‘ಸಂಸಾರದಲ್ಲಿ ಸನಿದಪ’ ಕೃತಿಯು ಪ್ರಸಿದ್ಧ ಇಟಾಲಿಯನ್ ನಾಟಕಕಾರ ದಾರಿಯೋ ಫೋನ ‘ದಿ ವರ್ಚುವಸ್ ಬರ್ಗ್ಲರ್’ — ಇಟಾಲಿಯನ್ ಭಾಷೆಯಲ್ಲಿ ‘ನಾ ಟುಟಿ ಇ ಲಾದ್ರಿ ವೆಂಗೊನೊ ಪೆರ್ ನ್ಯುವಾಸೀರ್’ — ಕೃತಿಯ ಕನ್ನಡ ಮರುರೂಪ. ೧೯೯೭ರಲ್ಲಿ ನೊಬೆಲ್ ಪ್ರಶಸ್ತಿ ಪಡೆದು ಲೋಕವಿಖ್ಯಾತಿಯನ್ನು ಗಳಿಸಿದ ಫೋ ತನ್ನ ರಂಗಜೀವನದ ಆರಂಭಕಾಲದಲ್ಲಿ ಬರೆದ ಒಂದು ಕೃತಿ ಇದು. ೧೯೫೮ರಲ್ಲಿ, ಅಂದರೆ ಆಗಿನ್ನೂ ದಾರಿಯೋ ಫೋ ತನ್ನ ಎಡಪಂಥೀಯ ರಾಜಕೀಯ ಬದ್ಧತೆಯನ್ನು ಸ್ಪಷ್ಟವಾಗಿ ಘೋಷಿಸಿಕೊಂಡಿರದಂಥ ಕಾಲದಲ್ಲಿ, ಆತನ ಪುಟ್ಟ ತಂಡವು ಮೊದಲಬಾರಿಗೆ ಇಟಾಲಿಯಾದ್ಯಂತ ತಿರುಗಾಟ ನಡೆಸಲು ಹೊರಟಾಗ, ಅದಕ್ಕಾಗಿ ಆತ ಬರೆದು ತಯಾರಿಸಿದ ಏಕಾಂಕ ಮಾಲಿಕೆಯಲ್ಲಿ ಈ ನಾಟಕವೂ ಒಂದು.
ಈ ಇಡೀ ನಾಟಕ ನಡೆಯುವುದು ಒಂದು ಮನೆಯ ನಾಲ್ಕು ಗೋಡೆಗಳ ನಡುವೆಯೇ. ಆ ಮನೆಗೆ ಕಾರಣಾಂತರಗಳಿಂದ ಬರುವ ಮೂರ್ನಾಲ್ಕು ಕುಟುಂಬಗಳನ್ನಷ್ಟೇ ಇಟ್ಟುಕೊಂಡು ಈ ನಾಟಕದ ಒಟ್ಟೂ ಕಥೆ ಚಲಿಸುತ್ತದೆ.

Additional information

Category

Author

Publisher

Language

Kannada

Book Format

Ebook

Pages

60

Year Published

2002

Reviews

There are no reviews yet.

Only logged in customers who have purchased this product may leave a review.