
ಹಕ್ಕಿ, ಹಕ್ಕಿ, ನೀ ಛಲೋ ಸಿಕ್ಕಿ
K B Pawar$1.27 $0.74
Product details
Author | K B Pawar |
---|---|
Publisher | Mangala Prakashana |
Book Format | Ebook |
Language | Kannada |
Pages | 120 |
Year Published | 2019 |
Category | Poetry |
ಪವಾರರ ಕವಿತೆಗಳಲ್ಲಿ ಬುದ್ಧಿಯ ಚಮತ್ಕಾರಕಿಂತ ಅಮೂರ್ತ ಭಾವದ ಸಾಕ್ಷಾತ್ಕಾರಕ್ಕೇ ಹೆಚ್ಚು ಒತ್ತು. ಇಲ್ಲಿ ಸಿದ್ಧಾಂತಗಳ ಮಂಡನೆಯಿಲ್ಲ. ಒಣ ಉಪದೇಶಗಳಿಲ್ಲ. ಸಮಾಜವನ್ನು ಪರಿವರ್ತಿಸುತ್ತೇನೆನ್ನುವ ಭ್ರಮೆಯಿಲ್ಲ. ಅನುಭವವನ್ನು ಅನಗತ್ಯ ಸಂಕೀರ್ಣಗೊಳಿಸುವ ವ್ಯರ್ಥ ಪ್ರಯತ್ನವೂ ಇಲ್ಲ. ಪವಾರರ ಇಲ್ಲಿನ ಕವಿತೆಗಳು ಸಹಜವಾಗಿ ಹೂವು ಅರಳಿದಂತೆ ಅರಳಿಕೊಂಡ ಕವಿತೆಗಳಾಗಿವೆ.
ಇಲ್ಲಿನ ಬಹುತೇಕ ಕವಿತೆಗಳು ಸಮಕಾಲೀನ ಸಮಸ್ಯೆಗಳಾದ ನೋಟು ಬ್ಯಾನ, ಜಿಎಸ್ಟಿ, ಅತಿವೃಷ್ಟಿ, ಅನಾವೃಷ್ಟಿ, ಪ್ರಕೃತಿಯ ನಿರ್ದಯ ನಾಶ, ರೈತ ಎದುರಿಸುತ್ತಿರುವ ಸಂಕಷ್ಟಗಳು … ಮೊದಲಾದವುಗಳಿಗೆ ಸೂಕ್ಷ್ಮ ಸಂವೇದನಾಶೀಲ ಮನಸ್ಸೊಂದು ಸ್ಪಂದಿಸಿದಾಗ ಹುಟ್ಟಿಕೊಂಡ ಕವಿತೆಗಳಾಗಿವೆ. ಹಾಗಾಗಿಯೇ ಇಲ್ಲಿ ಬುದ್ಧಿಯ ವಿಜೃಂಭಣೆಯ ಬದಲಾಗಿ ಭಾವದ ಸೂಕ್ಷ್ಮ ಚಿತ್ತಾರಗಳಿವೆ. ಬದುಕಿನ ಲಯವನ್ನು ಕೆಡಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಹುಟ್ಟಿಕೊಂಡ ರಾಜಕೀಯ ವಿಡಂಬನೆಗಳಿವೆ.
ಈ ಸರಣಿ ಆರಂಭವಾಗುವದು “ಕ್ಷಯಿಸಿದ ಕ್ಷತ್ರಿಯ” ಎನ್ನುವ ಕರ್ಣನ ಸ್ವಗತವನ್ನು ನಿರೂಪಿಸುವ ಕವಿತೆಯ ಮೂಲಕ. ದೇಹವೆನ್ನುವ ಬಾಡಿಗೆಯ ಮನೆಯಲ್ಲಿ ವಾಸವಾಗಿರುವ ಆತ್ಮದ ಸ್ವಗತವನ್ನು ಚಿತ್ರಿಸುವ “ಬಾಡಿಗೆ ಮನೆ” ಮತ್ತು “ಚಲನ” ಹಾಗೆಯೆ “ಶೂನ್ಯಾವಲೋಕನ” ಮೊದಲಾದ ಕವಿತೆಗಳು ಈ ಹಂತದ ಗಂಭೀರ ಕವಿತೆಗಳಾಗಿವೆ
Customers also liked...
-
G.R.Parimala Rao
$0.73$0.44 -
Chetan Nagaral
$1.21$0.73 -
Ninganna Kunti
$0.48$0.29 -
Umesh Munavalli
$0.97$0.58 -
H.S.Bhairnatti
$0.73$0.44 -
Shweta Naragund
$0.73$0.44