Ebook

ಯಯಾತಿ

Author: Girish Karnad

$0.58

‘ಕವಿಯಾಗಬೇಕು’ ಎಂದು ಕೊಂಡಿದ್ದ ಗಿರೀಶ್ ಕಾರ್ನಾಡ್ ಅವರು ಬರೆದ ಮೊದಲ ನಾಟಕ. ರೋಡ್ಸ್ ಸ್ಕಾಲರ್ಶಿಪ್ ಮೇಲೆ ಇಂಗ್ಲೆಂಡಿಗೆ ತೆರಳುವ ಮುನ್ನ ತನ್ನ ’ಯಯಾತಿ’ಯ ಹಸ್ತಪ್ರತಿಯನ್ನು ಮನೋಹರ ಗ್ರಂಥಮಾಲೆಯ ಜಿ.ಬಿ. ಜೋಶಿ ಅವರ ಬಳಿ ನೀಡಿದ್ದರು ಗಿರೀಶ್ ಕಾರ್ನಾಡ್ ಅವರು.

ಕೀರ್ತಿನಾಥ ಕುರ್ತಕೋಟಿ ಅವರ ಸಲಹೆ-ಸೂಚನೆಯ ಮೇರೆಗೆ ‘ಯಯಾತಿ’ ಮೊದಲ ಬಾರಿಗೆ ೧೯೬೧ರಲ್ಲಿ ಪ್ರಕಟವಾಗಿತ್ತು. ನಾಲ್ಕು ಅಂಕಣಗಳಲ್ಲಿ ಇರುವ ‘ಯಯಾತಿ’ ಮಹತ್ವದ ರಂಗಕೃತಿಗಳಲ್ಲಿ ಒಂದು. ಈ ನಾಟಕದಲ್ಲಿ ಬಳಕೆಯಾದ ಭಾಷೆ ಅದರ ಮಹತ್ವವನ್ನು ಹೆಚ್ಚಿಸಿದೆ.
ಯಯಾತಿ, ಪುರು, ದೇವಯಾನಿ, ಶರ್ಮಿಷ್ಠೆ ಹಾಗೂ ಚಿತ್ರಲೇಖೆ ಈ ನಾಟಕದ ಪ್ರಮುಖ ಪಾತ್ರಗಳು. ಯಯಾತಿ ಮಹಾರಾಜ ತನ್ನ ಈಡೇರಡದ ಕನಸುಗಳನ್ನು ಸಾಕಾರ ಮಾಡಲು ಮಗ ಪುರುವಿನ ಯೌವನ ಪಡೆಯುತ್ತಾನೆ. ತಂದೆಗೆ ತನ್ನ ಯೌವನ ನೀಡಿದ ಪುರುವಿಗೆ ಅಕಾಲ ವೃದ್ಧಾಪ್ಯ. ಪುರುವಿನ ನವಪತ್ನಿ ಚಿತ್ರಲೇಖೆ ಈ ನಾಟಕದ ವಿಶೇಷ-ಜೀವಂತಿಕೆ ಇರುವ ಪಾತ್ರ.
ತರ್ಕದ ಉರುಳಿನಲ್ಲಿ ಯಯಾತಿಯನ್ನು ಕಟ್ಟಿ ಹಾಕುವ ಚಿತ್ರಲೇಖೆಯ ಸ್ವಂತಿಕೆ ಮೆಚ್ಚುಗೆಗೆ ಪಾತ್ರವಾಗದೇ ಇರದು. ಮೊದಲ ಕೃತಿಯಲ್ಲಿಯೇ ಸೊಗಸಾದ ರಂಗಶಿಲ್ಪದ ಆಕೃತಿ ಕಟ್ಟಿಕೊಟ್ಟಿರುವ ಗಿರೀಶ್ ಕಾರ್ನಾಡ್ ಅವರಿಗೆ ಈ ನಾಟಕ ರಚನೆಗೆ ಅಸ್ತಿತ್ವವಾದದ ಪ್ರೇರಣೆ ಆಗಿದೆ. ಪೌರಾಣಿಕ ಕತೆ- ಪಾತ್ರಗಳಿಗೆ ಆಧುನಿಕ-ಸಮಕಾಲೀನತೆಯ ಸ್ಪರ್ಶ ನೀಡಿರುವುದು ಹಾಗೂ ವಿಭಿನ್ನ ಓದಿಗೆ ಅನುವು ಮಾಡಿಕೊಡುವುದು ಈ ನಾಟಕದ ವಿಶೇಷ.

Additional information

Category

Author

Publisher

Language

Kannada

ISBN

81-88478-25-03

Book Format

Ebook

Year Published

2011

Reviews

There are no reviews yet.

Only logged in customers who have purchased this product may leave a review.