ಈ ಊರಿಗೆ ಎರಡು ಹೆಸರು. ಚೂರಿಕಟ್ಟೆ ಅರ್ಥಾತ್ ಕಲ್ಯಾಣಪುರ. ಬಸ್ಸಿನ ಬೋರ್ಡಿನ ಮೇಲೆ ಕಲ್ಯಾಣಪುರ… ಯಾಕೆ ಹೀಗೆ ಅನ್ನುತ್ತೀರಾ? ಅದಕ್ಕೆ ಒಂದು ದೊಡ್ಡ ಪುರಾಣವೇ ಇದೆ. ಈ ಊರಿನ ಮೂಲ ದೇವರು ಶಂಭುಲಿಂಗೇಶ್ವರ. ಈಗ ನೂರಾರು ವರ್ಷಗಳ ಹಿಂದೆ ಆ ಶಂಭುಲಿಂಗೇಶ್ವರನ ಒಂದು ಗಣ ಈ ಕಟ್ಟೆಯಮೇಲೇ ಸ್ಥಾಪನೆಯಾಗಿತ್ತಂತೆ. ಆಗ ಜನರೆಲ್ಲ ಕೋಳಿ ಕುರಿ ತಂದು ಅದನ್ನು ಹರಿತವಾದ ಚೂರಿಯಲ್ಲಿ ಸೀಳಿ ಆ ಗಣಕ್ಕೆ ಬಲಿ ಕೊಡುತ್ತಿದ್ದರಂತೆ. ಆಮೇಲೆ ಬ್ರಿಟಿಷರ ಕಾಲದಲ್ಲಿ ಕುದುರೆಯ ಮೇಲೆ ಬಂದು ಒಬ್ಬ ಕಲೆಕ್ಟರನಿಗೆ ಇಲ್ಲೇ ಹಾದಿ ತಪ್ಪಿತು ಅನ್ನೋ ಕಾರಣಕ್ಕೆ ಆತ ಇಲ್ಲಿ ಒಂದು ಕೈಮರ ಹಾಕಿಸಿದನಂತೆ. ಸರಿ, ಗಣಕ್ಕೆ ಮೈಲಿಗೆ ಆಯಿತು ಅಂತ ಊರಿನವರು ಆ ಗಣವನ್ನು ಎತ್ತಿಕೊಂಡು ಹೋಗಿ ಈಗ ಊರನಡುವೆಯೇ ಇರುವ ಶಂಭುಲಿಂಗನ ಗುಡಿಯ ಬದಿಗೆ ನಿಲ್ಲಿಸಿದರಂತೆ. ಆಮೇಲೆ ಊರು ಆ ಕಡೆಗೇ ಬೆಳೆಯುತ್ತ ಹೋಯಿತು; ಶಂಭುಲಿಂಗನ ಗುಡಿ ಊರಿನ ನಟ್ಟನಡುವಿಗೆ ಆಯಿತು. ಊರು ಬೆಳೆದ ಹಾಗೆ ಇತಿಹಾಸವೂ ಬೆಲೀತು; ಸಾತಂತ್ರ್ಯ ಬಂತು. ಆಗ ಊರಿನವರಿಗೆ ಈ ಚೂರಿಕಟ್ಟೆ ಅನ್ನೋ ಹೆಸರು ಅಪಶಕುನ ಅನ್ನೋ ಹಾಗೆ ಕಂಡಿದ್ದರಿಂದ ದೊಡ್ಡದೊಡ್ಡವರೆಲ್ಲಾ ಸೇರಿ ಸರ್ಕಾರಕ್ಕೆ ಒತ್ತಾಯ ಮಾಡಿ ಈ ಊರಿನ ಹೆಸರನ್ನು ಕಲ್ಯಾಣಪುರ ಅಂತ ಬದಲು ಮಾಡಿಸಿದರು. ಆದರೆ, ಚೂರಿಕಟ್ಟೆ ಅನ್ನೋ ಹೆಸರು ಅಳಿಸಲೇ ಇಲ್ಲ… ಈಗ ಒಂದೆರಡು ವರ್ಷದ ಈಚೆಗೆ ಈ ಹೆಸರಿಗೆ ಇನ್ನೋಂದು ಅರ್ಥ ಬರಲಿಕ್ಕೆ ಶುರು ಆಗಿದೆ. ಪ್ರತಿವರ್ಷ ಶಂಭುಲಿಂಗೇಶ್ವರ ಜಾತ್ರೆ ಶುರು ಆಗಬೇಕು, ಅಷ್ಟು ಹೊತ್ತಿಗೆ ಇಲ್ಲಿ ಹಿಂದು ಮುಸ್ಲಿಂ ಗಲಾಟೆ ಶುರು; ಹೆಣ ಬೀಳೋದಕ್ಕೆ ಆರಂಭ. ಇವರು ಅವರಿಗೆ ಚೂರಿ ಹಾಕೋದು, ಅವರು ಇವರನ್ನು ತಿವಿಯೋದು. ಒಟ್ಟಿನಲ್ಲಿ ಹೆಣ ಕಾಯೋದು ನಮ್ಮ ಹಣೆಬರಹ.

Additional information

Category

Publisher

Language

Kannada

Book Format

Ebook

Reviews

There are no reviews yet.

Only logged in customers who have purchased this product may leave a review.