
ಬೈಟೂ ಚಹಾ
Shreedevi Keremane₹140.00 ₹84.00
Product details
Category | Poetry |
---|---|
Author | Shreedevi Keremane |
Publisher | VIVIDLIPI |
Language | Kannada |
Book Format | Ebook |
ಒಂದು ಸೃಜನಶೀಲ ಮನಸ್ಸಿನೊಳಗೆ ಒಂದು ಗುಂಗೀಹುಳು ಹೊಕ್ಕುಬಿಟ್ಟರೆ ಏನೆಲ್ಲಾ ಆಗಬಹುದು ಎಂಬುದಕ್ಕೆ ಒಂದು ಸಾಕ್ಷಿ : ಶ್ರೀದೇವಿ ಕೆರೆಮನೆ ಅವರ ಈ ‘ಬೈ-ಟೂ’. ಒಂದು ತುದಿಗೆ ನೀರು, ಇನ್ನೊಂದು ತುದಿಗೆ ಹೆಂಡ-ಇವೆರಡರ ನಡುವೆ ನಿಲ್ಲುವ ‘ಚಹಾ’ಕ್ಕೆ ಒಂದು ದೊಡ್ಡ ಇತಿಹಾಸವೇ ಇದೆ. ಗುಟುಕು ಗುಟುಕು ಚಹಾ ಮೈಯೊಳಗೆ ಇಳಿಯುವುದು ಒಂದು ರೀತಿ; ಚಹಾ ಕಪ್ಪಿನಿಂದ ಹೊರಡುವ ಉಗಿ ಆಕಾಶವನ್ನೇ ಅಡರುವುದು ಮತ್ತೊಂದು ರೀತಿ. ಈ ಎರಡೂ ಅವತಾರಗಳು ಈ ಪದ್ಯಗಳಲ್ಲಿ ಇವೆ. ಇಂಥವಕ್ಕೆ ಹಿನ್ನುಡಿ ಮುನ್ನುಡಿಗಳ ಅಲಂಕಾರ ಬೇಕಾಗಿಲ್ಲ. ಓದಿಯೇ ಅನುಭವಿಸಬೇಕು-ನಾವು ನೀವು.
ಕವನ ಕಟ್ಟುವ ಕಲೆಯನ್ನು ಕರಗತ ಮಾಡಿಕೊಂಡಿರುವ ಕವಿ ಶ್ರೀದೇವಿ ಕೆರೆಮನೆ, ಹೆಣ್ಣಿನ ಒಳಕುದಿತವನ್ನು ತಿಳಿಸಬಲ್ಲ, ಒಂದು ರೂಪಕವನ್ನಾಗಿ ಅವರು ಚಹಾ-ಸಮಾರಾಧನೆಗೆ ವಿಶೇಷ ಧ್ವನಿಯನ್ನು ಒದಗಿಸಿದ್ದಾರೆ. ಚಹಾಕ್ಕೆ ಕಾಫಿಗಿಲ್ಲದ ವಿಶೇಷ ಗುಣವಿದೆ, ಸ್ವಲ್ಪ ಹದ ತಪ್ಪಿದರೂ ಕಾಫಿ ಮುನಿಸಿಕೊಳ್ಳುತ್ತದೆ, ಚಹಾ ಅಡ್ಜಸ್ಟ ಮಾಡಿಕೊಂಡು ಪೊರೆಯುತ್ತದೆ. ಕುದಿಸಿದರೆ ಕಾಫಿ ಕಹಿಯಾಗುತ್ತದೆ. ಚಹಾ ಕುದ್ದಷ್ಟೂ ರಂಗೇರುತ್ತದೆ, ಪರಿಮಳಿಸುತ್ತದೆ, ಗಾಢವಾಗುತ್ತದೆ.
ಶ್ರೀದೇವಿಯವರ ‘ಚಹಾ ಕವಿತೆಗಳು’ ಥೇಟ್ ಹಾಗೆಯೇ, ಓದಿದಷ್ಟೂ ಗುಂಗು ಹಿಡಿಸುತ್ತವೆ.
Customers also liked...
-
Kayyar Kinhanna Rai
₹180.00₹108.00 -
Ninganna Kunti
₹40.00₹24.00 -
G.R.Parimala Rao
₹80.00₹48.00 -
G.R.Parimala Rao
₹50.00₹30.00 -
Shweta Naragund
₹60.00₹36.00 -
Gururaj Siddapur
₹0.00