Your Cart

Need help? Call +91 9535015489

📖 Print books shipping available only in India. ✈ Flat rate shipping

ಬೆತ್ತಲಾಟ 

Prakash Garud
$0.44

Product details

Category

Plays

Author

Prakash Garud

Publisher

Manohara Granthamala

Translator

Dr.Prakash Garud

ISBN

978-93-81822-28-9

Book Format

Ebook

Year Published

2013

ಡಾ. ಪ್ರಕಾಶ ಗರುಡರು ಅನೇಕ ವರ್ಷಗಳಿಂದ ಪ್ರದರ್ಶಿಸುತ್ತಿರುವ ಮತ್ತು ಅತ್ಯಂತ ಪ್ರಭಾವಿ ನಾಟಕವನ್ನು ಪುಸ್ತಕರೂಪಕ್ಕೆ ಇಳಿಸಿ ಅದನ್ನು ಪ್ರಕಟಿಸಲು ಒಪ್ಪಿಗೆ ನೀಡಿದ್ದಾರೆ. ದಾರಿಯೊ ಫೋ ನ ‘One was nude;One wore tails’ ಎಂಬ ನಾಟಕವನ್ನು ಕನ್ನಡದ ಸನ್ನಿವೇಶಕ್ಕೆ ಅಳವಡಿಸಿಕೊಂಡು ಭಾವಾನುವಾದ ಮಾಡಿದ್ದಾರೆ.
ನಾಟಕದಲ್ಲಿ ಬರುವ ಪಾತ್ರಗಳೆಲ್ಲ ನಮ್ಮ ನಿಜಜೀವನದಲ್ಲಿ ಕಾಣ ಸಿಗುವಂಥವೇ. ಆದರೆ ಸನ್ನಿವೇಶ ಮಾತ್ರ ಕುತೂಹಲಕಾರಿಯಾಗಿ ಹಾಸ್ಯವನ್ನು ಚಿಮ್ಮಿಸುತ್ತದೆ. ಭೌತಿಕ ನೆಲೆಯಿಂದ ಆಧ್ಯಾತ್ಮಿಕ ನೆಲೆಯ ಕಡೆಗೆ ತನ್ನ ವಿಚಾರಗಳನ್ನು ಎತ್ತರಿಸುತ್ತ ನಾಟಕ ಪ್ರೇಕ್ಷಕರನ್ನು ವಿಚಾರ ಮಾಡಲು ಹಚ್ಚುತ್ತದೆ.
ಈ ನಾಟಕದ ಭಾವಾನುವಾದಕ್ಕೆ ನನಗೆ ಮೂಲ ಪ್ರೇರಣೆ ದೊರೆತದ್ದು ಸಾಹಿತ್ಯ ಕ್ಷೇತ್ರದಲ್ಲಿ ನೋಬೆಲ್ ಪ್ರಶಸ್ತಿ ಪಡೆದ (೧೯೯೭) ಇಟಲಿಯ ನಾಟಕಕಾರ /ನಟ ದಾರಿಯೊ ಫೊನ ಒನ್ ವಾಸ್ ನ್ಯೂಡ್; ಒನ್ ವೋರ್ ಟೇಲ್ಸ್ ಎಂಬ ಏಕಾಂಕ ಪ್ರಹಸನದಿಂದ. ಫೊ ಎಡಪಂಥಿಯ ವಿಚಾರಧಾರೆಗೆ ಬದ್ಧನಾಗಿದ್ದರೂ ತನ್ನ ನಾಟಕ ರಚನೆಯಲ್ಲಿ ಮಾತ್ರ ಅಲ್ಲಿಯ ವಸ್ತುನಿರೂಪಣೆ, ಸನ್ನಿವೇಶ ವಿಚಾರಗಳನ್ನು ವಾಚ್ಯವಾಗಿಸದೇ ಹರಿತ ವ್ಯಂಗ್ಯ, ಸಂಭಾಷಣೆ ಮೂಲಕ ನಾಟಕವನ್ನು ಕಲಾತ್ಮಕಗೊಳಿಸುತ್ತಾನೆ. ಹೀಗಾಗಿ ಅಂತಿಮವಾಗಿ ಆತ ತನ್ನ ಪ್ರೀತಿಬದ್ಧತೆಯನ್ನು ರಂಗಭೂಮಿಗೆ ತೋರಿಸಿದ್ದಾನೆ.