ಹೇಗೆ ಬೇಕೋ ಹಾಗೆ ( Ebook )

Akshara K V
$5.00

  • Category: Plays
  • Author: Akshara K V
  • Publisher: Akshara Prakashana
  • Language: Kannada
  • Book Format: Ebook
  • Pages: 88
  • Year Published: 2014

ಹೇಗೆ ಬೇಕೋ ಹಾಗೆ ಶೇಕ್‌ಸ್ಪಿಯರನ ‘ಆಸ್ ಯು ಲೈಕ್ ಇಟ್’ ನಾಟಕದ ಕನ್ನಡ ರಂಗರೂಪ
‘ಹೇಗೆ ಬೇಕೋ ಹಾಗೆ’ ಅಂದರೆ ಮನಸೇಚ್ಛೆ ಎಂದಲ್ಲ; ನಮ್ಮಿಷ್ಟ ಬಂದಂತೆ ಎಂದೂ ಅಲ್ಲ; ಬದಲು, ನಮ್ಮ ಕಾಲದೇಶಗಳಿಗೆ ಹೇಗೆ ಸಮರ್ಪಕವಾಗಿ ಹೊಂದುತ್ತದೆಯೋ ಹಾಗೆ — ಎಂದು ಈ ಕನ್ನಡ ರೂಪ ಭಾವಿಸಿಕೊಳ್ಳುತ್ತದೆ. ಉದಾಹರಣೆಗೆ, ಆಧುನಿಕ ಕನ್ನಡವು ಎರಡು ಅತಿಗಳ ನಡುವೆ ಬೇರೆಬೇರೆ ಬಗೆಗಳಲ್ಲಿ ಶೇಕ್‌ಸ್ಪಿಯರನನ್ನು ಕಂಡುಕೊಂಡಿದೆ. ಒಂದು, ಸಾಹಿತ್ಯದ ವಿದ್ಯಾರ್ಥಿಗಳನ್ನೇ ಗಮನದಲ್ಲಿಟ್ಟು ರೂಪಿಸಿದಂತೆ ಕಾಣುವ, ಪದಕ್ಕೆ ಪದವಿಟ್ಟು ಕಟ್ಟಿದ ಅನುವಾದಗಳು; ಹಲವೊಮ್ಮೆ ಇವು ಆಡಲಿಕ್ಕೆ ಹಾಗಿರಲಿ, ಓದಲಿಕ್ಕೂ ಕಠಿಣವೆನ್ನಿಸುವ ಕಗ್ಗಗಳು. ಇನ್ನೊಂದು, ಅಲ್ಲಿಯ ಪಾತ್ರಗಳನ್ನೆಲ್ಲ ಇಲ್ಲಿಯ ಹೆಸರಿಗೆ ಬದಲಾಯಿಸಿ ಕಥಾಹಂದರವನ್ನು ಮಾತ್ರ ಉಳಿಸಿಕೊಂಡ ತೆಳು ರೂಪಾಂತರಗಳು; ಮೂಲದ ಕಾವ್ಯಗಾಢತೆಯೇ ಉಳಿಯದ ಇಂಥ ಆವೃತ್ತಿಗಳಿಂದ ಆಗುವ ಪ್ರಯೋಜನ ಅಷ್ಟಕ್ಕಷ್ಟೇ. ಇವೆರಡಕ್ಕೂ ನಡುವೆ ಹಲವು ವಿಧದ ಮಧ್ಯಮಾರ್ಗಗಳಿವೆ. ಆ ಹುಡುಕಾಟದಲ್ಲಿ ಹೊರಟು, ಈ ರಂಗರೂಪವು ಕೆಲವೊಮ್ಮೆ ಮೂಲವನ್ನು ಸಂಕ್ಷೇಪಿಸಿದೆ; ಅಲ್ಲಲ್ಲಿ ಮೂಲದ ಉಲ್ಲೇಖಗಳನ್ನು ಇಲ್ಲಿಗೆ ಸಲ್ಲುವಂತೆ ಬದಲಾಯಿಸಿದೆ. ಕಡೆಯ ಅಂಕದಲ್ಲಿ ಮೂಲದ ನಾಲ್ಕು ದೃಶ್ಯಗಳನ್ನು ಮೂರಾಗಿ ಕೂಡಿಸಿ ಕಟ್ಟಲಾಗಿದೆ.

Reviews

There are no reviews yet.

Only logged in customers who have purchased this product may leave a review.