರ್ಮಚಾವಡಿ
Prabhakar Neermarg$1.81 $1.09
Product details
Author | Prabhakar Neermarg |
---|---|
Book Format | Ebook |
Language | Kannada |
Pages | 172 |
Year Published | 2020 |
Category | Novel |
Publisher | VIVIDLIPI |
‘ಧರ್ಮಚಾವಡಿ’ ಕಾದಂಬರಿ ತುಳುನಾಡಿನ ಶ್ರಮಸಂಸ್ಕೃತಿ ಜತೆಗೆ ದೈವಾರಾಧನೆ ಕುರಿತ ಕಾದಂಬರಿ. ತುಳುನಾಡಿನುದ್ದಕ್ಕೂ ತುಳುವರನ್ನು ನಿಯಂತ್ರಿಸಿ ಕಾಪಾಡುವ ಆಂತರಿಕ ಶಕ್ತಿಗಳು ಹೇಗೆ ಒಂದು ಊರನ್ನು ನಿಯಂತ್ರಿಸಿ ಆ ಜನರ ಒಳಿತು ಕೆಡುಕುಗಳನ್ನು ಕಾಪಾಡುವ ಕಾರ್ಯವನ್ನು ಕೈಗೊಳ್ಳುತ್ತಿರುವುದು ವಿಚಿತ್ರವಾದರೂ ಸತ್ಯಸಂಗತಿಯಾಗಿದೆ. ತುಳುನಾಡು ವೈವಿಧ್ಯಮಯ ಆರಾಧನೆಗಳ ಕೇಂದ್ರ. ದೈವಾರಾಧನೆ ಮತ್ತು ನಾಗಾರಾಧನೆಗಳು ಇಲ್ಲಿನ ಜನರ ನಡೆನುಡಿಯೊಂದಿಗೆ ಸಹಜವಾಗಿ ಬೆಸೆದುಕೊಂಡಿದೆ. ಇಲ್ಲಿನ ತುಳುವರು ಯಾವುದೇ ಬಗೆಯ ಜಾತಿ ತಾರತಮ್ಯವಿಲ್ಲದೆ ಈ ಆರಾಧನೆಗಳ ಜೊತೆಗೆ ದೈವತ್ವದ ನಂಟನ್ನು ಉಳಿಸಿಕೊಂಡಿದ್ದಾರೆ. ಈ ಆರಾಧ್ಯ ಪ್ರಕಾರಗಳು ರಂಗಭೂಮಿಯ ಮಾನ್ಯತೆಯನ್ನು ಪಡೆದುಕೊಂಡಿರುವುದು ಕರಾವಳಿಯ ಸಾಂಸ್ಕೃತಿಕ ಹಿರಿಮೆಗೆ ಗರಿ ಮೂಡಿಸಿದೆ. ಕರಾವಳಿಯ ಸಂಸ್ಕೃತಿ ಜಾಗತಿಕ ಮನ್ನಣೆಗೆ ಪಾತ್ರವಾಗಲು ಇಲ್ಲಿನ ಆರಾಧನೆಗಳ ಕೊಡುಗೆ ಅತ್ಯಂತ ಗಣನೀಯವಾಗಿದೆ. ಇಷ್ಟೇ ಅಲ್ಲದೆ ತುಳುನಾಡಿನ ತುಳುವರಲ್ಲಿ ಆವರಿಸಿರುವ ಭೂತಾರಾಧನೆ, ತುಳುನಾಡಿನ ಇತಿಹಾಸವನ್ನು ಕಟ್ಟಿಕೊಡುತ್ತದೆ ಎಂದು ಹೇಳಿದರೆ ತಪ್ಪಾಗಲಾರದು. ಇದು ತುಳುನಾಡಿನ ಚರಿತ್ರೆಯನ್ನು ಮರುನಿರೂಪಿಸಲು ಇತಿಹಾಸದಾರರಿಗೆ ಸಹಕಾರಿಯಾಗಿದೆ. ಭೂತಾರಾಧನೆ ಒಂದು ಆರಾಧನಾ ವ್ಯವಸ್ಥೆಯಾಗಿ ತುಳುನಾಡಿನ ಆರ್ಥಿಕ, ಸಾಮಾಜಿಕ ಕ್ರೀಡೆಗಳ ಮೇಲೆ ಧಾರ್ಮಿಕವಾಗಿ ಪ್ರಭಾವ ಬೀರಿ, ಬಣ್ಣ ಕುಣಿತ, ವೇಷಭೂಷಣ, ಸಂಗೀತ ಹಾಡು, ಮಾತುಗಾರಿಕೆಯ ಮೂಲಕ ಒಂದು ಅಪರೂಪವೂ ವೈಶಿಷ್ಟ್ಯವೂ ಆದ ರಂಗಭೂಮಿಯು ಆಗಿ ವಿಕಾಸ ಹೊಂದಿದೆ. ಮಾನಸಿಕ ಚಿಕಿತ್ಸೆ ಮತ್ತು ಜನಪದ ವೈದ್ಯ ಪದ್ದತಿಯಾಗಿ ವೈದ್ಯಕೀಯ ಚಿಕಿತ್ಸಾ ಪದ್ಧತಿಯಾಗಿ ತುಳುನಾಡಿನಲ್ಲೆಲ್ಲಾ ಕಾರ್ಯನಿರ್ವಹಿಸುತ್ತಿದೆ.
Customers also liked...
-
O L Nagabhushanswamy
$3.45$2.07 -
K. Satyanarayana
$0.85$0.51 -
Nagesh Kumar C S
$0.83$0.51 -
Sathyakama
$3.87$2.32 -
U.R. Ananthamurthy
$9.99 -
U.R. Ananthamurthy
$8.00