Your Cart

Need help? Call +91 9535015489

📖 Print books shipping available only in India. ✈ Flat rate shipping

ಒಲವಿನ ಬಲೆಯಲಿ

SatyaPramod
$1.09

Product details

Author

SatyaPramod

Publisher

VIVIDLIPI

Category

Novel

Book Format

Ebook

Language

Kannada

ಇದು 80ರ ದಶಕದಲ್ಲಿದ್ದ ಸುಬ್ಬರಾಯರ ಸಂಸಾರ.
ಸುಬ್ಬರಾಯರು ಮೂಲತಃ ಹೊಸಪೇಟೆಯವರು. ಅಲ್ಲೇ ಹುಟ್ಟಿ ಬೆಳೆದು, ವಿದ್ಯಾಭ್ಯಾಸ ಮುಗಿಸಿ, ಒಂದು ಕಿರಾಣಿ ಅಂಗಡಿ ಇಟ್ಟುಕೊಂಡು ಸಂಸಾರ ನಡೆಸುತ್ತಿದ್ದರು. ಅಷ್ಟೊಂದು ವ್ಯಾಪಾರವಿಲ್ಲ. ಹೆಂಡತಿ ತುಳಸಮ್ಮ ಅಷ್ಟೊಂದು ಓದಿಲ್ಲವಾದರೂ ಅದು ಇದು ಕೈ ಕೆಲಸದಲ್ಲಿ ನಿಪುಣರು.
ಹುಳಿಪುಡಿ, ಸಾರಿನಪುಡಿ, ಚಟ್ನಿಪುಡಿ, ಉಪ್ಪಿನಕಾಯಿ, ಹಪ್ಪಳಸಂಡಿಗೆ, ಹೀಗೆ ನಾನಾತರ ತಿಂಡಿ ತಿನಿಸುಗಳನ್ನ ಅವರಿವರಿಗೆ ಮಾಡಿಕೊಟ್ಟು ನಾಲ್ಕು ಕಾಸು ಸಂಪಾದಿಸುತ್ತಿದ್ದರು.
ಹಾಗೆಯೇ, ಬಿದಿರಿನ ಬುಟ್ಟಿ ಹೆಣೆಯುವುದು, ಉಲ್ಲನಿನ ಸ್ವೇಟರ್ ಹಾಕುವುದು, ಮದುವೆ ಮುಂಜಿಗಳಲ್ಲಿ ಶೋ ಸಾಮಾನು, ಕೊಬ್ಬರಿ ಸಾಮಾನಗಳನ್ನು ಮಾಡಿಕೊಡುವುದು, ಇನ್ನೂ ಮುಂತಾದವುಗಳನ್ನ ಮಾಡಿ ಅದರಿಂದಲೂ ಪುಡಿಗಾಸು ಸಂಪಾದಿಸುತ್ತಿದ್ದರು. ಆದರೂ ಇಬ್ಬರ ದುಡಿಮೆ ಎರಡು ಹೊತ್ತು ಊಟಕ್ಕೆ ಸರಿ ಹೋಗುತ್ತಿತ್ತು. ಆದರೆ ಪ್ರೀತಿ-ಪ್ರೇಮಕ್ಕೆ ಬಡತನವಿರಲಿಲ್ಲ. ಅದರ ಫಲವಾಗಿಯೇ ನಾಲ್ಕು ಮಕ್ಕಳಾದವು. ಎರಡು ಹೆಣ್ಣು, ಎರಡು ಗಂಡು. ಚಂದ್ರಮೌಳಿ (ಚಂದ್ರಣ್ಣ), ರಮಾಮಣಿ (ಮಣಿ), ಪಚ್ಚಿ (ಪ್ರಹ್ಲಾದ), ಸುಗುಣ ಇವರೇ ಸುಬ್ಬರಾಯರು – ತುಳಸಮ್ಮನವರ ನಾಲ್ಕು ಮುತ್ತುಗಳು.