ನಾಟಕ ಮತ್ತು ರೂಪಾಂತರ

ಪಾತ್ರಗಳು

ಸೂತ್ರಧಾರ
ಅಗ್ನಿಮಿತ್ರ: ರಾಜ
ಧಾರಿಣಿ ದೇವಿ: ಹಿರಿಯ ರಾಣಿ
ಇರಾವತಿ: ಕಿರಿಯ ರಾಣಿ
ಮಾಲವಿಕೆ: ನಾಟಕದ ನಾಯಕಿ
ಪರಿವ್ರಾಜಿಕೆ: ಪಂಡಿತೆ
ವಿದೂಷಕ
ವಾಹತಕ: ಮಂತ್ರಿ
ಗಣದಾಸ: ನಾಟ್ಯಾಚಾರ್ಯ
ಹರದತ್ತ: ನಾಟ್ಯಾಚಾರ್ಯ
ಬಕುಲಾವಲಿಕೆ: ಸಖಿ
ಕೌಮುದಿಕೆ: ಸಖಿ
ಮಧುಕಾರಿಕೆ: ಸಖಿ
ನಿಪುಣಿಕೆ: ಸಖಿ
ಸಮಾಹಿತಕೆ: ಉದ್ಯಾನಪಾಲಕಿ
ಮಾಧವಿಕೆ: ರಕ್ಷಕಿ
ಜಯಸೇನೆ: ಪ್ರತೀಹಾರಿ
ಸಾರಸಕ: ಕುಬ್ಜ (ಖೋಜಾ)
ಕಂಚುಕಿ, ವಿದೇಶೀಯ, ದುಭಾಷಿ,
ವೈತಾಲಿಕರು,
ವಿದರ್ಭದ ಸಂಗೀತಗಾರ್ತಿಯರು

ಮಹಾಕವಿ ಕಾಲಿದಾಸನ ಮಾಲವಿಕಾಗ್ನಿಮಿತ್ರ ನಾಟಕವನ್ನು ಪ್ರಯೋಗಿಸತಕ್ಕದ್ದೆಂತ ನಾವು ಆಲೋಚಿಸಲಾಗಿ – ಆ ನಾಟಕದ ಪ್ರಾರಂಭದಲ್ಲಿಯೇ ‘ಪುರಾಣಮಿತ್ಯೇವ ನ ಸಾಧು ಸರ್ವಮ್‘ ಇತ್ಯಾದಿಯಾಗಿ ಅಂದರೆ – ಹಳೆಯದೆಲ್ಲವೂ ಬಹಳೇ ಲಾಯಖ್ಖಾದ್ದು ಅನ್ನುವುದಲ್ಲ ಅಥವಾ ಅದೇ ಥರದಲ್ಲಿ ಹೊಸದೆಲ್ಲವೂ ಕಳಪೆಯೆನ್ನುವುದೂ ಸಲ್ಲ ಅಂತ ಕಾಲಿದಾಸನೇ ಸ್ವಯಮ್ ಸೂಕ್ತಿಯಿಟ್ಟು ಹೊಸದನ್ನು ಸಮರ್ಥಿಸಿರುವ ವಿಷಯವು ಜನಜನಿತವಾಗಿರಲಿಕ್ಕಾಗಿ – ಅವತ್ತು ಹೊಸದಾಗಿ ರಚಿಸಿದ್ದ ಆ ನಾಟಕವು ಇದೀಗ ಹದಿನೈದು ಶತಮಾನಗಳಷ್ಟು ಹಳೇ ಹಳತಾಗಿ ಹೋಗಿರುವ ಸಂದರ್ಭ – ಈಗ ನಾವಾದರೂ ಅದೇನು ಹೇಳುವುದೆಂದು ಚಿಂತಿಸುತ್ತಿರಲಿರಲು ನಮ್ಮವರೊಬ್ಬರು ಮುಂದೆ ಬಂದು, ಚಿಂತೆಯಾದರೂ ಯಾತಕ್ಕೆ, ಅದನ್ನೇ ಹೊಸತಾಗಿ ರಚಿಸಿಕೊಂಡರಾಯ್ತು ಅಂತ ಪರಿಹಾರ ಹೇಳಿದ್ದಲ್ಲದೆ ಸ್ವಥಾ ಅದನ್ನು ಹೊಸತಾಗಿ ರಚಿಸಿಕೊಟ್ಟು ಮಾಲವಿಕಾಗ್ನಿಮಿತ್ರ ಅಂತಲಿದ್ದ ಅದರ ನಾಮಾಂಕಿತವನ್ನು ವಿದಿಶೆಯ ವಿದೂಷಕನೆಂತ ಬದಲಿಸಿಕೊಟ್ಟಿರಲಾಗಿ –
ಶೇಕಡಾ ತೊಂಬತ್ತು ಹಳತಕ್ಕೆ ಹತ್ತು ಹೊಸತನ್ನು ನೆಯ್ದು ಇದೀಗ ಇಡೀ ನಾಟಕವೇ ಹೊಸತೆಂಬಂತೆ ಕಾಣುತ್ತಿರಲು – ಸಭ್ಯರಿಗೆ ಶರಣೆಂದು ಅದನ್ನು ಪ್ರಯೋಗಿಸುತ್ತಿದ್ದೇವೆ, ಕಂಡು ಮೆಚ್ಚಿಕೊಳ್ಳುವುದು.
ಇಂತೀ ಪ್ರಯೋಗದ ಪ್ರಸ್ತಾವನೆಯಾದ ಅನಂತರದಲ್ಲಿ ಕಥಾ ಪೀಠಿಕೆಯನ್ನು ಮಂಡಿಸುವುದಾದರೆ –
ವಿದಿಶಾ ವಿದಿಶಾ ಅಂತ ಸಮಸ್ತ ವೈಭವಗಳಿಂದ ಕೂಡಿದ ರಾಜ್ಯವುಂಟು –

Additional information

Language

Kannada

Publisher

Reviews

There are no reviews yet.

Only logged in customers who have purchased this product may leave a review.