ಕಾಲಚಕ್ರ ಎಂದರೆ ನಿರಂತರವಾದುದು; ಚಲನಶೀಲವಾಗಿರುವಂತದ್ದು; ಬದಲಾವಣೆಗೆ ಒಳಗಾಗುತ್ತ ಬಂದಿರುವಂತದ್ದು. ಕಾಲದೇಶದ ಸೆಳೆತದೊಳಗೆ ಮನುಷ್ಯ ನಿರಂತರವಾಗಿ ಸೆಣಸುತ್ತಾ ತನ್ನ ಬದುಕನ್ನು ಕಟ್ಟಿಕೊಳ್ಳುತ್ತ ಬರುತ್ತಾನೆ. ಮನುಷ್ಯನ ಬದುಕಿನ ದಿನನಿತ್ಯದ ತಲ್ಲಣಗಳು, ಜಾತೀಯತೆ, ಮೇಲು-ಕೀಳು, ಪುಂಡು ರಾಜಕಾರಣ ಇವುಗಳ ಪೊಳ್ಳುತನವನ್ನು ಎಳೆಎಳೆಯಾಗಿ ಕಾದಂಬರಿಯು ಬಿಡಿಸಿಡುತ್ತದೆ. ಪುಂಡು ಪೋಕರಿಗಳು ಊರೊಳಗೆ ಇರುವಂತೆ ಜನಸೇವಕರೂ, ಜನನಾಯಕರೂ, ಬೇರೆ ಬೇರೆ ಆಡಳಿತವರ್ಗಕ್ಕೆ ಸೇರಿದವರೂ ಇಲ್ಲಿ ಊರಿನ ಪರಿಧಿಯೊಳಗೆ ಸೇರಿಕೊಂಡಿದ್ದಾರೆ. ಕರಾವಳಿ ಕರ್ನಾಟಕದ ಸಾಂಸ್ಕøತಿಕ ಬದುಕನ್ನು ಚಿತ್ರಿಸುವ ಬೀಡು, ಗುತ್ತು, ಕೋಳಿ ಅಂಕ ಮೊದಲಾದವುಗಳ ವಿವರಣೆಯು ಕಾದಂಬರಿಯೊಳಗಡೆ ಕೇವಲ ವಸ್ತುವಿವರಣೆಯಲ್ಲಿ ಸೊಕ್ಕಿನಿಲ್ಲದೆ ಆಳವಾದ ಜೀವನ ಶ್ರದ್ದೆಯಲ್ಲಿ ಮೈಪಡೆದಿದೆ. ಮಾತ್ರವಲ್ಲ ಊರಿನ ಒಳಗಡೆ ನಡೆಯುವ ರಾಜಕಾರಣದ ಹುನ್ನಾರಗಳನ್ನು ಬಯಲಿಗೆಳೆಯುತ್ತದೆ. ಕಾಲ ಚಕ್ರದ ಜೊತೆಗೆ ಉರುಳು ಹೊಡೆಯುವ ಮನುಷ್ಯ ತತ್ಕಾಲದ ಪರಿಸರಕ್ಕೆ ಪ್ರತಿಕ್ರಿಯಿಸುವ ಸಂದರ್ಭದ ಉಬ್ಬರವಿಳಿತಗಳನ್ನು, ಏರುಪೇರುಗಳನ್ನು ಒಟ್ಟು ಕಾದಂಬರಿಯ ಹಂದರದಲ್ಲಿ ಕಾಣಬಹುದು.

Additional information

Author

Book Format

Ebook

Language

Kannada

Category

Year Published

2018

Pages

172

Publisher

Reviews

There are no reviews yet.

Only logged in customers who have purchased this product may leave a review.