Your Cart

Need help? Call +91 9535015489

📖 Print books shipping available only in India. ✈ Flat rate shipping

ಅಥೆನ್ಸ್ ನ ಅರ್ಥವಂತ

$6.00

Product details

Category

Plays

Translator

K.V. Subbanna

Publisher

Akshara Prakashana

Book Format

Ebook

Language

Kannada

Pages

106

Year Published

1994

ಶೇಕ್‍ಸ್ಪಿಯರನ ಇನ್ನಾವುದೇ ನಾಟಕದಲ್ಲಿಯೇ ಆಗಲಿ ಕಾಣಿಸದ ಒಂದು ಪ್ರಮುಖ ವಸ್ತು ಈ ನಾಟಕದಲ್ಲಿದೆ.  ಅದು – ಹಣ. ಅಹಂಭಾವ, ಕೃತಘ್ನತೆ ಮೊದಲಾದ ಮನುಷ್ಯನ ಸ್ವಭಾವಗಳಿಗಿಂತ ಮಿಗಿಲಾಗಿ ಹಣವೇ ಈ ನಾಟಕದ ಪಾತ್ರಗಳನ್ನು ಕುಣಿಸುತ್ತದೆ.  ಶೇಕ್‍ಸ್ಪಿಯರ್ ಈ ನಾಟಕವನ್ನು ಬರೆದ ಕಾಲದಲ್ಲಿಯೇ ಇಂಗ್ಲೆಂಡಿನಲ್ಲಿ ಎಲಿಜಬೆತ್ ರಾಣಿಯ ಅಧಿಕಾರ ಮುಗಿದು ಒಂದನೇ ಜೇಮ್ಸ್  ಅಧಿಕಾರಕ್ಕೆ ಬಂದ.  ಅವನ ಆಸ್ಥಾನವು ವೈಭವ, ಅಂತಸ್ತು, ದುಂದುವೆಚ್ಚ ಮೊದಲಾಗಿ ಎಲ್ಲ ರೀತಿಯಿಂದಲೂ ಹಳದಿ ಲೋಹದ ವ್ಯಾಮೋಹಕ್ಕೆ ವಾಲತೊಡಗಿತ್ತು.  ಇಂಥ ಕಾಲವೇ ಶೇಕ್‍ಸ್ಪಿಯರನನ್ನು ಈ ವಸ್ತುವಿನ ಬಗ್ಗೆ ಕೇಂದ್ರೀಕರಿಸುವಂತೆ ಪ್ರಚೋದಿಸಿರಬೇಕು.  ಆದರೆ, ಈ ನಾಟಕ ಇಂಥ ಯಾವುದೇ ನಿರ್ದಿಷ್ಟ ಸಾಮಾಜಿಕ ಸಂದರ್ಭವನ್ನು ಮೀರಿನಿಲ್ಲುವ ಗುಣವನ್ನೂ ಪಡೆದಿದೆ.  ಅದಕ್ಕಾಗಿಯೇ 19ನೆಯ ಶತಮಾನದಲ್ಲಿ ಬಂದ ಕಾರ್ಲ್ ಮಾರ್ಕ್ಸ್, ತನ್ನ ‘ಕ್ಯಾಪಿಟಲ್’ ಗ್ರಂಥದಲ್ಲಿ ಬಂಡವಾಳಶಾಹಿ ಸಮಾಜದ ಬಗ್ಗೆ ಬರೆಯುತ್ತ ‘ಹಳದಿ ಲೋಹ’ದ ಬಗ್ಗೆ ಶೇಕ್‍ಸ್ಪಿಯರನ ಈ ನಾಟಕದ ಮಾತುಗಳನ್ನು ಉದ್ಧರಿಸಿದ್ದಾನೆ!