Sale!

ಮಧ್ಯಘಟ್ಟ ( Printbook )

Shivanand Kalave
$3.09

ನಗರ ವಲಸೆಯ ಸಂಕಟದಲ್ಲಿ ಹಳ್ಳಿಗಳು ಖಾಲಿಯಾಗಿದ್ದು ಗೊತ್ತೇ ಇದೆ. ಕಾಡು ಕಣಿವೆಯಲ್ಲಿ ವನದುರ್ಗ ಕಟ್ಟಿ ರಾಜ್ಯಭಾರ ನಡೆಸಿದ ಚರಿತ್ರೆಯಷ್ಟೇ ಮುಖ್ಯವಾದುದು ಹಳ್ಳಿ ಹುಟ್ಟಿನ ಸಾಹಸವಲ್ಲವೇ? ಕಾದಂಬರಿಯ ಪಯಣವೊಂದು ಕಾಡಿನ ಗ್ರಾಮದಾಳಕ್ಕೆ ಇಳಿಯುವ ಪರಿ ಅರ್ಥವಾಗಲು ‘ಮಧ್ಯಘಟ್ಟ’ ಓದಬೇಕು.

  • Book Format: Printbook
  • Author: Shivanand Kalave
  • Category: Novel
  • Language: Kannada
  • Publisher: Sahitya Prakashana

ನಗರ ವಲಸೆಯ ಸಂಕಟದಲ್ಲಿ ಹಳ್ಳಿಗಳು ಖಾಲಿಯಾಗಿದ್ದು ಗೊತ್ತೇ ಇದೆ. ಕಾಡು ಕಣಿವೆಯಲ್ಲಿ ವನದುರ್ಗ ಕಟ್ಟಿ ರಾಜ್ಯಭಾರ ನಡೆಸಿದ ಚರಿತ್ರೆಯಷ್ಟೇ ಮುಖ್ಯವಾದುದು ಹಳ್ಳಿ ಹುಟ್ಟಿನ ಸಾಹಸವಲ್ಲವೇ? ಕಾದಂಬರಿಯ ಪಯಣವೊಂದು ಕಾಡಿನ ಗ್ರಾಮದಾಳಕ್ಕೆ ಇಳಿಯುವ ಪರಿ ಅರ್ಥವಾಗಲು ‘ಮಧ್ಯಘಟ್ಟ’ ಓದಬೇಕು. ಒಂದು ಹಳ್ಳಿಯನ್ನು ಕೇಂದ್ರೀಕರಿಸಿಕೊಂಡು ದಶಕಗಳಿಂದ ಇಂಚಿಂಚೂ ಬದುಕು ಅರಿಯುತ್ತ ಹೋದ ಅಧ್ಯಯನದಲ್ಲಿ ಕಾಲಕೋಶ ಎತ್ತಿ ತಂದ ಪರಿಶ್ರಮವಿದೆ. ಒಡಮೂಡುವ ಮೊದಲ ದಾರಿಗಳ ಪರಿಣಾಮಕಾರಿ ಚಿತ್ರಣಗಳಿವೆ. ಜೀವ ವೈವಿಧ್ಯಗಳ ಆಮೂಲ್ಯ ದಾಖಲೆಯನ್ನು ಕಥೆಯೊಂದು ಕಟ್ಟಿ ಹಿಡಿದ ಪರಿಗೆ ತಲೆಬಾಗಬೇಕು.

ಕಗ್ಗಾಡಿನ ೬೦ ವರ್ಷದ ಗೋಪಯ್ಯ ಹೆಗಡೆ ೧೮ ರ ಪ್ರಾಯದ ಕೇರಳದ ಕುಂಬಳೆಯ ಶ್ರೀದೇವಿಯನ್ನು ಮದುವೆಯಾದವರು. ಹೆಣ್ಣಗಳ ಬದುಕು ನೋಡಲು ಎಳೆ ಮಕ್ಕಳು ಜೊತೆಗೆ ಹತ್ತು ದಿನಗಳ ಕಾಲ ಒಂಬತ್ತು ನದಿಗಳನ್ನು ದಾಟಿ ನೂರಾರು ಮೈಲಿಯಿಂದ ಕಾಲ್ನಡಿಗೆಯಲ್ಲಿ ಬಂದವಳು ಅಮ್ಮ. ಧೀರೆ ಭೂದೇವೆ. ಕುಟುಂಬ, ಕಾಡಿನ ಒಡನಾಟದಲ್ಲಿ ಪರಿಚಯವಾಗುತ್ತ ಹೋಗುವ ಪಾತ್ರಗಳು ೭೦-೮೦ ವರ್ಷಗಳ ಹಿಂದಿಣ ಪರಿಸರ ಕಥನದ ಮಹಾಪುರುಷರಾಗಿದ್ದಾರೆ. ಒಂದು ಕೊಳಗ ಗೋಟಡಿಕೆ ಕೊಟ್ಟು ಮಗು ಖರೀದಿಸಿದ ಗೋಪಯ್ಯ ಹೆಗಡೆ, ಮಾಮಲೇದಾರ ಚಾಂದ್ ಷಾರ ಹುಲಿ ಬೇಟೆಯಿಂದ ಆರಂಭವಾಗಿ ಕಾಡು ಕಷ್ಟಗಳ ಹಲವು ಮುಖಗಳು ಇಲ್ಲಿ ಅನಾವರಣಗೊಂಡಿವೆ. ಕೆಂದಿಗೆ ಕಂಟಿಯಂತೆ ತನ್ನ ಬದುಕೆಂದು ಪುಡಿಯಮ್ಮ, ಗಂಜಿ ಕುಳಿಯಲ್ಲಿ ಬಡತನದ ದರ್ಶನ ಮಾಡಿಸುವ ಸರಗುಪ್ಪ ರಾಮ ಗೌಡ, ಗಪ್ಪತಿ ಭಟ್ಟರ ಹೊಟ್ಟೆಯ ಮೇಲಿನ ಹಗ್ಗದ ಗುರುತುಗಳು, ಹಸೆಹಳ್ಳದ ಗುಂಡಟ್ಲಕಾಲಿನ ಗಿರಿಜಮ್ಮನ ಸಾವು, ಕೇಮೊ ಅಜ್ಜ, ಪಟಾನ್ಸ್ ರಾಮ, ವರದಪ್ಪ ಹೆಗಡೆ, ವಾಸುದೇವ, ಉಗ್ರಾಣಿ ಧರ್ಮ ಹೀಗೆ ಕಾಡುವ ಪಾತ್ರಗಳು ಹಲವಿದೆ. ಕಲ್ಲು, ಮರ, ಬಳ್ಳಿಗಳಲ್ಲಿನ ಕಥಾನಕವಂತೂ ಇನ್ನೆಲ್ಲಿಯೂ ಸಿಗದ ವಿಶೇಷಗಳು. ಭೂಗತ ನಿಧಿ ಕಾಯುವ ಕುಂಟಭೂತ, ಕಳೆದುದನ್ನು ಹುಡುಕುವ ಕಾರೇಮನೆ ಜಟುಕ, ನೀರು ಕೊಡುವ ದೇವಿಕಾನು, ಕಲ್ಲರಕೊಳ್ಳಿ…. ಗ್ರಾಮ್ಯ ಸೋಜಿಗಗಳು ಒಂದೆರಡಲ್ಲ!

ಪರಿಸರ ಬರಹಗಾರರಾಗಿ, ಜಲ ಕಾರ್ಯಕರ್ತರಾಗಿ ಶಿವಾನಂದ ಕಳವೆ ಚಿರುಪರಿಚಿತರು. ಮಧ್ಯಘಟ್ಟ ಸುಮಾರು ಮೂವತ್ತು ವರ್ಷಗಳ ಕಾಡು ಸುತ್ತಾಟದ ಇವರು ಕಾಣ್ಕೆಯಿದು. ಪರಿಸರ ಕಥನದ ಮೂಲಕ ಸಾಮಾಜಿಕ ಇತಿಹಾಸ ದರ್ಶನವಿದು. ಹಳ್ಳಿ ತೊರೆದು ನಗರಕ್ಕೆ ಓಡಿದ ತಲೆಮಾರು ಕರೋನ ಸಾಂಕ್ರಾಮಿಕ ಕಾಯಿಲೆಗೆ ಬೆಚ್ಚಿ ಹಳ್ಳಿಯತ್ತ ನೋಡುತ್ತಿದೆಯಲ್ಲವೇ? ಕರೋನಾದ ಲಾಕ್ ಡೌನ್ ಹೊತ್ತಿನಲ್ಲಿ ನಿಂತಲ್ಲಿ ನಿಲ್ಲುವುದು ಹೇಗೆಂದು

ಚಡಪಡಿಸುವ ಜನಕ್ಕೆ ಕಳವೆ ಕಾದಂಬರಿ ಹಳ್ಳಿ ಬದುಕು ಬೇರು ಬಿಟ್ಟಿ ರೀತಿಯನ್ನು ತೋರಿಸುತ್ತದೆ, ಮಹಿಳೆಯರ ಜೀವನಗಾಥೆಯ ದರ್ಶನ ಮಾಡಿಸುತ್ತದೆ. ಕಾಲಿಗೆ ಚಪ್ಪಲಿ ಇಲ್ಲದ, ಉರುಳುವ ಚಕ್ರವೂ ಇಲ್ಲದ ಊರುಗಳು ಧೈರ್ಯ ಸಾಹಸಗಳ ನೆಲದ ತಿರುಳನ್ನು ಅರ್ಥಮಾಡಿಕೊಳ್ಳಲು ಅಪರೂಪದ ದಾಖಲೆಯಾಗಿದೆ. ಕಾದಂಬರಿ ಓದುತ್ತ ಹೋದಂತೆ ಕಾರಂತ, ಕುವೆಂಪು, ತೇಜಸ್ವಿಯವರು ನೆನಪಾಗುತ್ತಾರೆ. ಕಾಲು ದಾರಿಯಲ್ಲಿ ಕ್ರಮಿಸಿದ ಕಳವೆ ಮಧ್ಯಘಟ್ಟದ ಬೆಟ್ಟದ ಜೀವಗಳು ಅಚ್ಚರಿಗಳನ್ನು ಕಟ್ಟಿಕೊಟ್ಟ ರೀತಿ ಬೆರಗು ಮೂಡಿಸುತ್ತದೆ.

Reviews

There are no reviews yet.

Only logged in customers who have purchased this product may leave a review.