ಹುಲಿ ಪತ್ರಿಕೆ ೧ ( Audiobook )

Anush A Shetty
$2.06

  • Author: Anush A Shetty
  • Book Format: Audiobook
  • Publisher: Anugraha Prakashana
  • Language: Kannada
  • Category: Novel

ಈ ಕಾದಂಬರಿಯು ಈ ಹುಲಿ ಪತ್ರಿಕೆಯ ಅನಂತ ಸಾಧ್ಯತೆಗಳಲ್ಲಿ ಒಂದಾಗಿರಬಹುದಾದ ಒಂದು ಕಾಲ್ಪನಿಕ ಕಥೆ. ಈ ಕಥೆಗೂ ನಿಜದ ಹುಲಿ ಪತ್ರಿಕೆಗೂ ಯಾವ ಸಂಬಂಧವೂ ಇಲ್ಲ. ಹಾಗೇನಾದರು ಇದ್ದರೆ ಅದು ಕೇವಲ ಒಂದು ಕಾಕತಾಳೀಯ. ಮೈಸೂರಿನ ಎಷ್ಟೋ ಪ್ರತಿಷ್ಠಿತ ಪತ್ರಿಕೆಗಳ ನಡುವೆ ಸದ್ದಿಲ್ಲದೆ ಮೂಡಿ ಮರೆಯಾದ ಹುಲಿ ಪತ್ರಿಕೆ ಮತ್ತದರ ಸಂಪಾದಕರಿಗೆ ಈ ಕಾದಂಬರಿಯು ಒಂದು ಸಣ್ಣ ಗೌರವ ನಮನ.

ಏಕಕಾಲಕ್ಕೆ ಹತ್ತು ಪತ್ರಿಕೆಗಳ ಸಂಪಾದಕರಾಗಿದ್ದ ತಾತಯ್ಯ ಅವರು ಒಂದು ಬೆರಗಾದರೆ, ಇದುವರೆಗೂ ಹೆಸರೇ ಬಹಿರಂಗವಾಗದ ಹುಲಿ ಪತ್ರಿಕೆಯ ಸಂಪಾದಕರು ಇನ್ನೊಂದು ಬೆರಗಂತೆ ಕಾಣತೊಡಗಿದರು. ಮಹಾರಾಜ ಕಾಲೇಜಿನಿಂದ ಹೊರಬಂದಮೇಲೆ ಹುಲಿ ಪತ್ರಿಕೆಯ ಚರ್ಚೆ ಹಾಗೇ ನಿಂತುಹೋಗಿತ್ತಾದರೂ ಅದರ ಕುತೂಹಲದ ಬಿಸಿ ಎಂದೂ ಆರಲೇ ಇಲ್ಲ. ಈ ಹುಲಿ ಪತ್ರಿಕೆಯ ಸಂಪಾದಕರು ಯಾರಿರಬಹುದು? ಅವರ ವಯಸ್ಸು ಎಷ್ಟಿರಬಹುದು? ನಮ್ಮಂತೆ ಯಾರಾದರು ಕಾಲೇಜು ಓದುತ್ತಿರುವವರು ಇದನ್ನು ನಡೆಸುತ್ತಿದ್ದರೆ? ಅಥವ ಯಾರಾದರು ನಡು ವಯಸ್ಸಿನವರಿರಬಹುದೆ? ಅಥವ ಯಾರಾದರು ಮುದುಕರೆ? ಹೆಸರು ಬಹಿರಂಗ ಪಡಿಸದ ಅವರ ಉದ್ದೇಶ ಏನಿರಬಹುದೆಂಬ ಪ್ರಶ್ನೆಗಳು ಹೇಳದೆ ಕೇಳದೆ ಎಲ್ಲಂದರಲ್ಲಿ ಮೂಡಿಬಿಡುತ್ತಿದ್ದವು.

Reviews

There are no reviews yet.

Only logged in customers who have purchased this product may leave a review.