
ಆಮನಿ
Kirtinath Kurtkoti$0.24 $0.15
Product details
Category | Plays |
---|---|
Author | Kirtinath Kurtkoti |
Publisher | Kurtkoti Memorial Trust |
Language | Kannada |
Book Format | Ebook |
Pages | 130 |
Year Published | 1999 |
ಆಮನಿ
ಈ ನಾಟಕದಲ್ಲಿ ಮಹತ್ವವನ್ನು ವಾತಾವರಣ ಸೃಷ್ಟಿಗೆ ಕೊಟ್ಟಿದ್ದಾರೆ. ಅಂತಲೇ ಇಲ್ಲಿಯ ಕಥಾವಸ್ತುವಿನ ಇತಿಹಾಸ ದೂರ ಬಹುದೂರ ಓಡುತ್ತದೆ. ಕೃತಿಯ ಗಮನ ವರ್ತಮಾನಕಾಲದಿಂದ ಭೂತಕಾಲಕ್ಕೆ ಹೋಗಿ, ಆಮೇಲೆ ವರ್ತಮಾನದಿಂದ ಮುಂದುವರಿಯುತ್ತದೆ. ಇದು ಮಕ್ಕಳ ಜೀವನದಲ್ಲಿಯ ಕೆಲವು ಸನ್ನಿವೇಶಗಳನ್ನು ರೂಪಿಸುವ ನಾಟಕವಾಗಿದ್ದರೂ ಕೂಡ ಅದೇ ಅದರ ಉದ್ದೇಶವಲ್ಲ. ಜೀವನಕ್ಕೆ ಜೀವನವೇ ಇಲ್ಲಿ ಸಂಕೇತವಾಗಿದೆ. ವಾಸ್ತವತೆಯ ಅದ್ಭುತ ರಮ್ಯತೆಯನ್ನು ತೆರೆದು ತೋರುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಜೀವನದಲ್ಲಿ ಕಾಣುವ ಸತ್ಯದ ಪರಿಗಳನ್ನು ಒಂದೊಂದಾಗಿ ಬಿಚ್ಚಿ ನೋಡಿದಾಗ ಕೊನೆಗೆ ಅನಿರ್ವಚನೀಯವಾದ ಗೂಢವೊಂದೇ ಉಳಿಯುತ್ತದೆ. ಮಕ್ಕಳ ಜೀವನದಲ್ಲಿ ಆಟಗಳಲ್ಲಿ , ಉತ್ಸಾಹದಲ್ಲಿ, ಅನುಕರಣದಲ್ಲಿ ಮನುಕುಲದ ಹೃದಯಸ್ಪಂದನ ಕೇಳುತ್ತಿದೆ. ಇತಿಹಾಸದ ಫಲವಾಗಿ, ಭವಿಷ್ಯದ ಬೀಜವಾಗಿರುವ ಶೈಶವದ ಅಲೌಕಿಕ ಸೌಂದರ್ಯವನ್ನು ಸೆರೆಹಿಡಿಯುವ ಸಾಹಸ ಇಲ್ಲಿದೆ.
Customers also liked...
-
Akshara K V
$5.00 -
Girish Karnad
$0.60$0.36 -
Girish Karnad
$1.09$0.65 -
Dheerendra Dhanakashirur
$0.00 -
Girish Karnad
$0.60$0.36 -
Akshara K V
$5.00