Your Cart

Need help? Call +91 9535015489

📖 Print books shipping available only in India. ✈ Flat rate shipping

ಶೃಂಖಲಾ

Roopa Joshi
$1.63

Product details

Author

Roopa Joshi

Language

Kannada

Book Format

Ebook

Category

Novel

Publisher

VIVIDLIPI

ISBN

978-81-947074-7-9

ಬರೆಯಲು ಕುಳಿತರೆ ಅಪಾರ ಸಹನೆಯನ್ನೂ ಸಾಕಷ್ಟು ತಯಾರಿ ಅಭ್ಯಾಸ ಎಲ್ಲವನ್ನೂ ಬೇಡುವ ಉತ್ತರ ಕರ್ನಾಟಕದ ಟಿಪಿಕಲ್ ಶೈಲಿಯ ಧಾರವಾಡದ ಕಡೆ ಭಾಷೆ ಮತ್ತೂ ಅಂಥಹುದೇ ಕೌಟುಂಬಿಕ ಹಿನ್ನೆಲೆಯ ಕಾದಂಬರಿ ಶೃಂಖಲಾ. ಇದರ ವಿಶೇಷತೆಯೆಂದರೆ ಮಾಮೂಲಿ ಓದಿಗೆ ಇದು ಸುಲಭವಾಗಿ ಒಂದು ಕೈಯಳತೆಗೆ ದಕ್ಕುವಂಥದಲ್ಲ. ಲೇಖಕಿಯ ಶ್ರಮ ಈ ನಿಟ್ಟಿನಲ್ಲಿ ಎದ್ದು ಕಾಣುತ್ತದೆ. ಸಾಹಿತ್ಯಲೋಕಕ್ಕೆ ಹೆಚ್ಚು ಪರಿಚಯವಿಲ್ಲದಂತಹ ಕೌಟುಂಬಿಕ ಹಿನ್ನೆಲೆಯ ಕಥನವನ್ನು ತಲೆಮಾರುಗಳಾದಿಯಾಗಿ ಕನ್ನಡ ಲೋಕಕ್ಕೆ ಪರಿಚಯಿಸಿದ ಹೆಗ್ಗಳಿಕೆ ಲೇಖಕಿ ರೂಪಾ ಜೋಶಿಯವರದ್ದು.
ಒಂದೊಂದು ಪಾತ್ರಕ್ಕೂ ನಾವು ಪ್ರತಿಕ್ರಿಯಿಸುವ ಪರಿಯಲ್ಲಿ, ನಮ್ಮನ್ನು ಕಂಡುಕೊಳ್ಳಲು ಪ್ರೇರೇಪಿಸುವ, ಚಿಂತನೆಗೆಳೆಸುವ, ನಮ್ಮ ನಮ್ಮ ರಾಗದ್ವೇಷಗಳ ಭಾವವನ್ನು ಅಲ್ಲಲ್ಲಿ ಉದ್ದೀಪಿಸಿ, ಪಾತ್ರಗಳ ಪರಕಾಯ ಪ್ರವೇಶ ಮಾಡಿಸುತ್ತದೆ.
ಕಾದಂಬರಿ ಅದರ ಕಥಾನಕದ ಜೊತೆ ಜೊತೆಗೆ ನಮ್ಮನ್ನೂ ಕರೆದೊಯ್ಯುವ ಪರಿಯಿಂದಾಗಿಯೇ ಮನಸ್ಸಿಗೆ ತೀರಾ ಅಪ್ತವಾಗುತ್ತ ಹೋಗುತ್ತದೆ. ಶಬ್ದ ಸಂಗ್ರಹ, ವಾಕ್ಯಗಳ ಮೇಲಿನ ಹಿಡಿತ ಅದ್ಭುತ, ಭಾಷೆಯ ಬಳಕೆ ಲೇಖಕಿಗೆ ಒಂದು ಸವಾಲೇ ಅಲ್ಲ ಎಂಬಷ್ಟು ಸುಲಲಿತವಾಗಿ ಮೂಡಿಬಂದಿದೆ.