Your Cart

Need help? Call +91 9535015489

📖 Print books shipping available only in India. ✈ Flat rate shipping

ಸರದಿ

Na. Damodara Shetty
$0.51

Product details

Category

Novel

Author

Na. Damodara Shetty

Publisher

Manohara Granthamala

Language

Kannada

ISBN

978-81-88478-78-1

Book Format

Ebook

Year Published

2010

ಸರದಿ
ಡಾ.ನಾ. ದಾಮೋದರ ಶೆಟ್ಟಿ ಅವರ ‘ಸರದಿ’ ಕಾದಂಬರಿಯು ಆಧುನಿಕತೆ ಮತ್ತು ಜಾಗತಿಕರಣದ ಪರಿಣಾಮವಾಗಿ ನಮ್ಮ ಸಾಂಪ್ರದಾಯಿಕ ಕುಟುಂಬ ವ್ಯವಸ್ಥೆ ಸಾಗುತ್ತಿರುವ ದಾರಿ ಎಲ್ಲೆಡೆಯೂ ಅಭಯಾಶ್ರಮದ ಕಡೆ ಚಲಿಸುತ್ತಿರುವ ದೃಶ್ಯಗಳನ್ನು ಚಿತ್ರಿಸುತ್ತದೆ. ಈ ಎಲ್ಲ ಸಂದರ್ಭಗಳಲ್ಲಿ ಆಶ್ರಮ ಸೇರುತ್ತಿರುವವರೆಲ್ಲಾ ಹೆಂಗಸರು ಮತ್ತು ತಾಯಂದಿರು ಎನ್ನುವುದು ವಿಶೇಷವಾದುದು. ಈ ಕಾದಂಬರಿಯು ಕುಟುಂಬ ಮತ್ತು ತಾಯಿಯನ್ನು ಕೇಂದ್ರವಾಗಿ ಇಟ್ಟುಕೊಂಡು ಈ ಕಾಲದ ಭಿನ್ನ ಅನನ್ಯತೆಗಳ ನಡುವಿನ ಸಂಘರ್ಷ ಮತ್ತು ಅದರಿಂದ ಸಂಭವಿಸುವ ನೋವು, ಅದನ್ನು ನಿವಾರಿಸಲು ಮಾಡುವ ಪ್ರಯತ್ನಗಳು – ಹೀಗೆ ಅನೇಕ ಸಂಗತಿಗಳನ್ನು ಚರ್ಚಿಸುತ್ತದೆ.
ವಿಶೇಷವಾಗಿ ಜಾಗತೀಕರಣದ ಇಂದಿನ ಸನ್ನಿವೇಶದಲ್ಲಿ ಸಂಸ್ಕೃತಿಯ ಮಿಶ್ರಣ ಮತ್ತು ಹೊಂದಾಣಿಕೆ ಹೇಗೆ ಸವಾಲಿನದು ಎನ್ನುವ ಕಾಳಜಿ ಈ ಕಾದಂಬರಿಯ ಮುಖ್ಯ ತಿರುಳು. ಬದುಕು ಮತ್ತು ಬರಹದಲ್ಲಿ ಸದಾ ಭಿನ್ನ ಸಂಸ್ಕೃತಿಗಳ ಒಡನಾಟವನ್ನು ಪಾಲಿಸಿಕೊಂಡು ಬಂದ ನಾ.ದಾಮೋದರ ಶೆಟ್ಟಿ ಅವರು ಈಗ ಅದಕ್ಕೆ ಕಾದಂಬರಿಯ ರೂಪ ಕೊಟ್ಟಿರುವುದು ಮಹತ್ವದ ಸಾಧನೆ.