
ಅಲೆಯ ಆಲಾಪ
G.R.Parimala Rao₹35.00 ₹21.00
Product details
Category | Poetry |
---|---|
Author | G.R.Parimala Rao |
Publisher | VIVIDLIPI |
Language | Kannada |
Book Format | Ebook |
ಅಲೆಯ ಆಲಾಪ
ಕನ್ನಡದಲ್ಲಿ ಇತ್ತೀಚೆಗೆ ಹೇರಳವಾಗಿ ಹನಿಗವನ, ಚುಟುಕುಗಳ ಸಾಹಿತ್ಯ ಸೃಷ್ಟಿಯಾಗಿದೆ. ತ್ರಿಪದಿ , ಮುಕ್ತಕ, ಚೌಪದಿಗಳು ಕೂಡ ಅಷ್ಟ ಜನ ಸಾಮಾನ್ಯರನ್ನು ಆಕರ್ಷಿಸಿದೆ. ಬೃಹತ್ತಾದುದನ್ನು , ಮಹತ್ತಾದದನ್ನು ಕಾಯಿಸಿ ಶೋಧಿಸಿ ಭಟ್ಟಿ ಇಳಿಸಿ ಮೂರು ಹ್ರಸ್ವ ಪಂಕ್ತಿಗಳಲ್ಲಿ ಹೇಳುವ ಯತ್ನಕ್ಕೆ ನನ್ನ ಮನ ಮುದಗೊಂಡಿತು.
ನನ್ನ ಅನುಭವಗಳ, ನೆನಪುಗಳ , ಮನದ ಒಳಪುಗಳ ಸಾರೆಸರ್ವಸ್ವವನ್ನು ಹಿತಮಿತವಾಗಿ ಚಿತ್ರಿಸಲು ಯತ್ನಿಸಿದ್ದೇನೆ. ಪ್ರಾಸ ಎಲ್ಲಿ ಸಹಜವಾಗಿ ಬಂದಿದೆಯೋ ಅಲ್ಲಲ್ಲಿ ಅದನ್ನು ಬರಮಾಡಿಕೊಂಡಿದ್ದೇನೆ.
ಇನ್ನು ಸುಂದರವಾದ ‘ಹೈಕು ಹಂದರದಲ್ಲಿ ಮನವು ವಾಯುವಿಹಾರ ಮಾಡುತ್ತದೆ ಬುವಿಬಾನ ದಾರಿಯಲಿ, ಜಪಾನಿನ ಹೈಕು ಕವಿತೆಗಳು ಮನದ ಅತ್ಯಂತ ಸೂಕ್ಷ್ಮಾತಿ ಸೂಕ್ಷ್ಮಭಾವ ಪ್ರಚೋದಿಸಿ ಭಾವನೆಗೆ ಪ್ರತಿಷ್ಠಾಪನೆಯ ಮಂಟಪವನ್ನು ಕಟ್ಟತ್ತದೆ ಕೇವಲ ಮೂರು ಸಾಲುಗಳಲ್ಲಿ.
ಈ ಪುಸ್ತಕದಲ್ಲಿ ಬರುವ ತ್ರಿಪದಿಗಳು
ಅಲೆಯ ಆಲಾಪ
ಮುಕ್ಕಾಲು ಪದ್ಯಗಳು
ಹೈಕು – ಹಂದರ