Your Cart

Need help? Call +91 9535015489

📖 Print books shipping available only in India. ✈ Flat rate shipping

ಆಕಾಶ ಸೇತುವೆ

H. S. Venkateshamurthy
$0.51

Product details

Category

Poetry

Author

H. S. Venkateshamurthy

Publisher

VIVIDLIPI

Language

Kannada

Book Format

Ebook

Year Published

2016

ಆಕಾಶ ಸೇತುವೆ
(ಟಿಂಟರ್ನ್ ಅಬೆ ಮತ್ತು ಇತರ ಕವನಗಳು )
ಈಚೆಗೆ ಮಲೇಶಿಯಾಕ್ಕೆ ಹೋಗಿದ್ದೆ. ಲಂಕಾವಿ ಮಲೇಶಿಯಾದ ಒಂದು ಸುಂದರ ದ್ವೀಪ. ಪ್ರಕೃತಿಯ ಅಗಾಧತೆಯನ್ನು ಅರಿವಿಗೆ ತಂದುಕೊಳ್ಳಲು ಹೇಳಿ ಮಾಡಿಸಿದ ಜಾಗ. ಅಲ್ಲಿರುವ ಮ್ಯಾತ್ ಮ್ಯಾಂಚಿಂಗ್ ಚಾಂಗ್ ಪರ್ವತ ಶ್ರೇಣಿಯು ನಿಜಕ್ಕೂ ‘ಗಗನಚುಂಬಿ’ ಎಂಬ ಮಾತನ್ನು ನಮ್ಮ ಅನುಬೋಧೆಗೆ ತರುವಂಥದ್ದು. ದಟ್ಟ ಕಾಡಿಂದ ಹಚ್ಚ ಹಸುರಾಗಿ ಕಂಗೊಳಿಸುವ ಆ ನಿತ್ಯ ಹರಿದ್ವರ್ಣ ಪರ್ವತಪಂಕ್ತಿಯಲ್ಲಿ ಅಲ್ಲಲ್ಲಿ ಆಕಾಶಕ್ಕೆ ಎಟಕಾಯಿಸುವ ಮಹೋನ್ನತ ಪರ್ವತ ಶೃಂಗಗಳಿವೆ. ಅಂಥ ಎರಡು ಶೃಂಗಗಳ ನಡುವೆ ಒಂದೇ ಸ್ತಂಭ ತೂಗಿ ಹಿಡಿದಿರುವ, ಪರ್ವತಗಳ ಬಟ್ಟು ಹಾಕಿದ ತೂಗು ಸೇತುವೆಯಿದೆ. ಅದನ್ನು ಅಲ್ಲಿಯ ಜನ ಆಕಾಶ ಸೇತುವೆ ಎನ್ನುತ್ತಾರೆ. ಆ ಆಕಾಶ ಸೇತುವೆ ಒಂದು ಭಾಷೆಯೊಂದಿಗೆ ಮತ್ತೊಂದು ಭಾಷೆಗೆ ಸಂಬಂಧ ಕಲ್ಪಿಸುವ ಅನುವಾದ ಕ್ರಿಯೆಗೆ ಎಷ್ಟು ಚೆನ್ನಾಗಿ ಹೊಂದುತ್ತದೆ ಎನ್ನಿಸಿತು ನನಗೆ!