Sale!

ಝಲಕುಗಳು ( Printbook )

Vishnu Joshi
$0.99

ಝಲಕುಗಳು:

ಝಲಕುಗಳು ಸಾಹಿತ್ಯದ ಒಂದು ಪ್ರಕಾರ. ಅಕಸ್ಮಾತ್ತಾಗಿ ಒಂದು ವಿಚಾರ ಮಿಂಚುವುದಕ್ಕೆ ಝಲಕು ಎಂದು ಕರೆಯುತ್ತಾರೆ. ಕೆಲವೊಂದು ವಿಷಯಗಳನ್ನು ಮೊನಚಾಗಿ ನಿರೂಪಿಸುವುದಕ್ಕೆ ಎರಡು ಸಾಲಿನ ಈ ಝಲಕುಗಳು ತುಂಬಾ ಸಹಾಯಕಾರಿ. ಇವು ಚುಟುಕಿಗಿಂತಲೂ ಸ್ವಲ್ಪ ದೊಡ್ಡದಾಗಿರುತ್ತದೆ. ಎರಡು ಸಾಲಿನ ಪದ್ಯ ಮೊದಲನೆಯ ಸಾಲಿನಲ್ಲಿ ಮುಖ್ಯವಿಷಯ ಇರುತ್ತದೆ. ಆ ವಿಷಯಕ್ಕೆ ಪೂರಕವಾದ ಅಥವಾ ಆಧಾರವಾದ ವಿಷಯ ಎರಡನೇ ಸಾಲಿನಲ್ಲಿ ಇರುತ್ತದೆ. ಎರಡನೆಯ ಸಾಲಿನ ತುದಿಗೆ ಅರ್ಥಸ್ಫೋಟವಾಗಿ ವಿಷಯದ ಗೂಢಾರ್ಥವು ಮಿಂಚು ಹೊಡೆದಂತೆ “ಪ್ಲಾಷ್” ಆಗುತ್ತದೆ. ಇಂದಿನ ದಿನಗಳಲ್ಲಿ ಇಂತಹ ಝಲಕುಗಳು ತುಂಬಾ ಉಪಯುಕ್ತ. ಜನರಿಗೆ ದೀರ್ಘವಾದ ಸಾಹಿತ್ಯವನ್ನು ಓದುವ ವ್ಯವಧಾನವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜೀವನದ ವಿವಿಧ ಕ್ಷೇತ್ರಗಳಲ್ಲಿ ನಡೆಯುತ್ತಿರುವ ವಿಷಯಗಳನ್ನು ವಿಡಂಬಿಸಲು ಈ ಝಲಕುಗಳು ತುಂಬಾ ಸಹಕಾರಿ. ಸಂಸ್ಕೃತದಲ್ಲಿ “ಅನ್ಯೋಕ್ತಿ” ಎನ್ನುವ ಸಾಹಿತ್ಯ ಪ್ರಕಾರವಿದೆ. ಆದರೆ ಅನ್ಯೋಕ್ತಿಯಲ್ಲಿ ನಾಲ್ಕು ಸಾಲಿಗಳು ಇರುತ್ತವೆ. ಈ ಝಲಕುಗಳಲ್ಲಿ ಅಂತ್ಯಪ್ರಾಸವು ಕಡ್ಡಾಯವಾಗಿ ಇರುತ್ತದೆ.

  • Book Format: Printbook
  • Author: Vishnu Joshi
  • Category: Poetry
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.