Ebook

ರೆಡ್ ಲೈಟ್ ಮತ್ತಿತರ ಕವನಗಳು

Author: Nalina D

Original price was: $0.84.Current price is: $0.50.

ರೆಡ್ ಲೈಟ್ ಮತ್ತಿತರ ಕವನಗಳು’ ಕವನಸಂಕಲನವು ನಳಿನ ಡಿ. ಅವರ ಪ್ರಥಮ ಸಂಕಲನ.

ರೆಡ್ ಲೈಟ್ ಮತ್ತಿತರ ಕವನಗಳು’ ಕವನಸಂಕಲನವು ನಳಿನ ಡಿ. ಅವರ ಪ್ರಥಮ ಸಂಕಲನ. ವಿಶೇಷವೆಂದರೆ ಹರೆಯದ ಉನ್ಮಾದವಾಗಲಿ,ನಿರರ್ಥಕ ಆವೇಶದ ಅತ್ಯುತ್ಸಾಹವಾಗಲೀ ಇವರ ರಚನೆಗಳಲ್ಲಿಲ್ಲ. ಅದಕ್ಕಿಂತ ಭಿನ್ನವಾಗಿ ಬದುಕಿನಲ್ಲಿ ಜರುಗಿದ ಘಟನೆಗಳನ್ನು ತಮ್ಮ ಅವಲೋಕನಕ್ಕೆ ತಂದುಕೊಂಡು ಸ್ವವಿಮರ್ಶೆಯ ಮುಖೇನ ಅವುಗಳ ಬಗ್ಗೆ ಚಿಂತಿಸುವ ಕ್ರಮ ವಿಸ್ಮಯ ಹುಟ್ಟಿಸುತ್ತದೆ. ಪ್ರಧಾನವಾಗಿ ಇಲ್ಲಿನ ವಸ್ತು ಗಂಡು-ಹೆಣ್ಣಿನ ಸಹಚರ್ಯಕ್ಕೆ ಸಂಬಂಧಿಸಿದಂತೆ ಬೆಳೆದವುಗಳೇ ಆಗಿವೆ. ಆದರೆ ಇಲ್ಲಿನ ಸಾಹಚರ್ಯವೆಂಬುದು ಇಬ್ಬರ ನಡುವೆ ನಡೆದ ಸ್ನೇಹವೂ ಆಗಿದೆ, ಪ್ರೇಮವೂ ಆಗಿದೆ. ಆಕರ್ಷಣೆ, ವಿಕರ್ಷಣೆಗಳ ಸಂಘರ್ಷವೂ ಆಗಿದೆ. ಹೀಗಾಗಿ ಇಲ್ಲಿ ಭಾವುಕ ಬೊಬ್ಬೆಗಿಂತ ಭಾವನಾತ್ಮಕ ಆಪ್ತತೆಯ ನಿರೀಕ್ಷೆ ಎಲ್ಲ ಕವನಗಳ ಹುಡುಕಾಟವಾಗಿದೆ. ಒಮ್ಮೆ ದಾಂಪತ್ಯದ ಗೀತೆಗಳಂತೆ ಕೇಳಿಸುವ ಕವನಗಳಲ್ಲಿ ಉತ್ಕಟ ಪ್ರೀತಿಯ ಪೊಸೆಸಿವ್ನೆಸ್ ಕಾಣಿಸುತ್ತದೆ. ಅದರ ಮರುಕ್ಷಣವೇ ನಿಷ್ಠೆಯನ್ನು ಅನುಮಾನಿಸಿದ ಅಥವಾ ನಂಬಿಕೆಯನ್ನು ಕಳೆದುಕೊಂಡ ನೆಲೆಯಲ್ಲಿನ ಸಂಕಟ ಉದ್ಭುದ್ಧವಾಗುತ್ತದೆ. ಅಂಥ ಕಡೆಯಲ್ಲೆಲ್ಲ ಸಹಜವಾಗಿ ಸಿಟ್ಟು, ತಿರಸ್ಕಾರದ ನುಡಿಗಳು ಹೇಳಿಕೆಯ ರೂಪದಲ್ಲಿ ಹರಿದಾಡುತ್ತವೆ. ಆದರೆ ಅದರೊಳಗೆ ವಿರಹಿಣಿಯೊಬ್ಬಳ ಸಂಕಟ ಜೀವರಸವಾಗಿ ಹರಿದಿರುವುದು ಕಾಣಿಸುತ್ತದೆ. ಇಲ್ಲಿ ಹೆಣ್ಣಿನ ನಿಷ್ಠೆ ಯಾವುದೇ ಅಡ್ಡಿಯಿಲ್ಲದಂತೆ ಒಪ್ಪಿಸಿಕೊಂಡ ಸಮರ್ಪಣೆಯ ನೆಲೆಯಲ್ಲಿ ನಿಂತದ್ದಾದರೆ ಅದಕ್ಕೆ ಎದುರಾಗಿ ಅದಕ್ಕೆ ವಂಚನೆಗೈದ ಗಂಡಿನ ಚಾಳಿ ಪ್ರಶ್ನೆಗೆ ಒಳಗಾಗುತ್ತಾ ಬೆಳೆಯುತ್ತದೆ. ಈ ಭಾವ ಬಹುತೇಕ ರಚನೆಗಳಲ್ಲಿ ಮತ್ತೆ ಅನುರಣಿಸುವ ವಸ್ತುದನಿಯಾಗಿದೆ.

Additional information

Author

Publisher

Book Format

Ebook

Pages

96

Year Published

2013

Category

Reviews

There are no reviews yet.

Only logged in customers who have purchased this product may leave a review.