ಸಮಷ್ಟಿ ಪ್ರಕ್ರಿಯೆಯೇ ನಿಜವಾದ ರಂಗಭಾಷೆ ಎಂದು ಸಾರುವ ಚನ್ನಕೇಶವ ಅವರ ನಾಟಕಗಳು
ಲೋಕೋತ್ತಮೆ: ಚನ್ನಕೇಶವ ಮತ್ತು ಲೇಖಕರಾದ ಡಾ. ವಿಶಾಲಾ ವಾರಣಾಶಿ ಅವರು ಭಾವಾನುವಾದ ಮಾಡಿದ, ಸುಮಾರು ಕ್ರಿ.ಪೂ ೪೧೧ ರಲ್ಲಿ ಗ್ರೀಕ್ ನಾಟಕಕಾರ ಅರಿಸ್ಟೋಫಿನಿಸ್ ನಿಂದ ರಚಿತವಾದ ನಾಟಕವಿದು. ನೀನಾಸಮ್ ತಿರುಗಾಟಕ್ಕೆ ಚನ್ನಕೇಶವ ಅವರು ಯಶಸ್ವಿಯಾಗಿ ಈ ನಾಟಕವನ್ನು ನಿರ್ದೇಶನ ಮಾಡಿದ್ದರು ಕೂಡ.
ಕಾಲಯಾತ್ರೆ: ರವೀಂದ್ರನಾಥ ಟ್ಯಾಗೋರರ ಅಷ್ಟೇನೂ ಪ್ರಸಿದ್ಧವಲ್ಲದ ಸಣ್ಣ ರೂಪಕದಂತಹ ನಾಟಕ ಇದು. ಇದನ್ನು ನೇರ ಬಂಗಾಳಿಯಿಂದ ಮೀರಾ ಚಕ್ರವರ್ತಿಯವರ ಸಹಾಯದಿಂದ ಕನ್ನಡಕ್ಕೆ ತಂದಿದ್ದಾರೆ ಚನ್ನಕೇಶವ ಅವರು. ಅದೆಷ್ಟು ಚೆನ್ನಾಗಿ ಇದನ್ನು ಕನ್ನಡಕ್ಕೆ ತಂದಿದ್ದಾರೆ ಎಂದರೆ ಎಂದರೆ ಓದುತ್ತಿದ್ದರೆ ಖುಷಿಯಾಗುತ್ತದೆ. ಅನಾದಿಕಾಲದಿಂದಲೂ ಇರುವ ಮಹಾಕಾಲದ ರಥವು ಇಂದು ಯಾರು ಬಂದು ಎಷ್ಟೇ ಬೊಬ್ಬೆ ಹೊಡೆದರೂ ಒಂದಿಂಚೂ ಅಲುಗದೆ ನಿಂತುಬಿಟ್ಟಿದೆ! ಹಿಂದೆಲ್ಲ ರಾಜ ಮಹಾರಾಜರು ಬಂದು ಪೂಜೆ ಮಾಡಿ ಕೈ ಹಚ್ಚುತ್ತಿದ್ದಂತೆ ಚಲಿಸುತ್ತಿತ್ತು, ನಂತರ ರಾಜ ಪುರೋಹಿತರುಗಳು ಬಂದು ಕೈಮುಗಿದು ಕೈ ಹಚ್ಚಿದಾಗ ಚಲಿಸುತ್ತಿತ್ತು, ತದನಂತರ ಪಟ್ಟಣಶೆಟ್ಟಿಗಳು ಬಂದಾಗ ಚಲಿಸುತ್ತಿತ್ತು. ಆದರೆ ಇಂದು ಇವ್ಯಾರಿಗೂ ಅದು ಕಮಕ್ಕಿಮಕ್ಕೆನ್ನದೆ ತನ್ನ ಇಂದಿನ ಚಾಲಕರಾದ ಶೂದ್ರರ ದಾರಿ ಕಾಯುತ್ತ ಕುಳಿತಿದೆ ಈ ಮಹಾಕಾಲನ ರಥ! ಕುವೆಂಪುರವರ ಬಹಳ ಪ್ರಸಿದ್ಧ ನಾಟಕ ಶೂದ್ರತಪಸ್ವಿಯನ್ನು ನೆನಪಿಸುವಂತಿದೆ ಈ ನಾಟಕ. ಮತ್ತೊಮ್ಮೆ ಸಂಗೀತ, ಮೇಳ, ಹಾಗೂ ರಂಗಸಜ್ಜಿಕೆಯನ್ನು ಯಶಸ್ವಿಯಾಗಿ ರಂಗದ ಮೇಲೆ ಕಾಣಬಹುದಾದ ನಾಟಕವಿದು.
ಲೋಕೋತ್ತಮೆ ಮತ್ತು ಕಾಲಯಾತ್ರೆ ( Ebook )
$1.32
- Publisher: Theatre Tatkaal Books
- Book Format: Ebook
- Language: Kannada
- Pages: 82
- Year Published: 2022
- Category: Plays
Only logged in customers who have purchased this product may leave a review.
Reviews
There are no reviews yet.