Ebook

ಡೊಳ್ಳಿನ ಪದಗಳು

Author: S Pinchal Naidu

Original price was: $0.90.Current price is: $0.54.

ಕರ್ನಾಟಕದ ಮೂಲೆ ಮೂಲೆಗಳಲ್ಲೂ, ನೂರಾರು ಬಗೆಯ ವೈವಿಧ್ಯಮಯವಾದ ಜನಪದ ಕಲೆಗಳು ಕಂಡು ಬರುತ್ತವೆ. ಅವುಗಳಲ್ಲಿ ಡೊಳ್ಳಿನ ಕಲೆ ಪ್ರಧಾನವಾದುದು. ಡೊಳ್ಳುಕುಣಿತ ಎನ್ನುವಾಗ ಅದನ್ನು ಆಧರಿಸಿದ ಡೊಳ್ಳಿನ ಪದಗಳೂ ಕೂಡ ಮುಖ್ಯವಾಗುತ್ತವೆ. ಈ ನಿಟ್ಟಿನಲ್ಲಿ ವಿಶೇಷವಾದ ಆಸಕ್ತಿಯನ್ನು ಬಾಲ್ಯದಿಂದಲೆ ರೂಢಿಸಿಕೊಂಡು ಜನಪದ ಕಥೆ, ಕಥನಗೀತೆ, ಪುರಾಣ ಮುಂತಾದವುಗಳನ್ನು ಹಿರಿಯರಿಂದ ಕೇಳಿಸಿಕೊಂಡು, ಹೇಳಿಸಿಕೊಂಡು, ಬೆಳೆದು ಬಂದವರು ಕಪ್ಪನಳ್ಳಿಯ ಎಸ್.

ಪಿಂಚಲ್ ನಾಯ್ಡುರವರು. ಸ್ವತಃ ಡೊಳ್ಳುಕಲಾವಿದರಾದ ಇವರಿಗೆ ‘ಡೊಳ್ಳಿನ ಪದ’ ಹಾಡುವುದು ವರವಾಗಿ ದಕ್ಕಿದೆ. ತಮ್ಮ ನೆನಪಿನ ಉಗ್ರಾಣದಲ್ಲಿರುವ ನೂರಾರು ಡೊಳ್ಳಿನ ಪದಗಳನ್ನು ಹಾಡುವುದು ಇವರಿಗೆ ತಮ್ಮ ತಾಯಿಯವರಿಂದ ಬಂದ ಬಳುವಳಿ. ತಾಯಿಯವರು ಮದುವೆ ಮುಂತಾದ ಮಂಗಳ ಕಾರ್ಯಗಳಲ್ಲಿ ಹಾಡುತ್ತಿದ್ದರು. ತಾಯಿಯವರಿಂದ ಕುಟ್ಟುವ, ಬೀಸುವ ಕೆಲಸಕ್ಕೆ ಸಂಬಂಧಿಸಿದ ಹಾಡುಗಳನ್ನು ಕೇಳುತ್ತಲೇ ಬೆಳೆದ ಶ್ರೀಯುತರಿಗೆ ಪದ ಕಟ್ಟುವ ಹಾಡುವ ಹವ್ಯಾಸ ತಾನೇ ತಾನಾಗಿ ಮೈಗೂಡಿ ಬಂದಿದೆ. ಇದಕ್ಕೆ ಪೂರಕವಾಗಿ ಡೊಳ್ಳಿನ ಕಲೆಯೂ ಸೇರಿಕೊಂಡು ಡೊಳ್ಳಿನ ಪದ ಕಲಿಯಲು, ಕಟ್ಟಲು ಸಾಧ್ಯವಾಗಿದೆ. ಕೇವಲ ಎರಡನೆ ತರಗತಿಯ ಔಪಚಾರಿಕ ಶಿಕ್ಷಣ ಪಡೆದ ಇವರು ತಮ್ಮಲ್ಲಿರುವ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಅನೇಕ ಪದಗಳನ್ನು ಕೇವಲ ನೆನಪಿನ ಶಕ್ತಿಯಿಂದಲೇ ಉಳಿಸಿಕೊಂಡು ಬಂದಿದ್ದಾರೆ.

Additional information

Category

Author

Publisher

Language

Kannada

Book Format

Ebook

Reviews

There are no reviews yet.

Only logged in customers who have purchased this product may leave a review.