
ಸ್ವಯಂವರಲೋಕ
Akshara K V
₹55.00
Product details
Category | Plays |
---|---|
Author | Akshara K V |
Publisher | Akshara Prakashana |
Language | Kannada |
Book Format | Ebook |
Year Published | 2007 |
ಹರಿಯೋ ಹೊಳೆ ಅಂದರೆ ಏನು?
ಕವಿಗಳು ಹೇಳತಾರೆ —
ಸದಾ ನಿಂತೇ ಇರೋ ಬೆಟ್ಟಕ್ಕೆ
ಓಡಾಡಬೇಕು ಅನ್ನಿಸಿದಾಗ, ಅಥವಾ
ಬಾಯಿಲ್ಲದೆ ಇರುವ ಕಾಡಿಗೆ
ಮಾತಾಡಬೇಕು ಅನ್ನಿಸಿದಾಗ, ಮತ್ತೆ
ನಮ್ಮನ್ನೆಲ್ಲ ಹೊತ್ತ ಭೂಮಿಗೆ
ನಗಬೇಕು ಅನ್ನಿಸಿದಾಗ,
ಆ ಎಲ್ಲ ಆಕಾಂಕ್ಷೆಗಳೇ ಪಡೆಯುವ
ರೂಪ — ಹೊಳೆ.
ಆದರೆ ಮನುಷ್ಯರ ಅಪೇಕ್ಷೆ
ಅದಕ್ಕೆ ತದ್ವಿರುದ್ಧ.
ಹರಿಯೋ ಹೊಳೆಯನ್ನ
ಒಡ್ಡು ಕಟ್ಟಿ ನಿಲ್ಲಿಸಬೇಕು,
ಅದರ ಕಸುವಿನಲ್ಲಿ ನೀರನ್ನು ಕಡೆದು
ಕರೆಂಟು ಹುಟ್ಟಿಸಬೇಕು — ಅನ್ನೋದು
ಇವತ್ತಿನ ಮನುಷ್ಯರ ಅಪೇಕ್ಷೆ.
ಹೀಗೆ, ಪಕೃತಿಯ ಆಕಾಂಕ್ಷೆ
ಮತ್ತು ಮನುಷ್ಯರ ಅಪೇಕ್ಷೆ
ಎದರಾಬದರಾ ನಿಂತು
ಗುದಮುರಿಗೆ ಆಡಿದಾಗ
ಹುಟ್ಟಿದ್ದು ನಮ್ಮ ಊರು —
ಹೆಸರು, ಹಳೆಯೂರು.
Customers also liked...
-
Prasanna
₹120.00₹72.00 -
Girish Karnad
₹50.00₹30.00 -
Lohit Naikar
₹80.00₹48.00 -
Akshara K V
₹70.00 -
Girish Karnad
₹80.00₹48.00 -
Prakash Garud
₹60.00₹36.00