ಈ ಕಾದಂಬರಿಯ ಕಥಾನಾಯಕನು ಒಬ್ಬ ಸಾಮಾನ್ಯ ಮನುಷ್ಯನಾಗಿದ್ದರೂ ಅಸಾಮಾನ್ಯ ಕೆಲಸ ಮಾಡುವವ. ಅವನೊಬ್ಬ ಮರಣದಂಡನೆಕಾರ. ಅದು ಅವನ ಕಾಯಕ. ಆದರೆ ಅವನ ಮನಸ್ಸಿನಲ್ಲಿ ಯಾವಾಗಲೂ ಕುಟುಕುತ್ತಿದ್ದಂಥ ವೇದನೆಯೇ ಬೇರೆ. ಫಾಶೀ ಶಿಕ್ಷೆ ವಿಧಿಸಲ್ಪಟ್ಟ ಕೈದಿಗಳಿಗೆ ಫಾಶೀಗೇರಿಸುವದೆಂದರೆ ಒಂದು ಜೀವದ ಹತ್ಯೆ ಮಾಡಿದಂತೆಯೇ ಆಯಿತು. ಜಲ್ಲಾದನಿಗೂ ಆ ಕೈದಿಗೂ ಏನೂ ಸಂಬಂಧವೇ ಇರದು. ಮಿತ್ರತೆ ಅಥವಾ ಶತೃತ್ವ ಇವು ಯಾವುದೇ ಇಲ್ಲದಿದ್ದರೂ ಜಲ್ಲಾದನು ಆ ಕೈದಿಯನ್ನು ಕತ್ತಿನಸುತ್ತ ಉರುಳು ಹಾಕಿ ಅವನನ್ನು ಮುಗಿಸುತ್ತಾನೆ.
ಅದು ಅವನ ಕರ್ತವ್ಯವೇ ಆದರೂ ಈ ಕೆಲಸ ಮಾಡುವಾಗ ಜಲ್ಲಾದನಿಗೆ ಏನೆನ್ನಿಸುತ್ತಿರಬಹುದು, ಅವನು ಎಷ್ಟು ಮಾನಸಿಕ ಯಾತನೆಯನ್ನು ಸಹಿಸ ಬೇಕಾಗುತ್ತಿರಬಹುದು? ಇಲ್ಲಿ ಒಬ್ಬ ಜಲ್ಲಾದನ ಜೀವನವು ಎರಡು ಭಾಗಗಳಲ್ಲಿ ಹಂಚಿಹೋಗಿರುತ್ತದೆ. ಅವನು ಜಲ್ಲಾದನಾಗಿರುವುದರ ಜೊತೆಗೇ ತಂದೆ–ತಾಯಿಯರಿಗೆ ಮಗನಾಗಿದ್ದಾನೆ. ಒಂದು ಹೆಣ್ಣಿನ ಗಂಡನಾಗಿದ್ದಾನೆ, ಮಕ್ಕಳ ತಂದೆಯೂ ಆಗಿದ್ದಾನೆ. ಅಲ್ಲದೆ ಸಮಾಜದಲ್ಲಿಯ ಒಬ್ಬ ಜವಾಬ್ದಾರಿಯುತ ನಾಗರಿಕನೂ ಆಗಿದ್ದಾನೆ. ಈ ಎಲ್ಲ ಪಾತ್ರಗಳನ್ನು ನಿರ್ವಹಿಸುವಾಗ ಹಾಗೂ ಅದರ ಜೊತೆಗೇ ಜಲ್ಲಾದನ ಪಾತ್ರವನ್ನೂ ನಿರ್ವಹಿಸುವಾಗ ಅವನಿಗೆ ಎದುರಾದ ಸಮಸ್ಯೆಗಳನ್ನು ಈ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ.
Summary
Information
Additional information
Pages | 316 |
---|---|
Language | Kannada |
Publisher | |
Year Published | 2022 |
Reviews
Only logged in customers who have purchased this product may leave a review.
Reviews
There are no reviews yet.