Your Cart

Need help? Call +91 9535015489

📖 Print books shipping available only in India. ✈ Flat rate shipping

ಅಕಾಕಿ ಕೋಟು ಮತ್ತು ಇತರ ನಾಟಕಗಳು

Channakeshava
$1.80

Product details

Category

Plays

Author

Channakeshava

Publisher

Theatre Tatkaal Books

Pages

202

Language

Kannada

Book Format

Ebook

Year Published

2022

ಇದು ರಷ್ಯಾದ ಪ್ರಸಿದ್ಧ ಲೇಖಕ ನಿಕೊಲೊಯ್ ಗೊಗೊಲ್ ನ ಪ್ರಸಿದ್ಧ ನೀಳ್ಗತೆಯಾದ ಓವರ್ ಕೋಟ್ ಎಂಬ ಕತೆಯ ರಂಗರೂಪ. ಈ ಕತೆಯನ್ನು ರಂಗದ ಮೇಲೆ ತರುವುದು ನಿಜವಾಗಿಯೂ ಸವಾಲಿನ ಕೆಲಸ. ಏಕೆಂದರೆ ಇಲ್ಲಿನ ನಾಟಕೀಯತೆಯೆಲ್ಲವೂ ಮನೋಗತವಾಗಿರುವಂಥವು; ಅಂಥದನ್ನು ಮತ್ತೊಮ್ಮೆ ಚನ್ನಕೇಶವ ಅವರು ಅವರ ಮೇಳದ ಗುಂಪು, ಸಂಗೀತ, ರಂಗ ಸಜ್ಜಿಕೆ ಮೊದಲಾದ ಪರಿಕರಗಳ ಮೂಲಕ ರಂಗರೂಪಕ್ಕೆ ತಂದಿದ್ದಾರೆ. ಊರು, ಪಾತ್ರಗ ಳ ಹೆಸರು ಎಲ್ಲವೂ ರಷ್ಯಾದ್ದೇ ಆಗಿದ್ದರೂ ನಡುನಡುವೆ ಇದ್ದಕ್ಕಿದ್ದಂತೆ ಮನೆಮಾಲಕಿಯ ಪಾತ್ರ ತೆಲುಗಿನಲ್ಲಿ ಮಾತನಾಡುತ್ತದೆ. ಇಂಥ ಅನೇಕ ನಾಟಕೀಯತೆಯನ್ನು ಬಹಳ ಸಲೀಸಾಗಿ ಬಳಸುವ ಮೂಲಕ ಚನ್ನಕೇಶವ ಅವರು ದೂರದ ರಷ್ಯಾದ ಕತೆಯನ್ನು ನಮ್ಮ ನಿಮ್ಮ ಸುತ್ತಲೂ ನಡೆಯಬಹುದಾದ ಕತೆ ಎಂಬಂತೆ ತಂದು ನಿಲ್ಲಿಸುತ್ತಾರೆ. ಇನ್ನು ಈ ಕಥೆಯ ಮುಖ್ಯ ಜೀವಾಳವೇ ಒಂದು ಒಳ್ಳೆಯ ಓವರ್ಕೋಟು. ರಷ್ಯಾದ ಕೊರೆಯುವ ಚಳಿಗಾಲವನ್ನು ತಡೆದುಕೊಳ್ಳಬೇಕೆಂದರೆ ಒಂದೊಳ್ಳೆ ಕೋಟು ಬೇಕು ನಮ್ಮ ಕಥಾನಾಯಕನಿಗೆ. ಸದಾ ಹಿಮಸುರಿವ ರಷ್ಯಾದ ಅಂತಹ ಚಳಿಗಾಲವನ್ನು ಚನ್ನಕೇಶವ ಅವರು ಹೇಗೆ ರಂಗದ ಮೇಲೆ ತಂದಿದ್ದಿರಬಹುದು ಎಂಬ ಕುತೂಹಲ ನನಗೆ ಖಂಡಿತಾ ಇದೆ.