ರಾಮನು ಯಜ್ಞಪರಿಪಾಲನೆಗಾಗಿ ವಿಶ್ವಾಮಿತ್ರನೊಂದಿಗೆ ಹೊರಟಲ್ಲಿಂದ ಮೊದಲುಗೊಂಡು ವನವಾಸವನ್ನು ಮುಗಿಸಿ ಹಿಂದಿರುಗಿ ಪಟ್ಟವನ್ನೇರುವವರೆಗಿನ ಶೌರ್ಯದ ಕಥೆಯನ್ನು ಈ ನಾಟಕವು ಹೇಳುವುದರಿಂದ  ಇದು – ಮಹಾ-ವೀರ-ಚರಿತ, ಕಡುಗಲಿಯ ನಿಡುಗಾಥೆ. ಆದರೆ ಈ ನಿಡುಗಾಥೆಯನ್ನು ಭವಭೂತಿಯು ನಿರ್ವಹಿಸಿರುವ ವಿಧಾನ ತುಂಬ ವಿಶೇಷವಾದದ್ದು; ಕಿರಿದರಲ್ಲಿ ಹಿರಿದನ್ನು ಹಿಡಿಯುವ ಮಹತ್ವಾಕಾಂಕ್ಷೆಯದು. ವಿಶ್ವಾಮಿತ್ರನ ಆಶ್ರಮ, ಪಂಚವಟಿ, ಲಂಕೆ ಮತ್ತು ಮರುಪ್ರಯಾಣದ ಆಕಾಶಮಾರ್ಗ – ಈ ನಾಲ್ಕೇ ಸ್ಥಳಗಳಲ್ಲಿ ನಡೆಯುವಂತೆ ಇಡಿಯ ರಾಮಾಯಣದ ಕಥೆಯನ್ನು ಈ ನಾಟಕವು ಏಳು ಅಂಕಗಳಲ್ಲಿ ಪ್ರಸ್ತುತಪಡಿಸುತ್ತದೆ. ಜತೆಗೆ, ಶೂರ್ಪಣಖಿಯೇ ಮಂಥರೆಯ ರೂಪದಲ್ಲಿ ಕಾಣಿಸಿಕೊಳ್ಳುವುದೇ ಮೊದಲಾಗಿ ರಾಮಾಯಣದ ಹಲವು ಹೊಸ ಬಗೆಯ ವ್ಯಾಖ್ಯಾನಗಳೂ ಈ ನಾಟಕದಲ್ಲಿವೆ. ಮುಂದೆ ಸಂಸ್ಕೃತದಲ್ಲಿ ಕಾಣಿಸಿಕೊಂಡ ರಾಮಾಯಣದ ಹೊಸ ಬಗೆಯ ವ್ಯಾಖ್ಯಾನಗಳಿಗೆಲ್ಲ ಅಡಿಪಾಯ ಹಾಕಿಕೊಟ್ಟ ಕೃತಿ ಇದೆಂದೂ ಹೇಳಲಾಗುತ್ತದೆ. ಹಾಗಿದ್ದರೂ, ಇದರ ಮುಕ್ಕಾಲು ಭಾಗ ಮಾತ್ರ ಭವಭೂತಿ ಬರೆದದ್ದು, ಉಳಿದದ್ದು ಇನ್ನಿಬ್ಬರು ಪ್ರತ್ಯೇಕವಾಗಿ ಬರೆದು ಪೂರ್ಣಗೊಳಿಸಿದ್ದು. ಅಂಥ ನಾಟಕ-ಸ್ವಾರಸ್ಯಗಳನ್ನು ಇವತ್ತಿನ ರಂಗಭೂಮಿಗೆ ಉಪಯುಕ್ತವಾಗುವಂತೆ ಕನ್ನಡೀಕರಿಸುವ ಪ್ರಯತ್ನ ಇಲ್ಲಿದೆ.

Additional information

Category

Publisher

Book Format

Ebook

Language

Kannada

Reviews

There are no reviews yet.

Only logged in customers who have purchased this product may leave a review.