Your Cart

Need help? Call +91 9535015489

📖 Print books shipping available only in India. ✈ Flat rate shipping

ಶಾಂತಿ ಬೀಜಗಳ ಜತನ

Prakash Khade
$1.16

Product details

Book Format

Printbook

Author

Prakash Khade

Category

Poetry

Language

Kannada

Publisher

Yaji Prakashana

ಇಲ್ಲಿಯ ಕವನಗಳಿಗೆ ಶೀರ್ಷಿಕೆ ಇಲ್ಲ, ಒಂದೇ ಪ್ರವಾಹದ ಅನೇಕ ಅಲೆಗಳಂತೆ ಈ ರಚನೆಗಳು ಕಾಣುತ್ತವೆ, ಕೇಳಿಸುತ್ತವೆ. ಆದರೆ ಒಂದು ನಿಟ್ಟಿನಿಂದ ನೋಡಿದರೆ ಇಲ್ಲಿ ಒಳ ವಿನ್ಯಾಸಗಳ ವೈವಿಧ್ಯತೆಯೂ ಇದೆ. ಹೀಗಾಗಿ ಏಕತಾನದ ಬೇಸರವಿಲ್ಲ.
ಒಂದು ಪುಟ ಮೀರದ ಈ ಕವನಗಳ ಪರಿ ಇದು;  ಲಯಬದ್ಧವಾಗಿ ಹೇಳಿಕೆಗಳ ಕ್ರಮ, ನಂತರ ಒಂದು ತಿರುವು ಮತ್ತು ಕೊನೆ. ಈ ಕೊನೆಯ ನಂತರ ಮತ್ತೇ ಮೊದಲ ಸಾಲಿಗೇ ಮರಳಬೇಕು- ಮತ್ತೊಂದು ಅರ್ಥಕ್ಕಾಗಿ. ೧೨ನೇ ಶತಮಾನದ ವಚನಗಳಲ್ಲಿ ಇಂಥ ವಿನ್ಯಾಸ ನಮಗೆ ಪರಿಚಿತವೇ. ಮಾದರಿಗಾಗಿ ಈ ಕವನ ನೋಡಿ..
ಕಿತ್ತು ಹಾಕಿದ್ದೇನೆ
ಒಂದಿಷ್ಟು ಕಸವನ್ನು
ಭೂತಾಯಿಗೆ ಒಳಿತಾಗಲೆಂದು.
ಕಿತ್ತು ಹಾಕಿದ್ದೇನೆ
ಒಂದಿಷ್ಟು ಕನಸುಗಳನ್ನು
ಸವಿ ನಿದ್ದೆಗೆ ಭಂಗಬಾರದಿರಲೆಂದು,
ಕಿತ್ತಷ್ಟು ಬೆಳೆವ ಕಸಕ್ಕೆ
ಹೇಳದೆ ಬರುವ ಕನಸಿಗೆ
ತೆರೆದಷ್ಟು ಆಕಾಶ, ಉಳಿದಷ್ಟು ಪ್ರಕಾಶ.
ಈ ರಚನೆಗಳಲ್ಲಿ ‘ನಾನು’ ಎಂಬುದೇ ಮುಖ್ಯ ದನಿಯಾಗಿದ್ದರೂ, ನಾವು-ಅವನು-ಅವರು-ಅವಳು-ನೀವು ಹೀಗೆ ಎಲ್ಲ ಸರ್ವನಾಮಗಳೂ ಅವತರಿಸಿ ಒಂದು ಬಗೆಯ ಸಾರ್ವಕಾಲಿಕತೆ ವ್ಯಾಪಿಸಿಕೊಂಡಂತಿದೆ. ಪ್ರಕಾಶ ಖಾಡೆ ಮೂರ್ತ ಅನುಭವ ದಾಟಿ ಅಮೂರ್ತ ಅನುಭಾವದೆಡೆಗೆ ಸಾಗುತ್ತಿರಬಹುದೇ? ಎಂಬ ನಿರೀಕ್ಷೆ! ಆತಂಕ ನನ್ನದು. ಕೊನೆಯ ಎರಡು ಕವನಗಳಲ್ಲಿ ಬರುವ ಕಲಬುರ್ಗಿ ಸರ್ ಮತ್ತು ಸಾಲು ಮರದ ತಿಮ್ಮಕ್ಕ- ನಮ್ಮನ್ನು ಮತ್ತೆ ಭೂಮಿಯ ಕಡೆಗೆ ಕರೆದುಕೊಂಡು ಬರುವಂಥವು.