Your Cart

Need help? Call +91 9535015489

📖 Print books shipping available only in India. ✈ Flat rate shipping

ಮನುಷ್ಯರ ಮನಸ್ಸು ಮತ್ತು ಸ್ವಭಾವಗಳು ಭಾಗ-1

Girimane Shyamarao
$0.87

Product details

Author

Girimane Shyamarao

Publisher

Girimane prakashana

Book Format

Ebook

Language

Kannada

Pages

174

Year Published

2021

Category

Psychology

ಶ್ರೀ ಗಿರಿಮನೆ ಶ್ಯಾಮರಾವ್ ಅವರ ಚಿಂತನೆ-ಅನುಭವ- ಜೀವನ ಪ್ರೀತಿಯಿಂದ ಮೂಡಿ ಬಂದಿರುವ `ಮನುಷ್ಯರ ಮನಸ್ಸು ಮತ್ತು ಸ್ವಭಾವಗಳು’ ಒಂದು ವಿಶಿಷ್ಟ ಕೃತಿ. ಸಣ್ಣ ಸಣ್ಣ ಅಧ್ಯಾಯಗಳಲ್ಲಿ ಅವರು ಮನುಷ್ಯರ ಮಾತು, ವರ್ತನೆ, ನಂಬಿಕೆ, ಧೋರಣೆ, ಯಾವುದೇ ವಿಷಯ/ವಸ್ತು/ ಸಂದರ್ಭದಲ್ಲಿ ಅವರ ಪ್ರತಿಕ್ರಿಯೆಗಳು, ಅವರ ಭಾವನೆಗಳು, ಅವರ ತಪ್ಪು-ಒಪ್ಪುಗಳು, ಬಲಾಬಲಗಳು, ಸಾಮರ್ಥ್ಯ-ದೌರ್ಬಲ್ಯಗಳನ್ನು ಅನಾವರಣ ಮಾಡಿದ್ದಾರೆ. ಇದು ಸರಿಯೇ? ನಾವು ಹೀಗೆ ಮಾಡಬೇಕೆ? ಅಥವಾ ನಾವು ಹೀಗೇಕೆ ಮಾಡಬಾರದು? ನಮ್ಮ ನಡೆ-ನುಡಿ, ಕ್ರಿಯೆ-ಪ್ರಕ್ರಿಯೆಗಳನ್ನು ಸುಧಾರಿಸಿಕೊಳ್ಳಬಾರದು? ನಮ್ಮ ವ್ಯಕ್ತಿತ್ವವನ್ನು ಉತ್ತಮಪಡಿಸಿಕೊಳ್ಳಬಾರದು? ಎಂದು ಓದುಗರನ್ನು ಕೇಳುತ್ತಾರೆ. ಚಿಂತನೆ, ಸ್ವಾಭಿಮಾನ, ಭಾಷೆ, ಮಾತು, ದಾನ, ದಯೆ, ಮತ್ಸರ, ಕೋಪ, ದುಃಖ, ಭಯ, ಹಸಿವು, ಕಾಮ, ತರ್ಕ, ಮುಗ್ಧತೆ, ಅಳು, ನಗು, ಕೀಳರಿಮೆ, ಮೇಲರಿಮೆ, ಗೆಳೆತನ, ಶತ್ರುಭಾವ, ಆತ್ಮಸಾಕ್ಷಿ, ಸತ್ಯ-ಸುಳ್ಳು, ಯೋಚನೆ, ವಿವೇಚನೆ, ಕೃತಜ್ಞತೆ-ಕೃತಘ್ನತೆ, ಪ್ರಾಮಾಣಿಕತೆ-ಮೋಸ, ವಂಚನೆ, ಸಣ್ಣತನ, ದೊಡ್ಡತನ, ಶಿಕ್ಷೆ-ಕ್ಷಮೆ, ಮಾನ-ಅಪಮಾನ, ಪ್ರೀತಿ-ದ್ವೇಷ, ಟೀಕೆ-ಮೆಚ್ಚುಗೆ, ಪೂರ್ವಾಗ್ರಹ, ದುರಾಗ್ರಹ, ಆಚಾರ-ಅನಾಚಾರ, ಹಾದರ, ಜ್ಞಾನ-ಅಜ್ಞಾನ, ನಂಬಿಕೆ-ಮೂಢನಂಬಿಕೆ, ಶ್ರದ್ಧೆ-ಅಂಧಶ್ರದ್ಧೆ, ಒಳ್ಳೆಯದು-ಕೆಟ್ಟದ್ದು, ಹತ್ಯೆ-ಆತ್ಮಹತ್ಯೆ, ಸ್ವಾರ್ಥ-ನಿಸ್ವಾರ್ಥ, ವ್ಯಾಪಾರ-ವ್ಯವಹಾರ, ಒತ್ತಡ, ಸೋಲು, ಗೆಲುವು, ವೃತ್ತಿ-ಪ್ರವೃತ್ತಿ, ಹೀಗೇ ನೂರಾರು ವಿಷಯಗಳನ್ನು ನಮ್ಮ ಮುಂದೆ ಇಟ್ಟಿದ್ದಾರೆ. ಕನ್ನಡಿ ಕೊಟ್ಟು `ನಿಮ್ಮ ಮುಖ ನೋಡಿಕೊಳ್ಳಿ. ನಿಮ್ಮ ಮಾತು-ವರ್ತನೆಯ ದರ್ಶನ ಮಾಡಿ’ ಎಂದಿದ್ದಾರೆ. `ನಿಮ್ಮ ಡೊಂಕನ್ನು ನೀವೇ ತಿದ್ದಿಕೊಳ್ಳಿ’ ಎಂದು ಆಪ್ತ ಸ್ನೇಹಿತರಂತೆ ಬರೆದಿದ್ದಾರೆ. ಸ್ವಲ್ಪವೂ ಕಷ್ಟ-ಆಯಾಸ ಕೊಡದ ಬರವಣಿಗೆ. ನಮ್ಮನ್ನು ಚಿಂತನೆಗೆ ಹಚ್ಚುವ ವಿಚಾರಗಳು. ನಮ್ಮ ವ್ಯಕ್ತಿತ್ವವನ್ನು ಸುಧಾರಿಕೊಳ್ಳುವ ವಿಧಾನಗಳು. ಪ್ರತಿಯೊಬ್ಬ ವಿದ್ಯಾರ್ಥಿ, ಶಿಕ್ಷಕ, ಪಾಲಕ, ಪೋಷಕ, ನಾಗರಿಕ ಓದಬೇಕಾದ ಪುಸ್ತಕ. ಶ್ರೀ ಶ್ಯಾಮರಾವ್ ಅವರನ್ನು ನಾನು ಹೃತ್ಪೂರ್ವಕ ಅಭಿನಂದಿಸುತ್ತೇನೆ. ಪುಸ್ತಕವನ್ನು ಓದಿದ ನೀವೂ ಅವರನ್ನು ಅಭಿನಂದಿಸದೇ ಇರಲಾರಿರಿ.
ಡಾ|| ಸಿ.ಆರ್.ಚಂದ್ರಶೇಖರ್
ಮನೋವೈದ್ಯರು, ನಿಮ್ಹಾನ್ಸ್, ಬೆಂಗಳೂರು.