
ಕಾನನದ ಸುಮ
Umesh Munavalli$1.21 $0.73
Product details
Category | Poetry |
---|---|
Author | Umesh Munavalli |
Publisher | VIVIDLIPI |
Language | Kannada |
Book Format | Ebook |
‘ಕಾನನದ ಸುಮ’ ಒಂದು ಹೊಸ ವಿಚಾರಧಾರೆಗಳ ಸಂಗಮ. ಬಹುತೇಕ ಇಲ್ಲಿಯ ಕವಿತೆಗಳು ಪ್ರೀತಿ, ಪ್ರೇಮ, ಪ್ರಣಯ, ವಿರಹ, ಪಾರಮಾರ್ಥ ಈ ಎಲ್ಲಾ ವಿಷಯಗಳನ್ನು ಒಳಗೊಂಡು ವಿಶಿಷ್ಟ ಆಕರ್ಷಣೆ ಹೊಂದಿವೆ ಅಲ್ಲದೇ ಹೊಸ ವಿಚಾರಧಾರೆಗೆ ನಮ್ಮನ್ನು ಕೊಂಡೊಯ್ಯುತ್ತವೆ. ‘ನಾನೇ ಕೃಷ್ಣ, ನಾನೇ ರಾಧಾ’ ಈ ಕವಿತೆಯಲ್ಲಿ, ಕವಿ ಭೌತಿಕ ಅಂಶಗಳನ್ನು ಹಾಗೂ ಆಧ್ಯಾತ್ಮಿಕ ಅಂಶಗಳನ್ನು ಹೋಲಿಸಿ ಪ್ರಸ್ತುತಪಡಿಸಿದ್ದು ಅತ್ಯಂತ ವಿಶಿಷ್ಟ. ‘ಕನ್ನಡಿ’ ಎನ್ನುವ ಪದ್ಯದಲ್ಲಿ ಕನ್ನಡಿಯನ್ನು ವಾಸ್ತವ ಬಿಂಬಿಸುವ ನಿಜ ಗೆಳೆಯನ ಸಂಕೇತವಾಗಿ ಬಳಸಿದ್ದಾರೆ. ‘ವ್ಯಕ್ತ-ಅವ್ಯಕ್ತ’ ಇಲ್ಲಿ ಅವ್ಯಕ್ತವಾದ ಪ್ರೀತಿಯನ್ನು ಹೇಗೆ ವ್ಯಕ್ತವಾದ ವಸ್ತುಗಳಿಂದ ಪ್ರಸ್ತುತಪಡಿಸಲು ಸಾಧ್ಯ ಎನ್ನುವುದನ್ನು ತೋರಿಸುತ್ತದೆ. ಅನೇಕ ಕವಿತೆಗಳನ್ನು ನೋಡಿದಾಗ ಕವಿ, ಪರಕಾಯ ಪ್ರವೇಶ (Trans mood) ಮಾಡಿ ಕವಿತೆಗಳನ್ನು ಬರೆದ ರೀತಿಯಲ್ಲಿ ಕಾಣುತ್ತದೆ. ಇಲ್ಲಿ ಪ್ರತಿಯೊಂದು ಕವಿತೆಯೂ ಒಂದೊಂದು ವಿಶಿಷ್ಟತೆಯನ್ನು ಹೊಂದಿವೆ. ಎಲ್ಲ ತರಹದ ಓದುಗರನ್ನೂ ಅವು ತಲುಪುತ್ತವೆ, ಹೊಸ ವಿಚಾರಕ್ಕೆ ದಾರಿ ಮಾಡಿಕೊಡುತ್ತವೆ.