
ಮತ್ತೊಬ್ಬ ರಾಧೆ
Basavaraj Sabarad$0.85 $0.51
Product details
Category | Plays |
---|---|
Author | Basavaraj Sabarad |
Publisher | Manohara Granthamala |
Language | Kannada |
Book Format | Ebook |
ಮತ್ತೊಬ್ಬ ರಾಧೆ
(ಕೀರ್ತನಕಾರ್ತಿ ಗಲಗಲಿ ಅವ್ವನವರನ್ನು ಕುರಿತ ನಾಟಕ)
ಈ ನಾಟಕವು ಹದಿನೆಂಟನೇ ಶತಮಾನದ ಕೀರ್ತನಕಾರ್ತಿ ಗಲಗಲಿ ಅವ್ವನವರನ್ನು ಕುರಿತದ್ದಾಗಿದೆ. ಬಾಗಲಕೋಟ ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿಯಲ್ಲಿ ಪ್ರಸಿದ್ಧ ಪಂಡಿತರಾಗಿದ್ದ ಗಲಗಲಿ ಮುದಗಲ್ಲಾಚಾರ್ಯರ ಕಿರುಪತ್ನಿಯಾಗಿ ರಮಾ ತನ್ನ ಹನ್ನೆರಡು ವರ್ಷದಲ್ಲಿಯೇ ಮದುವೆಯಾಗಿ ಗಲಗಲಿ ಗ್ರಾಮವನ್ನು ಪ್ರವೇಶಿಸಿದಳು. ಮದುವೆಯಾದ ಎಂಟು ದಿನಕ್ಕೇ ವಿಧವೆಯಾದಳು. ವಿಧವೆಯಾಗಿ ಬತ್ತಿ ಹೊಸೆಯದೆ, ನ್ಯಾಯಪಂಡಿತಳಾಗಿ ಪೇಶ್ವೇ ಅರಸರ ಪಂಡಿತರನ್ನು ಸೋಲಿಸಿ, ಪುಣೆಯ ಅರಸರಿಂದ ವರ್ಷಾಶನ ಪಡೆದಳು. ಅವ್ವನವರ ಮುನ್ನೂರು ಕೀರ್ತನೆಗಳು ಪ್ರಕಟವಾಗಿವೆ. ಕನ್ನಡದಲ್ಲಿ ಕೀರ್ತನೆ ರಚಿಸಿದ ಮೊದಲ ಮಹಿಳೆಯೆಂಬ ಹೆಗ್ಗಳಿಕೆಗೆ ಗಲಗಲಿ ಅವ್ವ ಸಾಕ್ಷಿಯಾಗಿದ್ದಾಳೆ. ಪುಟ್ಟ ವಿಧವೆಯಾಗಿ ಕಾಣಿಸಿಕೊಂಡ ಈ ಮಹಿಳೆ ಗಲಗಲಿ ಅವ್ವನಾಗಿ ಬೆಳೆದು ನಿಂತದ್ದು, ಅಧ್ಯಾತ್ಮ ಮತ್ತು ಸಾಹಿತ್ಯದಲ್ಲಿ ಮಹತ್ತರ ಸಾಧನೆ ಮಾಡಿದ್ದು ಈಗ ಚರಿತ್ರೆಗೆ ಸೇರಿದ ವಿಷಯವಾಗಿದೆ.
ಗಲಗಲಿ ಅವ್ವನವರ ವೈಯಕ್ತಿಕ ಬದುಕಿನ ವಿವರಗಳನ್ನು ವಿವರಿಸುವುದು ಈ ನಾಟಕದ ಉದ್ದೇಶವಲ್ಲ. ಅವ್ವನನ್ನು ಒಂದು ಪ್ರತಿಮೆಯನ್ನಾಗಿಸಿಕೊಂಡು, ಶತಮಾನಗಳಿಂದ ಸ್ತ್ರೀ ಈ ದೇಶವ್ಯವಸ್ಥೆಯಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಕುರಿತು ಚರ್ಚಿಸಲಾಗಿದೆ. ಹೆಣ್ಣೊಬ್ಬಳು ಅಧ್ಯಾತ್ಮದೆತ್ತರಕ್ಕೇರಿದ ಸ್ಥಿತಿಯನ್ನು ಗುರುತಿಸಲಾಗಿದೆ.
Customers also liked...
-
Girish Karnad
$0.60$0.36 -
Girish Karnad
$1.09$0.65 -
Akshara K V
$5.00 -
Vivek Shanbhag
$5.00 -
Akshara K V
$5.00 -
Akshara K V
$5.00