
ಕೆ.ವಿ. ತಿರುಮಲೇಶ್ ಅವರ ಆಯ್ದ ಕವಿತೆಗಳು
K V Subbanna
$0.91
Product details
Category | Plays |
---|---|
Author | K V Subbanna |
Publisher | Akshara Prakashana |
Language | Kannada |
Book Format | Printbook |
ಕೆ.ವಿ. ತಿರುಮಲೇಶ್ ಅವರ ಆಯ್ದ ಕವಿತೆಗಳು
ಕೆ.ವಿ. ತಿರುಮಲೇಶ್
ಕಾಸರಗೋಡಿನ ಸಮೀಪದ ಹಳ್ಳಿಯಲ್ಲಿ 1940-41ರ ಸುಮಾರಿಗೆ ಜನಿಸಿದ ಕೆ.ವಿ. ತಿರುಮಲೇಶ್ ನೀರ್ಚಾಲು, ಕಾಸರಗೋಡು ಮತ್ತು ತಿರುವನಂತಪುರಗಳಲ್ಲಿ ಅಭ್ಯಾಸ ಮಾಡಿ ಹೈದರಾಬಾದಿನಲ್ಲಿ ಭಾಷಾವಿಜ್ಞಾನಕ್ಕೆ ಸಂಬಂಧಿಸಿದ ಸಂಶೋಧನೆ ನಡೆಸಿದರು. ಬಳಿಕ ಅವರು ಹೈದರಾಬಾದಿನ ಸೆಂಟ್ರಲ್ ಇನ್‍ಸ್ಟಿಟ್ಯೂಟ್ ಆಫ್ ಇಂಗ್ಲಿಷ್ ಎಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಅನೇಕ ವರ್ಷ ಅಧ್ಯಾಪನ ವೃತ್ತಿ ಮಾಡಿದರು; ಅಮೇರಿಕ ಮತ್ತು ಅರೇಬಿಯಾಗಳಲ್ಲೂ ಅವರು ಅಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ‘ಮಹಾಪ್ರಸ್ಥಾನ‘, ‘ಮುಖಾಮುಖಿ‘, ‘ಅವಧ‘, ‘ಪಾಪಿಯೂ‘ ಮೊದಲಾದ ಕವನ ಸಂಕಲನಗಳನ್ನೂ ಹಾಗೂ ‘ನಾಯಕ ಮತ್ತು ಇತರರು‘, ‘ಜಾಗುವಾ ಮತ್ತು ಇತರರು‘, ‘ಕಳ್ಳಿಗಿಡದ ಹೂ‘ ಮೊದಲಾದ ಕಥಾಸಂಕಲನಗಳನ್ನೂ ಇವರು ಪ್ರಕಟಿಸಿದ್ದಾರೆ. ‘ಅಸ್ತಿತ್ವವಾದ‘, ‘ಸಮ್ಮುಖ‘, ‘ಉಲ್ಲೇಖ‘ – ಇವರ ವಿಮರ್ಶಾ ಸಂಕಲನಗಳು. ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕೇರಳದ ಕುಮಾರನ್ ಆಶಾನ್ ಪ್ರತಿಷ್ಠಾನದ ಪ್ರಶಸ್ತಿಗಳು ಇವರಿಗೆ ಬಂದಿವೆ. ಪ್ರಸ್ತುತ ತಿರುಮಲೇಶ್ ನಿವೃತ್ತರಾಗಿ ಹೈದರಾಬಾದಿನಲ್ಲಿ ನೆಲೆಸಿದ್ದಾರೆ.
ಕವನ ಸಂಕಲನ:
ಮುಖವಾಡಗಳು
ವಠಾರ
ಮಹಾಪ್ರಸ್ಥಾನ
ಮುಖಾಮುಖಿ
ಅವಧ
ಪಾಪಿಯೂ
ಕಥಾಸಂಕಲನ:
ನಾಯಕ ಮತ್ತು ಇತರರು
ಜಾಗುವಾ ಮತ್ತು ಇತರರು
ಕಳ್ಳಗಿಡದ ಹೂ
ಪ್ರಬಂಧ/ವಿಚಾರ:
ಅಸ್ತಿತ್ವವಾದ
ಸಮ್ಮುಖ
ಕಾವ್ಯಕಾರಣ
ಉಲ್ಲೇಖ