“ಕಾಫ್ಕಾನೊಂದಿಗೆ ಸಂವಾದ” ಇದು ಮೂಲದಲ್ಲಿ ಮರಾಠಿ ಲೇಖಕರಾದ
ತ್ರ್ಯ.ವಿ. ಸರದೇಶಮುಖರು ಇಂಗ್ಲೀಷಿನಿಂದ ಮರಾಠಿಗೆ ಅನು ವಾದಿಸಿದ ಯಾನೂಷ್ ಗುಸ್ತಾವ್ ಎನ್ನುವವನ “Conversation with KAFKA” ಎನ್ನುವ ಕೃತಿಯ ,”ಕಾಫ್ಕಾಂಚಿ ಸಂವಾದ” ಎನ್ನುವ ಮರಾಠಿ ಕೃತಿಯ ಕನ್ನಡ ಅನುವಾದ. ಕಾಫ್ಕಾ ಪಶ್ಚಿಮದ ಪ್ರಚಂಡ ಶಕ್ತಿಯ ಲೇಖಕ. ಅವನ ಜೊತೆಗಿನ ಒಡನಾಟದ ಅನುಭವದ ಕಥನವು ಇಲ್ಲಿದೆ.
ಎರಡು ಮಹಾಯುದ್ದಗಳ ಭಯಂಕರ ಅನುಭವಗಳು ಇಡೀ ಜಗತ್ತಿನ ಎಲ್ಲ ಚಿಂತಕರನ್ನು ದಿಕ್ಕುಗೆಡಿಸಿದವು. ಪಶ್ಚಿಮದ ಪ್ರಚಂಡ ಲೇಖಕರೂ ಕೂಡ ಈ ಬಗೆಯ ಬದುಕಿನ ಪ್ರಳಯಾಂತಕ ಚಿತ್ರಗಳನ್ನು ಸಾಹಿತ್ಯದಲ್ಲೂ ಕೆತ್ತಿದರು. ದಿಕ್ಕುಗೆಟ್ಟ ಬಾಳಿನ ಸಶಕ್ತ ಅಭಿವ್ಯಕ್ತಿಯು ಯಾವ ದಿಕ್ಕಿನಿಂದ ಬಂದರೂ ಅದು ಜೀವಕ್ಕೆ ಧೈರ್ಯ ತುಂಬುವ ಕೆಲಸ ಮಾಡಬಲದು. ಹಿಂದೊಮ್ಮೆ ಗ್ರಂಥಮಾಲೆಯು ಅಲ್ಬರ್ಟ್ ಕಾಮೂನ “ಔಟ್ ಸೈಡರ್” ಕಾದಂಬರಿಯ, ಡಿ.ಎ.ಶಂಕರ ಅವರು ಅನುವಾದ ಮಾಡಿಕೊಟ್ಟ “ಅನ್ಯ” ಕಾದಂಬರಿಯನ್ನು ಮಾಲೆಯಲ್ಲಿ ಪ್ರಕಟಿಸಿತ್ತು. ಈಗ ಅದೇ ವೈಚಾರಿಕ ವ್ಯಾಪ್ತಿ ಪ್ರದೇಶದಲ್ಲಿಯೇ ತನ್ನ ಸಂಪರ್ಕ ಶಿಖರವನ್ನು ಸ್ಥಾಪಿಸಿಕೊಂಡ ಕಾಫ್ಕಾನ ಬಗೆಗಿನ ಈ ಕೃತಿಯನ್ನು ಪ್ರಕಟಿಸುತ್ತಿದೆ.

Additional information

Category

Publisher

Book Format

Ebook

Pages

112

Language

Kannada

ISBN

978-93-92192-03-6

Translator

Anand Zunjarwad

Year Published

2023

Reviews

There are no reviews yet.

Only logged in customers who have purchased this product may leave a review.