
ತೂಗು ತೊಟ್ಟಿಲು ಮತ್ತು ಇತರ ನಾಟಕಗಳು
Channakeshava
$1.51
Product details
Category | Plays |
---|---|
Author | Channakeshava |
Publisher | Theatre Tatkaal Books |
Book Format | Ebook |
Pages | 124 |
Language | Kannada |
Year Published | 2022 |
ISBN | 978-81-955676-1-4 |
ತೂಗು ತೊಟ್ಟಿಲು ಮತ್ತು ಕಾಡಿನಲ್ಲಿ ಕಥೆ: ಇವೆರಡೂ ಬಹಳ ರಸವತ್ತಾದ ಮಕ್ಕಳ ನಾಟಕಗಳು. ಇವನ್ನು ಚನ್ನಕೇಶವ ಅವರು ಧಾರವಾಡದ ಬಾಲಬಳಗಕ್ಕೆ ಮತ್ತು ಶಿರಸಿಯಲ್ಲಿ ಮಾಡಿಸಿದ್ದರು ಎಂಬ ಸೂಚನೆ ನಾಟಕದಲ್ಲೇ ಬರುತ್ತದೆ. ಮಕ್ಕಳ ನಾಟಕ ಹೇಗಿರಬೇಕು ಎಂಬುದಕ್ಕೆ ಬಹಳ ಒಳ್ಳೆಯ ಉದಾಹರಣೆ ಈ ಎರಡೂ ನಾಟಕಗಳು. ಜನಪ್ರಿಯ ದೇವರಾದ ಗಣಪತಿಯ ವಾಹನವಾದ ಇಲಿಯೊಂದು ಅಷ್ಟುದೊಡ್ಡ ಡೊಳ್ಳುಹೊಟ್ಟೆಯನ್ನು ಹೊತ್ತುಕೊಂಡ ಗಣಪ ತನ್ನಂತಹ ಚಿಕ್ಕದಾದ ಕ್ಷುದ್ರಜೀವಿಯನ್ನು ತನ್ನ ವಾಹನವಾಗಿ ಇಟ್ಟುಕೊಂಡು ಮಾಡುತ್ತಿರುವ ಶೋಷಣೆಯಿಂದ ನೊಂದು ಒಂದು ದಿನ ಅವನಿಂದ ತಪ್ಪಿಸಿಕೊಂಡು ತನ್ನ ಸಂಸಾರ ಸಮೇತ ಒಬ್ಬ ಮುದಿ ದಂಪತಿಗಳ ಮನೆಯಲ್ಲಿ ವಾಸವಾಗಿರುತ್ತವೆ. ತಮ್ಮ ಮಕ್ಕಳನ್ನು ವಿದೇಶಕ್ಕೆ ಕಳಿಸಿ ಇಲ್ಲಿ ಒಂಟಿಯಾಗಿರುವ ಈ ಮುದಿ ದಂಪತಿಗಳು ಏಕತಾನತೆ ಕಳೆಯಲು ಒಂದು ಬೆಕ್ಕನ್ನು ತಂದು ಸಾಕತೊಡಗುತ್ತಾರೆ. ಇದರಿಂದ ದಿಕ್ಕೆಟ್ಟ ಇಲಿಯ ಸಂಸಾರ ಅಲ್ಲಿಯೂ ತಮ್ಮ ನೆಲೆ ಕಳೆದು ಕೊಂಡು ಕಾಡಿಗೆ ಹೋಗುತ್ತವೆ.
ಇಲ್ಲಿಂದ ಮತ್ತೊಂದು ನಾಟಕವಾದ ಕಾಡಿನಲ್ಲಿ ಕಥೆ ಶುರುವಾಗುತ್ತದೆ. ಕಾಡಿನಲ್ಲಿ ಮತ್ತೊಂದು ಬಗೆಯ ಕಷ್ಟಗಳನ್ನು ಆ ಇಲಿಗಳು ಅನುಭವಿಸುತ್ತವೆ! ಕಾಡಿನ ಅನೇಕ ಪ್ರಾಣಿ ಪಕ್ಷಿಗಳೇ ಇಲ್ಲಿ ಪಾತ್ರಧಾರಿಗಳು. ಈ ಭಾಗವನ್ನು ಮೇಲಿನ ನಾಟಕದ ಮುಂದುವರಿದ ಭಾಗವಾಗಿಯೂ ಆಡಬಹುದು ಅಥವಾ ಪ್ರತ್ಯೇಕ ನಾಟಕವನ್ನಾಗಿಯೂ ಆಡಬಹುದು. ಮಕ್ಕಳ ನಾಟಕ ಎಂದ ಕೂಡಲೆ ಕೆಲವರು ಒಂದೋ ಬೋಧನೆಗಳನ್ನು ಹೇಳುವುದೋ ಅಥವಾ ಅತಿಯಾದ ಅತಿಮಾನುಷ ಪಾತ್ರಗಳ ಭ್ರಮಾಲೋಕ ಸೃಷ್ಟಿಸುವಂತೆ ಮಾಡುವುದು ಎಂದುಕೊಂಡಿರುತ್ತಾರೆ; ಅನೇಕ ನಾಟಕಕಾರರು ಹಾಗೆಯೇ ಬರೆದಿದ್ದಾರೆ ಕೂಡ. ಆದರೆ ಈ ನಾಟಕ ರಂಜನೆಯ ಮೂಲಕವೇ ನಮ್ಮ ಸುತ್ತ ಮುತ್ತ ನಡೆಯುತ್ತಿರುವ ವರ್ಣಬೇದ, ಜಾತಿಬೇದ, ಕೋಮುವಾದ ಮೊದಲಾದ ಜಟಿಲ ವಸ್ತು ವಿಷಯಗಳನ್ನು ಬಹಳ ಸರಳವಾಗಿ ಮಕ್ಕಳಷ್ಟೆ ಅಲ್ಲ ಅದನ್ನು ನೋಡುವ ದೊಡ್ಡವರಿಗೂ ಮನಮುಟ್ಟುವಂತೆ ಹೇಳುತ್ತದೆ!
ಅಕಟ ವಿಕಟ ಪ್ರಹಸನ: ಇದು ಪ್ರಖ್ಯಾತ ಕಲಾವಿದರಾದ ಕೆ ಜಿ ಸುಬ್ರಹ್ಮಣ್ಯನ್ ರವರ ‘ಫ್ರೆಂಡ್ಸ್ ದಿ ಆಗರ್ಸ್’ ಎಂಬ ಇಂಗ್ಲಿಷ್ ಕತೆಯ ನಾಟಕ ರೂಪ. ಅಕಟ ಹಾಗೂ ವಿಕಟ ಎಂಬ ದೆತ್ಯ ಆಧುನಿಕ ರಾಕ್ಷಸರ ಕಥೆ ಇದು . ಚಿತ್ರ ಕಲಾವಿದರಾದ ಸು ಬ್ರಹ್ಮಣ್ಯನ್ ರವರು ಮಕ್ಕಳಿಗಾಗಿ ಇಂಥ ಅನೇಕ ಸಣ್ಣ ಸಣ್ಣ ಕತೆಗಳನ್ನು ಬರೆದು ಪ್ರಕಟಿಸಿದ್ದಾರೆ. ಅವರ ಕಥೆಗಳು ಬಹುತೇಕ ಚಿತ್ರವತ್ತಾಗಿರುತ್ತ ಪ್ರಸ್ತುತ ದೇಶ ಕಾಲದ ಸನ್ನಿವೇಶಗಳನ್ನು ವ್ಯಂಗ್ಯದ ಧಾಟಿಯಲ್ಲಿ ಹೇಳುತ್ತಿರುತ್ತವೆ. ಈ ಕಥೆಯಲ್ಲೂ ಸಹ ಮಿತಿಮೀರಿದ ಕೈಗಾರಿಕೀಕರಣ , ಬಂಡವಾಳಶಾಯಿಂದ ಉದ್ಭವಿಸುವ ಆಧುನಿಕ ಕಾಲದ ಸಂಕಷ್ಟವನ್ನು ಈ ಕತೆ ವ್ಯಂಗ್ಯವಾಗಿ ಹೇಳುತ್ತದೆ. ಇದರಲ್ಲಿ ಮನುಷ್ಯರ ಜೊತೆಗೆ ಬಸ್ಸು, ರೋಡು, ಹೈವೇ, ರೈಲು, ಏರೋಪ್ಲೆನು , ಬಿಲ್ಡಿಂಗು ಮೊದಲಾದವುಗಳು ಪಾತ್ರಗ ಳಾಗಿ ಬರುತ್ತವೆ! ಸಂಗೀತ ಹಾಗೂ ನಾಟಕದ ಮೇಳದ ಗುಂಪು, ರಂಗವಿನ್ಯಾಸ, ರಂಗಸಜ್ಜಿಕೆ, ವಸ್ತ್ರ, ವೇಷಭೂಷಣ ಇವೆಲ್ಲವೂ ಬಹಳ ಮುಖ್ಯವಾದ ಪಾತ್ರವನ್ನು ವಹಿಸುವ ನಾಟಕವಿದು. ಸ್ವತಃ ಕಲಾವಿದರಾಗಿರುವ ಚನ್ನಕೇಶವ ಅಂಥವರು ಮಾತ್ರ ಇಂಥ ಕಥೆಗಳನ್ನು ತೆಗೆದುಕೊಂಡು ರಂಗದ ಮೇಲೆ ಸಶಕ್ತವಾಗಿ ತರಬಲ್ಲರು ಎನಿಸುತ್ತದೆ.
Customers also liked...
-
Prasanna
$1.45$0.87 -
Lohit Naikar
$0.97$0.58 -
Girish Karnad
$1.09$0.65 -
Girish Karnad
$1.21$0.73 -
Dheerendra Dhanakashirur
$0.00 -
Girish Karnad
$0.60$0.36