
ಮನುಷ್ಯರ ಮನಸ್ಸು ಮತ್ತು ಸ್ವಭಾವಗಳು: ಭಾಗ 2
Girimane Shyamarao$1.45 $0.87
Product details
Category | Psychology |
---|---|
Author | Girimane Shyamarao |
Publisher | Girimane prakashana |
Book Format | Ebook |
Pages | 176 |
Language | Kannada |
Year Published | 2011 |
`ಮನುಷ್ಯರ ಮನಸ್ಸು ಮತ್ತು ಸ್ವಭಾವಗಳು’ ಎರಡನೆಯ ಭಾಗ.ಮನಸ್ಸೇ ಎಲ್ಲದಕ್ಕೂ ಮೂಲ. ನಮಗೆ ಬೇಕಾದ ಶಾಂತಿ, ಸಮಾಧಾನ, ನೆಮ್ಮದಿ, ಸುಖ ಎಲ್ಲವೂ ಸಿಗುವುದು ಮನಸ್ಸನ್ನು ಸುಸ್ಥಿತಿಯಲ್ಲಿಟ್ಟುಕೊಂಡರೆ ಮಾತ್ರ. ಅದರಿಂದಲೇ ದೈಹಿಕ ಆರೋಗ್ಯವೂ! ಅಷ್ಟೇ ಅಲ್ಲ; ನಮ್ಮ ಮನಸ್ಸು ಸುಸ್ಥಿತಿಯಲ್ಲಿದ್ದರೆ ಸಮಾಜದ ಆರೋಗ್ಯವೂ ಸುಧಾರಿಸುತ್ತದೆ. ಸಮಾಜದಿಂದಲೂ ಅದು ನಮಗೆ ತಿರುಗಿ ಬರುತ್ತದೆ. ಆ ರೀತಿ ಮನಸ್ಸನ್ನು ಸುಸ್ಥಿತಿಯಲ್ಲಿಡಬೇಕಾದರೆ ಅದರ ಬಗ್ಗೆ ತಿಳಿದಿರಬೇಕು. ನಮ್ಮ ಸಂಪರ್ಕಕ್ಕೆ ಬರುವ ಇತರರ ಮನಸ್ಸೂ ಹೇಗೆ ಕೆಲಸಮಾಡುತ್ತದೆ ಅದಕ್ಕೆ ಕಾರಣವೇನು? ಎಲ್ಲವನ್ನೂ ತಿಳಿದಿದ್ದರೆ ಅದು ಸುಲಭ ಸಾಧ್ಯ. ನಾವು ಬಹಳಷ್ಟು ಕಾಯಿಲೆಗಳಿಗೆ ದೈಹಿಕ ವೈದ್ಯರನ್ನು ಭೇಟಿಮಾಡುತ್ತೇವೆ. ಆದರೆ ಅದಕ್ಕಿಂತ ಮುಖ್ಯವಾಗಿ ಮಾನಸಿಕ ವೈದ್ಯರನ್ನು ಭೇಟಿ ಮಾಡಲು ಹಿಂಜರಿಯುತ್ತೇವೆ. ನಮ್ಮ ದೈಹಿಕ ಕಾಯಿಲೆಗಳಿಗೂ ಮನಸ್ಸಿಗೂ ಇರುವ ಸಂಬಂಧಗಳ ಬಗ್ಗೆ ನಮಗೆ ತಿಳಿಯದೆ ಇರುವುದೇ ಅದಕ್ಕೆ ಕಾರಣ. ಅದಕ್ಕಿಂತ ಮುಖ್ಯವಾಗಿ ಮನುಷ್ಯರ ಮನಸ್ಸು ಮತ್ತು ಸ್ವಭಾವಗಳ ಬಗ್ಗೆ ತಿಳಿದಿದ್ದರೆ ನಮ್ಮ ಮನಸ್ಸನ್ನೇ ಕೆಡಿಸಿಕೊಳ್ಳದೆ ಇರಲು ಸಾಧ್ಯ. ಅಷ್ಟಾದರೆ ಎಲ್ಲವೂ ಸಾಧ್ಯ!
ನಾವು ಮಾಡಿದ್ದೆಲ್ಲಾ ನಮಗೆ ಸರಿ ಎನಿಸಿರುತ್ತದೆ. ನಾವೆಷ್ಟೇ ಚೆನ್ನಾಗಿ ಹೊಂದಿಕೊಂಡು ಹೋಗುತ್ತಿದ್ದೇವೆ ಎಂದುಕೊಂಡರೂ ನಮ್ಮದೂ ತಪ್ಪಾಗಿರುತ್ತದೆ. ಆದರೆ ಇನ್ನೊಬ್ಬರಲ್ಲಿ ಅದು ಎದ್ದು ಕಾಣುತ್ತದೆ. ಅವರೆಷ್ಟೇ ಒಳ್ಳೆಯವರಾಗಿದ್ದರೂ ನಮ್ಮ ಮನಸ್ಸಿನಲ್ಲಿ ಒಂದು ಪರದೆ ಹಾಕಿಕೊಂಡು ನೋಡಿದಾಗ ಅವರು ಕೆಟ್ಟವರು ಎಂಬಂತೆ ಕಾಣುತ್ತದೆ. ನಮಗೊಪ್ಪಿಗೆಯಾದ ಕಾರಣಕ್ಕೆ ಇನ್ಯಾರನ್ನೋ ಒಳ್ಳೆಯವರೆಂದು ಹೊಗಳಲು ಶುರುಮಾಡುತ್ತೇವೆ. ಯಾವುದು ಸರಿ ಎಂದು ತಿಳಿಯುವ ಗೋಜಿಗೇ ಹೋಗದೆ ಇಂಥದ್ದನ್ನೆಲ್ಲಾ ಶ್ರದ್ಧೆಯಿಂದ ಮಾಡುತ್ತೇವೆ. ನಮಗಿರುವ ಬುದ್ಧಿವಂತಿಕೆಯಿಂದಲೇ ಒಮ್ಮೆ ಕುಳಿತು ವಿಚಾರ ಮಾಡಿದರೆ ಬಹಳಷ್ಟು ನಮಗೇ ಅರಿವಾಗುತ್ತದೆ. ನಮಗೆ ಕೇಡು ಮಾಡುವ, ನಮ್ಮೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುವ, ಅಸಹನೆಯಿಂದ ವರ್ತಿಸುವ, ನಮ್ಮ ಏಳಿಗೆ ಕಂಡಾಗ ಅಸೂಯೆ ಪಡುವವರನ್ನೆಲ್ಲಾ ಕಂಡಾಗ ಕೋಪ ಬರುತ್ತದೆ. ಆದರೆ ಅವರೇಕೆ ಹಾಗೆ ಮಾಡುತ್ತಾರೆ?’ ಎಂಬ ವಿಚಾರವಂತಿಕೆ ಕೋಪದ ತೀವ್ರತೆಯನ್ನು ಕಮ್ಮಿ ಮಾಡುತ್ತದೆ. ಅಸೂಯೆ ಎನ್ನುವುದು ಹೇಗೆ ಅವರನ್ನೇ ಸುಡುತ್ತದೆ ಎನ್ನುವುದು ತಿಳಿದಾಗ ಖಂಡಿತಾ ಕೋಪದ ಜಾಗದಲ್ಲಿ ಸ್ವಲ್ಪ ಅನುಕಂಪ ಮೂಡುತ್ತದೆ. ಎಲ್ಲಾ ವಿಕೃತ ಮನಸ್ಸುಗಳ ಹಿಂದೂ ಒಂದು ಕತೆಯಿರುತ್ತದೆ; ಮತ್ತು ಆ ಕತೆಗೆ ಕಾರಣವಿರುತ್ತದೆ. ಅದೆಲ್ಲದರ ಅರಿವಿದ್ದರೆ ನಮ್ಮ ಕೋಪ-ತಾಪ, ದು:ಖ-ಸಂಕಟಗಳಿಗೂ ಕಡಿವಾಣ ಹಾಕಿಕೊಳ್ಳಬಹುದು. ಅವರು ಕೆಡುಕು ಮಾಡಿದಾಗ, ನಮ್ಮನ್ನು ತೆಗಳಿದಾಗ ಮನಸ್ಸು ಕೆಡಿಸಿಕೊಳ್ಳದೆ ಹೊಗಳಿದಾಗ ಉಬ್ಬದೆ, ಅಸೂಯೆಯಿಂದ ವರ್ತಿಸಿದಾಗ ನಾವು ಅದನ್ನು ಹೇಗೆ ಸ್ವೀಕರಿಸಬೇಕು ಎನ್ನುವುದನ್ನು ಅರಿತಿದಿದ್ದರೆ ನಿಜಕ್ಕೂ ನಮ್ಮ ಮನಸ್ಸಿನ ನೆಮ್ಮದಿಯನ್ನು ಕಾಪಾಡಿಕೊಳ್ಳಬಹುದು.
Customers also liked...
-
Girish Karnad
$0.97$0.58 -
Girish Karnad
$0.60$0.36 -
U.R. Ananthamurthy
$2.90$2.32 -
Akshara K V
$5.00 -
Vivek Shanbhag
$8.00 -
Akshara K V
$5.00