ಹಾವು-ಏಣಿಯ ಆಟ; ಆ ಆಟವನ್ನು ಆಡುವ ಹಾಸು. ಭಾರತದಲ್ಲಿ ಹುಟ್ಟಿ ಪ್ರಸಾರಗೊಂಡ ಆಟ ಇದೆಂದು ಪ್ರತೀತಿ. ವೈಕುಂಠ ಏಕಾದಶಿಯ ರಾತ್ರಿಯಲ್ಲಿ ಹೊತ್ತು ಕಳೆಯಲಿಕ್ಕಾಗಿ ಈ ಆಟ ಆಡಲಾಗುತ್ತಿತ್ತಂತೆ. ಹಲವು ಮಜಲುಗಳಲ್ಲಿ ಕಷ್ಟಸುಖಗಳನ್ನು ದಾಟಿ ಮೋಕ್ಷಕ್ಕೆ ತಲುಪುವ ಆಧ್ಯಾತ್ಮಿಕ ಅರ್ಥಗಳ ಹಿನ್ನೆಲೆಯೂ ಈ ಆಟಕ್ಕಿದೆಯಂತೆ. ತೆಲುಗುನಾಡಿನಲ್ಲಿ ಪ್ರಸಿದ್ಧವಾಗಿದ್ದ ಈ ಆಟವನ್ನು ಪಾಶ್ಚಿಮಾತ್ಯರೊಬ್ಬರು ೧೮೯೨ರಲ್ಲಿ ತಮ್ಮಲ್ಲಿಗೆ ಒಯ್ದು ಅಳವಡಿಸಿ ಇದಕ್ಕೆ ’ಸ್ನೇಕ್ಸ್ ಎಂಡ್ ಲ್ಯಾಡರ್‍ಸ್’ ಎಂಬ ಹೆಸರು ಕೊಟ್ಟರೆಂದು ಐತಿಹ್ಯವಿದೆ.ಹಲವು ವರ್ಷಗಳಿಂದ ನನ್ನ ತಲೆಯಲ್ಲಿ ಕೂತು, ಬೇರೆಬೇರೆ ರೂಪಗಳಲ್ಲಿ ಹೊರಗೆ ಬರಲಿಕ್ಕೆ ಹವಣಿಸುತ್ತಿದ್ದ ಈ ನಾಟಕವು ಈಗ ಪ್ರಸ್ತುತ ರೂಪದಲ್ಲಿ ಮೈದಾಳಿಕೊಂಡಿದೆ. ಮತ್ತು, ಹಾಗೆ ರೂಪುಗೊಳ್ಳುವಾಗ, ಕನ್ನಡ ಸಾಹಿತ್ಯ-ರಂಗಭೂಮಿಗಳ ಕೆಲವು ಸಾಲಸೋಲಗಳನ್ನು ಬೆನ್ನಮೇಲೆ ಏರಿಸಿಕೊಂಡೇ ಬಂದಿದೆ. ನನ್ನ ಹಿಂದಿನ ನಾಟಕಗಳಂತೆಯೇ ಈ ನಾಟಕದಲ್ಲೂ ಆರಂಭ ಮತ್ತು ಅಂತ್ಯಕ್ಕೆ ನಾನು ಸುಪ್ರಸಿದ್ಧ ಕನ್ನಡ ಕವಿತೆಯೊಂದನ್ನು ಬಳಸಿಕೊಂಡಿದ್ದೇನೆ.

Additional information

Publisher

Book Format

Ebook

Language

Kannada

Category

Reviews

There are no reviews yet.

Only logged in customers who have purchased this product may leave a review.