Your Cart

Need help? Call +91 9535015489

📖 Print books shipping available only in India. ✈ Flat rate shipping

ಸುವರ್ಣ ಕರಾವಳಿ

Nagesh Kumar C S
$1.69

Product details

Category

Novel

Author

Nagesh Kumar C S

Publisher

VIVIDLIPI

Language

Kannada

Book Format

Audiobook

Year Published

2017

Narrator

Amulya S, Jyoti Prashant, Nagaraj Vashishta, Pramod A, Vidya Gurumurthy

ಹತ್ತು ನಿಮಿಷದಲ್ಲಿ ಹತ್ತನೆ ಬಾರಿ ಆತಂಕದಿಂದ ಹೊರಗಿಣುಕಿ ಆಚೆ ನೋಡಿದ. ಸಮಯ ಸಂಜೆ ಐದಾಗುತ್ತಿದೆ… ಇನ್ನೇನು ತಾನು ಇಳಿಯುವ ಸಮಯ ಬಂದೇ ಬಿಟ್ಟಿತು ಎಂದು ಖಚಿತವಾಯಿತು. ತಾವು ಗೋವಾದ ಪೋಲೆಮ್ ಬೀಚ್ ಗಡಿ ದಾಟಿ ಕರ್ನಾಟಕದ ಸೀಮೆಯನ್ನು ತಲುಪಿ ಇದೀಗ ಸರಿಯಾಗಿ ಐದು ನಿಮಿಷವಾಗಿತ್ತು.
ಒಮ್ಮೆ ಸರಿಯೆಂಬಂತೆ ಅವರಿಬ್ಬರತ್ತ ತಲೆಯಾಡಿಸಿ ಮುಗುಳ್ನಕ್ಕು ತನ್ನ ಕೈ ನೀಡಿದ..  ಮೊದಲನೆ ಪೇದೆ ಮರುಮಾತಿಲ್ಲದೇ ಅವನ ಕೈಕೋಳವನ್ನು ತನ್ನ ಜೇಬಿನಲ್ಲಿದ್ದ ಕೀಲಿಕೈ ಬಳಸಿ ತೆಗೆದ. ಕೈಗಳು ಬಿಡುವಾಗುತ್ತಿದ್ದಂತೆಯೇ ಅವರಿಬ್ಬರಿಗೂ ಉದ್ದೇಶಿಸಿ “ಸಾರಿ ಬ್ರದರ್ಸ್” ಎನ್ನುತ್ತಾ ಆ  ಸ್ಟೀಲಿನ ಕೈಕೋಳವನ್ನು ಮುಷ್ಟಿಯಲ್ಲಿ ಬಿಗಿದು ಅವರಿಬ್ಬರ ತಲೆಯತ್ತ ಜೋರಾಗಿ ಎರಡು ಬಾರಿ ಲಾಟಿಸಿದ.. ಅವನ ಏಟಿಗೆ ತತ್ತರಿಸಿ  ಹಾ! ಎಂದು ಕೂಗಿ ತಮ್ಮ ರಕ್ತ ಒಸರುತ್ತಿದ್ದ ಹಣೆಯನ್ನು ಒತ್ತಿಕೊಂಡು ಇಬ್ಬರೂ ವ್ಯಾನಿನ ನೆಲಕ್ಕೆ ಬಿದ್ದರು. ಸರಕ್ಕನೆ ಎದ್ದ ಸಾತ್ವಿಕ್ ತಮ್ಮ ಮತ್ತು ಡ್ರೈವರ್ ಮಧ್ಯೆ ಇದ್ದ ಚಿಕ್ಕ ಗೋಡೆಗೆ ಕೈ ಬಡಿದು ಕಿಂಡಿಯ ಮೂಲಕ ಡ್ರೈವರಿಗೆ “ಇನ್ನು ನೀನು ಸ್ಟಾಪ್ ಮಾಡಬಹುದು..”ಎಂದ..